ಬುಡಕಟ್ಟು ಜನಾಂಗದ ಬದುಕಿನ ಆಯಾಮಗಳ ಮೇಲೆ ಬೆಳಕು ಚೆಲ್ಲುವ ‘ಲೈಫ್ ಟ್ರೈಬಲ್ ಟು ಸ್ಪಿರಿಚ್ಯುಯಲ್’ ಚಿತ್ರಕಲಾ ಪ್ರದರ್ಶನ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ.

ಮಹಾರಾಷ್ಟ್ರ ಮೂಲದ ಕಲಾವಿದರಾದ ಸತೀಶ್ ಮಧುಕರ್ ಪಿಂಪಾಲೆ, ಪತ್ನಿ ಪದ್ಮಜಾ ಪಿಂಪಾಲೆ ಹಾಗೂ ರಾಜಶ್ರೀ ನತಕ್ ಅವರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿವೆ. ಬುಡಕಟ್ಟು ಜನಾಂಗದ ಕಲೆಗಳು, ವರ್ಲಿ ಚಿತ್ತಾರಗಳು, ಹಾಗೂ 3ಡಿ ಪೇಂಟಿಂಗ್ಗಳು ಈ ಪ್ರದರ್ಶನದಲ್ಲಿ ಅನಾವರಣಗೊಂಡಿವೆ.

ಮಹಾರಾಷ್ಟ್ರ ಸರ್ಕಾರದಿಂದ ರಾಜ್ಯ ಪ್ರಶಸ್ತಿ ಪಡೆದಿರುವ ಸತೀಶ್ ಮಧುಕರ್ ಪಿಂಪಾಳೆ ಅವರ ನೂರಾರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ದೇಶದ ವಿವಿಧೆಡೆ ನಡೆದಿವೆ. ಹಿರಿಯ ಕಲಾವಿದ ಸತೀಶ್ ಪಿಂಪಾಲೆ ಅವರು ರಚಿಸಿರುವ ಪಂಚಭೂತ, ಪ್ರಕೃತಿ, ಬುಡಕಟ್ಟು ಜೀವನ, ಜಾನಪದ ಶೈಲಿಯನ್ನು ಬಿಂಬಿಸುವ ಅಮೂರ್ತ ಚಿತ್ರಗಳು ಪ್ರದರ್ಶನದಲ್ಲಿವೆ.

‘ಚಿತ್ರಕಲೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆ, ಆಲೋಚನೆಗಳನ್ನು ಅಭಿವ್ಯಕ್ತಿಪಡಿಸಲು ಇರುವ ಉತ್ತಮ ಮಾಧ್ಯಮ. ಚಿತ್ರಕಲೆ ಎನ್ನುವುದು ತಪಸ್ಸಿದ್ದಂತೆ. ಕಲಾವಿದರಿಗೆ ನಿಶ್ಚಲವಾದ ಮನಸ್ಸು, ತಾಳ್ಮೆ ಮುಖ್ಯ’ ಎಂಬುದು ಹಿರಿಯ ಕಲಾವಿದ ಸತೀಶ್ ಅಭಿಮತ.

ಪ್ರದರ್ಶನದಲ್ಲಿ ಪದ್ಮಜಾ ಪಿಂಪಾಲೆ ಅವರ ವರ್ಲಿ ವಿನ್ಯಾಸದ ಚಿತ್ರಗಳು ಗಮನ ಸೆಳೆಯುತ್ತದೆ. ಇವರು ಮಹಾರಾಷ್ಟ್ರದ ಹಲವು ಮನೆಗಳಿಗೆ ವರ್ಲಿ ಚಿತ್ರಗಳಿಂದ ಒಳಾಂಗಣ ವಿನ್ಯಾಸ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಮುಂಬೈನ ಠಾಣೆ ಜಿಲ್ಲೆಯ ಬುಡಕಟ್ಟು ಜನಾಂಗದ ಕಲೆ ವರ್ಲಿ ಚಿತ್ರ. ಇದು ಭಾರತವಲ್ಲದೇ ವಿದೇಶದಲ್ಲೂ ಹೆಚ್ಚು ಖ್ಯಾತಿ ಪಡೆದಿದೆ ಎನ್ನುತ್ತಾರೆ ಪದ್ಮಜಾ ಪಿಂಪಾಲೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ರಾಜಶ್ರೀ ನತಕ್ ಕಳೆದ 25 ವರ್ಷದಿಂದ ಸತೀಶ್ ಅವರ ಬಳಿ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇವರು ಚಿತ್ರಾಂಗನ್ ಸಂಸ್ಥೆಯ ಮೂಲಕ ಹಲವಾರು ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ.

ಬುಡಕಟ್ಟು ಜನಾಂಗದ ಕಲಾವಿದರ ಚಿತ್ರ ಪ್ರದರ್ಶನವನ್ನು ಏರ್ಪಡಿಸಿ ಅವರ ಕಲೆಯನ್ನು ಪೋಷಿಸುತ್ತಿದ್ದಾರೆ. ರಾಜಶ್ರೀ ಅವರು ಜೀವನ, ಪ್ರಕೃತಿ, ಪುರಾಣ, ಪಂಚಭೂತಗಳನ್ನು ವಿಷಯವಾಗಿರಿಸಿಕೊಂಡು 3ಡಿ, ತೈಲ ವರ್ಣ ಮತ್ತು ಆ್ಯಕ್ರಿಲಿಕ್ನಲ್ಲಿ ರಚಿಸಿದ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

‘ಚಿತ್ರಗಳ ಮಾರಾಟದಿಂದ ಬರುವ ಆದಾಯದ ಒಂದು ಭಾಗ ನಾನಾ ಪಾಟೇಕರ್ ಅವರ ಸರ್ಕಾರೇತರ ಸಂಸ್ಥೆ ‘ನಾಮ್ ಫೌಂಡೇಷನ್’ಗೆ ನೀಡಲಾಗುವುದು. ಬಡ ರೈತ ಕುಟುಂಬಗಳಿಗೆ ಈ ಮೂಲಕ ನೆರವು ನೀಡಲಾಗುವುದು’ ಎನ್ನುತ್ತಾರೆ ರಾಜಶ್ರೀ. ಈ ಪ್ರದರ್ಶನ ಅಕ್ಟೋಬರ್ 19ರವರೆಗೂ ನಡೆಯಲಿದೆ.

ಸ್ಥಳ: ಚಿತ್ರಕಲಾ ಪರಿಷತ್ತು(ಗ್ಯಾಲರಿ–2) , ಕುಮಾರಕೃಪಾ ರಸ್ತೆ.
ಸಮಯ: 10.30–7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.