‘ಎಷ್ಟೋ ಮಂದಿ ನನ್ನನ್ನು ಸಣ್ಣ ಹುಡುಗಿಗೆ ಯಾಕೆ ಒತ್ತಡ ಹಾಕುತ್ತಿದ್ದೀಯ ಎಂದು ಟೀಕಿಸಿದ್ದಾರೆ. ಆದರೆ, ಕಷ್ಟವೇ ಗೆಲುವಿನ ಮೆಟ್ಟಿಲು. ಆಕೆಯ ಪರಿಶ್ರಮವೇ ಅವಳ ಈ ಸಾಧನೆಗೆ ಮುಖ್ಯ ಕಾರಣ. ದೀಕ್ಷಾಳ ಸಾಧನೆಯ ಹಿಂದೆ ಆಕೆಯ ಕೋಚ್ ಬಸವರಾಜ್ ಅವರದ್ದೂ ಶ್ರಮವಿದೆ’ ಎಂದು ಗಿರೀಶ್ ಹೇಳಿದರು. ಗಮನಾರ್ಹ ಅಂಶವೆಂದರೆ ಗಿರೀಶ್ ಅವರೂ ಐದು ಬಾರಿ ಗಿನ್ನಿಸ್ ದಾಖಲೆ ನಿರ್ಮಿಸಿದವರು.