ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ್‌ ಆರ್ಯನ್‌ ಕನಸು ನನಸಾಯಿತು!

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಟ ಕಾರ್ತಿಕ್‌ ಆರ್ಯನ್‌ಗೆ ಕರೀನಾ ಕಪೂರ್‌ ಖಾನ್‌ ಅಂದ್ರೆ ಪಂಚಪ್ರಾಣ, ಆಕರ್ಷಣೆ, ಸೆಳೆತ. ಕಾರ್ತಿಕ್‌ ಮಾತಿನಲ್ಲೇ ಹೇಳುವುದಾದರೆ ‘ಕ್ರಶ್‌’! ಕರೀನಾಳನ್ನು ಮದುವೆಯಾಗಬೇಕು ಎಂದು ಕನಸೂ ಕಂಡಿದ್ದ ಈ ಸುಂದರಾಂಗ. ಆದರೆ ಕನಸನ್ನು ಹೇಳಿಕೊಳ್ಳುವುದಕ್ಕೂ ಅವಕಾಶ ಸಿಕ್ಕಿರಲಿಲ್ಲವಂತೆ. ಸೈಫ್‌ ಅಲಿ ಖಾನ್‌ ಜತೆಗೆ ಡೇಟಿಂಗ್‌ ಮಾಡುತ್ತಿದ್ದ ಕರೀನಾ ಮದುವೆಯೂ ಆಗಿ, ಮುದ್ದಿನ ಮಗುವಿನ ತಾಯಿಯೂ ಆದಳು.

ಕರೀನಾ, ಚಿತ್ರರಂಗದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡರೂ ಕಾರ್ತಿಕ್‌, ಕರೀನಾಳನ್ನು ಆರಾಧಿಸುತ್ತಲೇ ಇದ್ದನಂತೆ. ತಾವಿಬ್ಬರೂ ಮದುಮಕ್ಕಳಾಗಿ ಮಿಂಚುತ್ತಿರುವಂತೆ ಕನಸು ಕಾಣುತ್ತಲೇ ಇರುತ್ತಾನಂತೆ. ಹೀಗೆ ಭಾವಪ್ರಪಂಚದಲ್ಲಿ ತೇಲಾಡುತ್ತಿರುವಾಗಲೇ ಕಾರ್ತಿಕ್‌ಗೆ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಮನೀಷ್‌ ಮಲ್ಹೋತ್ರಾ ಸಿಂಗಾಪುರಕ್ಕೆ ಕರೆದೊಯ್ದಿದ್ದರು.

ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮದುಮಗನಂತೆ ಉಡುಗೆ ತೊಡುಗೆ ಧರಿಸಿ ಕರೀನಾ ಕೈಹಿಡಿದು ನಡೆಯುವ ಅದೃಷ್ಟ ಕಾರ್ತಿಕ್‌ಗೆ ಸಿಕ್ಕಿತು. ತನ್ನ ಕನಸಿನ ಬಗ್ಗೆ ಎಲ್ಲರೆದುರು ಬಾಯಿಬಿಟ್ಟಾಗ ನೆರೆದಿದ್ದವರು ಮಾತ್ರವಲ್ಲ, ಕರೀನಾ ಕೂಡಾ ಆಶ್ಚರ್ಯದಿಂದ ಮೂಕರಾದರಂತೆ. ‘ಕರೀನಾ ಬಗ್ಗೆ ನನಗೆ ಬಹಳ ದಿನಗಳಿಂದ ಕ್ರಶ್‌ ಇತ್ತು. ಮದುವೆಯಂತೂ ಆಗಲು ಅವಕಾಶ ಸಿಗಲಿಲ್ಲ. ಹೀಗೆ ರ‍್ಯಾಂಪ್‌ ಮೇಲಾದರೂ ಕೈಹಿಡಿದು ನಡೆಯುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎಂದು ಕಾರ್ತಿಕ್‌ ಮನದಾಳದ ಮಾತನ್ನು ಹೇಳಿಕೊಂಡು ಹಗುರಾದರಂತೆ.

ಕಾರ್ತಿಕ್‌ ಅಭಿನಯದ ‘ಸೋನು ಕೆ ತೀತಿ ಸ್ವೀಟಿ’ ಸಿನಿಮಾ, ‘ಪದ್ಮಾವತ್‌’ ನಂತರ ಅತ್ಯಧಿಕ ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ಕಾರ್ತಿಕ್‌ ಆರ್ಯನ್‌ ತಾರಾ ವರ್ಚಸ್ಸು ಈಗ ಹೆಚ್ಚಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT