ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದ್ಯಪ್ರಿಯರ ಪೊಟ್ಯಾಟೊ ಬೇ‌...

Last Updated 30 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು ಎಂದರೆ ಐಟಿ ಹಬ್‌. ವಾರಾಂತ್ಯದಲ್ಲಿ ರಂಗೇರುವ ನೈಟ್‌ ಕ್ಲಬ್‌ಗಳಲ್ಲಿ ಮೋಜು – ಮಸ್ತಿಯದ್ದೇ ಹವಾ. ನಿಶೆಯ ಮದಿರೆಯಲ್ಲಿ ತೇಲಾಡುವ ಯುವ ಜನರದ್ದು ಕಲರ್‌ಫುಲ್‌ ಲೈಪ್‌. ಸ್ಪೆಷಲ್‌ ಡಿಶ್‌ ಸವಿಯುವ ಆಹಾರಪ್ರಿಯರ ನಾಲಿಗೆ ತಣಿಸುವ ವೈವಿಧ್ಯಮಯ ಖಾದ್ಯಗಳಿಗೂ ಈ ಮಹಾನಗರ ಫೇಮಸ್.

ದೇಸಿ ಮತ್ತು ಸಾಂಪ್ರದಾಯಿಕ ಜತೆಗೆ ಪಾಶ್ಚಾತ್ಯ ತಿನಿಸುಗಳಿಗೂ ಅಷ್ಟೇ ಆದ್ಯತೆ, ಪ್ರಮುಖ ಬೇಡಿಕೆಯೂ ಇದೆ. ಪಾಶ್ಚಾತ್ಯ ತಿಂಡಿ ತಿನಿಸು ಗಡದ್ದಾಗಿ ಸವಿಯುವವರಿಗೆ ಹೇಳಿ ಮಾಡಿಸಿದಂತಿರುವ ಕೆಫೆ ಪೊಟ್ಯಾಟೊ ಬೇ‌. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಿಂದ ಕೂಗಳತೆ ದೂರದಲ್ಲಿರುವ ಈ ಕೆಫೆ ಅಮೆರಿಕನ್ ಹಾಗೂ ಚೈನೀಸ್ ಶೈಲಿಯ ತಿನಿಸುಗಳಹೋಟೆಲ್. ಸಂಪೂರ್ಣ ಸಸ್ಯಾಹಾರಿ ತಿನಿಸುಗಳನ್ನು ಉಣಬಡಿಸುವ ಈ ಹೊಟೇಲ್ ಖಾದ್ಯ ಪ್ರಿಯರ ಮನಸೂರೆಗೊಂಡಿದೆ.

ದೇಸಿ ಆಹಾರ ಸಂಸ್ಕೃತಿಯಲ್ಲಿ ಈಗ ವಿದೇಶಿ ಆಹಾರವೂ ಬೆರೆತುಕೊಂಡಿದೆ‌. ಕೇಕ್, ಸ್ಯಾಂಡ್‌ವಿಚ್, ಸಫ್ರೆಂಚ್ ಫ್ರೈ, ನೂಡಲ್ಸ್, ಮಂಚೂರಿ, ಟೋಸ್ಟ್ ಈ ಎಲ್ಲವೂ ನಮ್ಮದೇ ಆಹಾರ ಎಂಬ ರೀತಿಯಲ್ಲಿ ಸೇರಿಕೊಂಡಿದೆ. ಜನರು ಕೂಡ ದೇಸಿ ಆಹಾರ ಜತೆಗೆ ಈ ವಿದೇಶಿ ಆಹಾರದ ರುಚಿ ಸವಿಯಲು ಇಷ್ಟಪಡುತ್ತಾರೆ.

ಅದರಲ್ಲೂ ಈಗಿನ ಯುವ ಪೀಳಿಗೆಯಂತೂ ವಿದೇಶಿ ಆಹಾರಗಳನ್ನೇ ನೆಚ್ಚಿಕೊಂಡಿದ್ದಾರೆ. ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್ ಹೀಗೆ ಎಲ್ಲದ್ದಕ್ಕೂ ವಿದೇಶಿ ಆಹಾರ ಬಯಸುವ ಟ್ರೆಂಡ್ ಹೆಚ್ಚಾಗಿದೆ. ಈ ವಿದೇಶಿ ಆಹಾರದಲ್ಲಿ ಫ್ರೆಂಚ್ ಮತ್ತು ಚೈನೀಸ್‌ ಟೋಸ್ಟ್ ತುಂಬಾ ಜನಪ್ರಿಯವಾಗಿದೆ.

ಪ್ರಮುಖ ಖಾದ್ಯಗಳು

ಇಲ್ಲಿನ ವಿಶೇಷ ಎಂದರೆಫ್ರೆಂಚ್ಫ್ರೈಸ್‌ನಿಂದ ತಯಾರಿಸಲಾಗುವ ತಿನಿಸು. ಆಲೂಗಡ್ಡೆಗ ಫ್ರೈಸ್ ಗಾತ್ರಕ್ಕೆ ಕತ್ತರಿಸಿ ತಯಾರಿಸುವುದು ಇಲ್ಲಿನ ವಿಶೇಷ. ಸಾಮಾನ್ಯ ಸಾಲ್ತೆಡ್ ಮತ್ತು ಪಿರಿಪಿರಿಫ್ರೈಸ್‌ನಿಂದ ಆರಂಭವಾಗಿ ವಿಶಿಷ್ಟವಾದ ಮೂರು ವಿಧಗಳ ಸಾಸ್ ಮತ್ತು ಚೀಸ್ ಮಿಶ್ರಣದ ಲೋಡೆಡ್ಫ್ರೈಸ್‌ಗಳವರೆಗೆ ಹತ್ತು ವೆರೈಟಿಫ್ರೈಸ್‌ಗಳು ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಇನ್ನೂ ಪೀಟ್ಸ್‌ ಚೀಸ್ ಮತ್ತು ಸಾಸ್ ಬಳಸಿ ತಯಾರಿಸುವ ಈ ತಿನಿಸಿಗಂತೂ ಬಹು ಬೇಡಿಕೆ ಇದೆ. ಕೇವಲ ಬೆರಳೆಣಿಕೆಯಷ್ಟು ಹೊಟೇಲ್‌ಗಳಲ್ಲಿ ಮಾತ್ರ ಈಖಾದ್ಯ ಲಭ್ಯವಿದೆ. ಅಲ್ಲದೆ,ಬರ್ಗರ್, ಇಟಾಲಿಯನ್ ಪಾಸ್ತಾ,ಸ್ಯಾಂಡ್ವಿಚ್ ಮತ್ತುನಾಚೋಸ್ ಕೂಡ ಲಭ್ಯ ಎನ್ನುತ್ತಾರೆ ಹೋಟೆಲ್‌ ಮಾಲೀಕ್‌ ಎಂ.ಜಿ ಚೇತನ್‌.

ಇಲ್ಲಿ ಸಿಗುವ ಅಪ್ಪಟಚೈನೀಸ್ ಶೈಲಿಯ ತಿನಿಸುಗಳಾದಮೊಮೋಸ್‌‌ಮತ್ತುಮಂಚೂರಿಯನ್‌ಗಳಿಗೂ ಆಹಾರಪ್ರಿಯರು ಈಗಾಗಲೇ ಕ್ಲೀನ್ ಬೌಲ್ಡ್ ಆಗಿದ್ದಾರೆ. ಚಿಲ್ಲಿ ಚೀಸ್ ಹಾಗೂ ಶೇಜ್ವಾನ್ ಮೊಮೋಗಳ ಸ್ವಾದಿಷ್ಟಕ್ಕೂ ಮನಸೋತವರಿದ್ದಾರೆ.

ಇಷ್ಟಾದ ಮೇಲೆ ಸಿಹಿ ಮತ್ತು ಪೇಯಗಳಿಲ್ಲದ್ದಿದ್ದರೇ ಹೇಗೆ? ಇಲ್ಲಿ ಸಿಗುವಬ್ರೌನ್ ಅಂಡ್ ವೈಟ್ ಓರಿಯೋ ತಿನಿಸು ವಿಶಿಷ್ಟ ಮತ್ತು ಅಪರೂಪ. ವಾಫಲ್‌ಗಳು ಬಾಯಲ್ಲಿ ನೀರೂರಿಸುತ್ತದೆ. ಕುಡಿಯಲು ಸಿಗುವ ಮಿಲ್ಕ್ ಶೇಕ್‌ಗಳಲ್ಲಿ ರೋಸ್ ಆಲ್ಮಂಡ್ ಮತ್ತು ತಿರಮಿಸು ಸ್ವಾದಿಷ್ಟಭರಿತವಾಗಿರುತ್ತದೆ.

ಇಲ್ಲಿ ತಾಜಾ ಹಣ್ಣುಗಳಿಂದತಯಾರಿಸಲಾಗುವ ನೈಸರ್ಗಿಕ ಐಸ್‌ಕ್ರೀಂ ಸಿಹಿಯಾದ ಆಹ್ಲಾದ ಸಿಗುತ್ತದೆ. ತಿಂದಷ್ಟೂ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ತಾಜಾ ಹಣ್ಣುಗಳನ್ನು ಖರೀದಿಸಿ ಆಗಿಂದಾಗ್ಗೆ ಅವುಗಳಿಗೆ ಐಸ್‌ಕ್ರಿಂ ರೂಪ ನೀಡಲಾಗುತ್ತದೆ. ಹೀಗಾಗಿ ಅವು ರುಚಿಯೊಂದಿಗೆ ತಮ್ಮ ತಾಜಾತನವನ್ನು ಉಳಿಸಿಕೊಂಡಿವೆ. ನೈಸರ್ಗಿಕ ರೀತಿಯಲ್ಲಿ ತಯಾರಾಗುವ ಐಸ್‌ಕ್ರೀಂ ಕೃತಕ ಬಣ್ಣ ನೀಡದಿರುವುದೇ ವಿಶೇಷ.

ಸಂಪರ್ಕ: 9844033882

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT