ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಆಹಾರ ಹುಡುಕಾಟಕ್ಕೊಬ್ಬ ನಂಟ ‘ಗಾಟ್‌ ಟೇಬಲ್‌’ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಟ್‌ ಟೇಬಲ್‌ (GotTable) ಎನ್ನುವ ಆಹಾರ ತಾಣಗಳ ಹುಡುಕಾಟದ ಆ್ಯಪ್‌ ಇದೀಗ ಬಿಡುಗಡೆಯಾಗಿದೆ. ಇದು ನೀವಿರುವ ಜಾಗಕ್ಕೆ ಅಥವಾ ನೀವು ಹೋದಲ್ಲೆಲ್ಲ ಹತ್ತಿರದ ಆಹಾರತಾಣಗಳ ಸಂಪೂರ್ಣ ಪಟ್ಟಿ ನೀಡುತ್ತದೆ. ಅಷ್ಟೇ ಅಲ್ಲ ಆಯಾ ರೆಸ್ಟೊರೆಂಟ್‌ಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಊಟದ ವಿಶೇಷ ಮೆನ್ಯು, ಆಫರ್‌ಗಳು ಮತ್ತು ಸೀಟ್‌ ಬುಕಿಂಗ್‌ ಆಪ್ಷನ್‌ ನೀಡುತ್ತದೆ. ಒಂದು ಕ್ಲಿಕ್‌ ಮಾಡುವ ಮೂಲಕ ರೆಸ್ಟೊರೆಂಟ್‌, ಖಾದ್ಯ ಮತ್ತು ಸೀಟ್‌ ಆಯ್ಕೆ ಮಾಡಿಕೊಳ್ಳಬಹುದು. ಆಫರ್‌ಗಳನ್ನು ಎಂಜಾಯ್‌ ಮಾಡಬಹುದು.

ಆ್ಯಪ್‌ ಓಪನ್‌ ಆಗುತ್ತಿದ್ದಂತೆ ಐದು ಬಣ್ಣದ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಆಕಾಶಬಣ್ಣದ ಪಟ್ಟಿ– ರೆಸ್ಟೊರೆಂಟ್‌ಗಳ ಮಾಹಿತಿ, ಕೆಂಪು ಪಟ್ಟಿ– ಅಂದಿನ ಆಫರ್‌ಗಳು, ಹಸಿರು– ನಿಮ್ಮ ಮೂಡ್‌ಗೆ ತಕ್ಕ ಖಾದ್ಯಗಳ ವಿವರ, ಹಳದಿ– ವಿಶೇಷ ಆಪರ್‌ಗಳು ಮತ್ತು ಕೊನೆಯ ನೀಲಿ ಪಟ್ಟಿಯಲ್ಲಿ ಮ್ಯಾಪ್‌ ಸೌಲಭ್ಯ ನೀಡಲಾಗಿದೆ.

ಮೊದಲ ಎರಡೂ ಪಟ್ಟಿಯಲ್ಲಿ ರೆಸ್ಟೊರೆಂಟ್‌ಗಳ ಚಿತ್ರದ ಜೊತೆಗೆ ಆಫರ್‌ ಮತ್ತು ಬುಕ್‌ ನೌ ಆಪ್ಷನ್‌ ನೀಡಲಾಗಿದೆ. ಹಸಿರು ಪಟ್ಟಿ ಒತ್ತಿದರೆ ನಾರ್ತ್‌ ಇಂಡಿಯನ್‌, ಸೌತ್‌ ಇಂಡಿಯನ್‌, ರೀಜನಲ್‌ ಮತ್ತು ಇಂಟರ್‌ನ್ಯಾಷನಲ್‌ ಎನ್ನುವ ಸಬ್‌ ಆಪ್ಷನ್‌ಗಳನ್ನು ನೀಡಲಾಗಿದೆ. ಇವುಗಳನ್ನು ಆಯ್ಕೆ ಮಾಡಿದರೆ ನಿಮ್ಮ ಟೇಸ್ಟ್‌ ಮತ್ತು ಆಯ್ಕೆಗೆ ತಕ್ಕಂತೆ ಹಲವಾರು ಆಪ್ಷನ್‌ಗಳನ್ನು ಮುಂದಿಡುತ್ತದೆ. ಹಳದಿ ಪಟ್ಟಿ ಒತ್ತಿದರೆ ವಿಶೇಷ ಆಪ್ಷನ್‌ಗಳಿರುವ ರೆಸ್ಟೊರೆಂಟ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಮ್ಯಾಪ್‌ ಆಪ್ಷನ್‌ ಒತ್ತಿದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶಕ್ಕೆ ಹತ್ತಿರದ ರೆಸ್ಟೊರೆಂಟ್‌ಗಳು ಮ್ಯಾಪ್‌ ತುಂಬ ಹರಡಿಕೊಂಡಿದ್ದನ್ನು ತೋರಿಸುತ್ತದೆ.

ಇದರಲ್ಲಿ ರಿಯಲ್‌ ಟೈಂ ಡೀಲ್‌ ಎನ್ನುವುದು ವಿಶೇಷ. ಇದು ಒಂದು ರೀತಿಯಲ್ಲಿ ನಿಮ್ಮ ವ್ಯವಹಾರಕ್ಕೆ ಸೂಕ್ತ ತಾಣಗಳನ್ನು ಹುಡುಕಿಕೊಡುವ ಆತ್ಮೀಯ ಗೈಡ್‌ ಅಂಡ್‌ ಫಿಲಾಸಫರ್‌ ತರಹ. ಆಹಾರಪ್ರಿಯರು ಅಥವಾ ಬೋಜನಾಕಾಂಕ್ಷಿಗಳನ್ನು ಉತ್ತಮ ರೆಸ್ಟೊರೆಂಟ್‌ಗಳಿಗೆ ಮತ್ತು ರೆಸ್ಟೊರೆಂಟ್‌ಗಳಿಗೆ ಫುಡೀಗಳನ್ನು ಆತ್ಮೀಯವಾಗಿ ಪರಿಚಯಿಸುವುದರ ಜೊತೆಗೆ ವ್ಯವಹಾರ, ಅವಿನಾಭಾವ ನಂಟನ್ನು ರೂಪಿಸಿಕೊಡುವ ವ್ಯವಸ್ಥೆ ಇದಾಗಿದೆ. ಆ್ಯಪ್‌ ಸ್ಟೋರ್‌ ಮೂಲಕ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಆ್ಯಪ್‌ ರೂವಾರಿ ಅಮೆರಿಕದ ಲಾಸ್ಸೇಂಜಲೀಸ್‌ನಲ್ಲಿ ನೆಲೆಸಿರುವ ಕಿರಣ್‌ ಮಾದಪ್ಪ ಚೇರಂಡ ವಿವರಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.