ಬುಧವಾರ, ಸೆಪ್ಟೆಂಬರ್ 18, 2019
25 °C

ಓಗರಗೆ ಅನಂತನಾಗ್ ರಾಯಭಾರಿ

Published:
Updated:

ಶ್ರೀಚಕ್ರ ಫುಡ್ಸ್‌ ಅಂಡ್‌ ಬ್ರಿವರಿಸ್‌ (ಪ್ರೈ) ಲಿಮಿಟೆಡ್‌ ಅಡಿಯಲ್ಲಿ ಓಗರದ ಉತ್ಪನ್ನಗಳು ಸಾಕಷ್ಟು ಜನರನ್ನು ತಲುಪುತ್ತಿವೆ. ದೇಶ, ವಿದೇಶಗಳಲ್ಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಇದೆ. ಸಂಸ್ಥೆಯ ಸಾಧನೆಗೆ ಇದೀಗ ಮತ್ತೊಂದು ಗರಿ ಸೇರಿದೆ. ಹಲವು ಪ್ರಶಸ್ತಿ ಪುರಸ್ಕೃತ ಅಷ್ಟಭಾಷಾ ನಟ ಅನಂತನಾಗ್‌ ಕಂಪನಿಯ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರೋಮ್ಯಾಂಟಿಕ್‌ ಹೀರೊ ಆಗಿ ಜನಮನ ಸೂರೆಗೊಂಡ ಹೆಮ್ಮೆಯ ನಟ ಅನಂತನಾಗ್ ಅವರ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಒಂದು ಸಂಸ್ಥೆಯ ಉತ್ಪನ್ನಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಓಗರ ಸಂಪ್ರದಾಯ ಮತ್ತು ಸ್ವಾದ ಮಸಾಲೆ, ದಿಢೀರ್‌ ಮಿಶ್ರಣ, ಲವಣೀಯಗಳಿಗೆ ಹೆಸರುವಾಸಿಯಾಗಿರುವ ಕಂಪನಿ. ಸದ್ಯ ಸುಮಾರು 14 ವಿವಿಧ ಪದಾರ್ಥಗಳು ಲಭ್ಯ. ಅಕ್ಟೋಬರ್‌ ತಿಂಗಳ ಹೊತ್ತಿಗೆ ಇನ್ನೂ 30 ಪದಾರ್ಥಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ಕಂಪನಿಯ ಮಾಲೀಕ ರಘುನಾಥ್‌ ಹೇಳುತ್ತಾರೆ.

‘ಕೆಂಗೇರಿ ಬಳಿ 3ಸ್ಟಾರ್‌ ಓಗರ ಹೊಟೇಲ್‌ ಪ್ರಾರಂಭಗೊಳ್ಳಲಿದೆ. ಇದು ಸಂಪೂರ್ಣ ಸಸ್ಯಹಾರಿ ಹೊಟೇಲ್‌ ಆಗಿರಲಿದೆ. ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಎಲ್ಲಾ ಪ್ರದೇಶಗಳ ಜನರು ನಾವು ನೀಡುವ ರುಚಿಯನ್ನು ಸವಿಯುವಂತೆ ಮಾಡುವುದೇ ನಮ್ಮ ಗುರಿ’ ಎನ್ನುತ್ತಾರೆ ರಘುನಾಥ್‌.‌

ಇಷ್ಟು ವರ್ಷದ ನನ್ನ ನಟನಾ ಪಯಣದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ, ಯಾವತ್ತೂ ಯಾವುದೇ ಕಂಪನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿರಲಿಲ್ಲ. ಈ ಬಾರಿ ಅದು ಸಹ ಸಾಧ್ಯವಾಯಿತು.

–ಅನಂತ್‌ನಾಗ್‌, ನಟ

Post Comments (+)