ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೀಗೌಡರಿಗೆ ಜಿಎಸ್ಸೆಸ್ ಪ್ರಶಸ್ತಿ ಗೌರವ

Last Updated 19 ಫೆಬ್ರುವರಿ 2020, 15:38 IST
ಅಕ್ಷರ ಗಾತ್ರ

ಡಾ.ಜಿ.ಎಸ್.ಶಿವರುದ್ರಪ್ಪ ವಿಶ್ವಸ್ಥ ಮಂಡಳಿ ನೀಡುವ ‘ಡಾ.ಜಿಎಸ್‌ಎಸ್ ಪ್ರಶಸ್ತಿ’ ಪ್ರದಾನ ಸಮಾರಂಭವು ಫೆ.21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ. 2020ರ ಸಾಲಿನ ‘ಡಾ.ಜಿಎಸ್‌ಎಸ್ ಪ್ರಶಸ್ತಿ’ಯನ್ನು ಲೇಖಕ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆ ಅನನ್ಯ. ಕಾವ್ಯ, ವಿಮರ್ಶೆ, ಮೀಮಾಂಸೆ ಮುಂತಾದ ಪ್ರಕಾರಗಳಲ್ಲಿ 41ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಅವರು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕನ್ನಡದಲ್ಲಿ ವಿಮರ್ಶಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬರಿಗೆ ಜಿಎಸ್ಸೆಸ್ ಅವರ ಕುಟುಂಬದವರು ಆರಂಭಿಸಿದ ಡಾ. ಜಿಎಸ್ಸೆಸ್ ವಿಶ್ವಸ್ಥ ಮಂಡಲಿಯು ಪ್ರತಿವರ್ಷ ಡಾ. ಜಿಎಸ್‌ಎಸ್‌ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ‌‌‌‌

ಕಾರ್ಯಕ್ರಮದಲ್ಲಿ ಕವಿ ಡಾ. ಸಿದ್ಧಲಿಂಗಯ್ಯನವರು ಪ್ರಶಸ್ತಿ ಪ್ರದಾನ ಮಾಡುವರು. ವಿಮರ್ಶಕ ಎಸ್.ಆರ್. ವಿಜಯಶಂಕರ್ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡುವರು. ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಉಪಸ್ಥಿತರಿರುತ್ತಾರೆ. ವೈ.ಕೆ. ಮುದ್ದುಕೃಷ್ಣ ಅವರು ಅಧ್ಯಕ್ಷತೆ ವಹಿಸುವರು.

ಸಪ್ನ ಬುಕ್ ಹೌಸ್ ಪ್ರಕಟಿಸಿರುವ ಡಾ. ಜಿಎಸ್ಸೆಸ್ ಅವರ ‘ಸಮಗ್ರ ಕಾವ್ಯ’ ಸಂಪುಟವನ್ನು ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಬಿಡುಗಡೆ ಮಾಡಲಿದ್ದು, ಪ್ರಸಿದ್ಧ ವಿಮರ್ಶಕರಾದ ಓ.ಎಲ್. ನಾಗಭೂಷಣ ಸ್ವಾಮಿ ಅವರು ಕೃತಿ ಕುರಿತು ಮಾತನಾಡುವರು. ಸಪ್ನ ಬುಕ್ ಹೌಸ್‍ನ ನಿತಿನ್ ಷಾ ಅವರು ಉಪಸ್ಥಿತರಿರುವರು.‌ ಡಾ. ಜಿಎಸ್ಸೆಸ್ ನೆನಪಿನ ಶೂದ್ರ ಪತ್ರಿಕೆಯ ಕವಿಗೋಷ್ಠಿಯಲ್ಲಿ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಕಾತ್ಯಾಯಿನಿ ಕುಂಜಿಬೆಟ್ಟು, ಪಿ. ಚಂದ್ರಿಕಾ, ಜಯಶಂಕರ್ ಹಲಗೂರು, ಚೀಮನಹಳ್ಳಿ ರಮೇಶ್‍ಬಾಬು ಅವರು ಕವನಗಳನ್ನು ವಾಚಿಸಲಿದ್ದಾರೆ.

ಡಾ. ಕರೀಗೌಡ ಬೀಚನಹಳ್ಳಿ: ಇವರು ಕನ್ನಡದ ಪ್ರಮುಖ ವಿಮರ್ಶಕ, ಕತೆಗಾರ ಮತ್ತು ಅನುವಾದ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 13 ವಿಮರ್ಶಾ ಕೃತಿಗಳು, 8 ಕಥಾ ಸಂಕಲನಗಳು, 4 ಅನುವಾದಿತ ಕೃತಿ, 13ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಹಲವು ಪ್ರಶಸ್ತಿಗಳು, ಗೌರವಗಳು ಸಂದಿವೆ. ಇತ್ತೀಚೆಗೆ ಇವರ ‘ಕನ್ನಡ ಸಾಹಿತ್ಯ ಸಂಸ್ಕೃತಿ ಕಥನ’ ಎಂಬ ವಿಮರ್ಶಾ ಕೃತಿಗೆ ತುಮಕೂರು ವಿಶ್ವವಿದ್ಯಾನಿಲಯವು ಡಿ.ಲಿಟ್ ಪದವಿ ನೀಡಿದೆ.

*ಸ್ಥಳ: ನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ, ಚಾಮರಾಜಪೇಟೆ
*ದಿನ:ಫೆ. 21, ಶುಕ್ರವಾರ ಬೆಳಿಗ್ಗೆ 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT