ಬುಧವಾರ, ಜನವರಿ 29, 2020
28 °C

ಬಾನಂಗಳದಲ್ಲಿ ವಿವಿಧ ಸಣ್ಣ ಲೋಹದ ಹಕ್ಕಿಗಳ ಹಾರಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾರ್ವರ್ಡ್‌ ಗ್ರೂಪ್ ಆಫ್‌ ಇನ್‌ಸ್ಟಿಟ್ಯೂಟ್‌ ಮಕ್ಕಳಿಗಾಗಿ ಕಿರು ವೈಮಾನಿಕ ಪ್ರದರ್ಶನವನ್ನು ಹೊಸ ವರ್ಷದ ಮೊದಲ ದಿನವಾದ ಬುಧವಾರದಂದು ಏರ್ಪಡಿಸಿತ್ತು.

ವೈಮಾನಿಕ ತಂತ್ರಜ್ಞಾನ, ಪ್ರದರ್ಶನ, ವಿಮಾನ ನಿರ್ಮಾಣ, ರೊಬೊಟಿಕ್ ತಂತ್ರಜ್ಞಾನ, ಅತ್ಯಾಧುನಿಕ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡುವ ಉದ್ದೇಶದ ಈ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ವಿವಿಧ ಸಣ್ಣ ವಿಮಾನಗಳ ಹಾರಾಟ ನಡೆಸಲಾಯಿತು. ಬಾನಂಗಳದಲ್ಲಿ ಸಣ್ಣ ಸಣ್ಣ ಲೋಹದ ಹಕ್ಕಿಗಳ ಹಾರಾಟವನ್ನು 1500ಕ್ಕೂ ಹೆಚ್ಚು ಮಕ್ಕಳು ಕಣ್ತುಂಬಿಕೊಂಡರು. ಕೆಲವು ಮಕ್ಕಳು ಸಹ ಸಣ್ಣ ವಿಮಾನಗಳನ್ನು ಹಾರಾಟ ಮಾಡಿ ಖುಷಿಪಟ್ಟರು.

‘ಮುಂದಿನ ಪೀಳಿಗೆಗೆ ತಂತ್ರಜ್ಞಾನ ಅತ್ಯಂತ ಪ್ರಮುಖವಾಗಿದ್ದು, ಮಕ್ಕಳು ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಬೇಕು. ಇದರಿಂದ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ಸಹಕಾರಿ. ಇಸ್ರೊ ಅತ್ಯಂತ ಮಹತ್ವದ ಸಾಧನೆ ಮಾಡುತ್ತಿದೆ. ಇದಕ್ಕೆ ಎಲ್ಲಾ ವಿಜ್ಞಾನಿಗಳ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ವಿಜ್ಞಾನಿಗಳಾಗಬೇಕು ಎನ್ನುವವರು ಈಗಿನಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿ ವಹಿಸಬೇಕು. ಪೋಷಕರು ಪ್ರೋತ್ಸಾಹ ನೀಡಬೇಕು’ ಎಂದು ಇಸ್ರೊ ವಿಜ್ಞಾನಿ ಡಾ. ಪಿ.ಪಿ. ನಾಗೇಶ್ವರ ರಾವ್ ಹೇಳಿದರು.

‘ವಿದ್ಯಾರ್ಥಿಗಳಿಗೆ ಹೊಸ ವರ್ಷದ ಮೊದಲ ದಿನ ಅತ್ಯಂತ ವಿಭಿನ್ನ ಅನುಭವ ನೀಡಲು ಮತ್ತು ವಿಜ್ಞಾನದ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ‘ ಎಂದು ಹಾರ್ವರ್ಡ್‌ ಗ್ರೂಪ್ ಆಫ್‌ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಡಾ. ಬಿ. ಗಂಗಣ್ಣ ಅವರು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ಗೋಪಿನಾಥ್, ಶಿಕ್ಷಕರು, ಶಾಲಾ ಆಡಳಿತ ಮಂಡಳಿಯ ಪ್ರಮುಖರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)