ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ಸೌಹಾರ್ದ

Last Updated 8 ಫೆಬ್ರುವರಿ 2011, 6:30 IST
ಅಕ್ಷರ ಗಾತ್ರ

ಜಗತ್ತಿನ ಪ್ರತಿ ಸಮುದಾಯವು ದೇವರ ಕುರಿತು ತನ್ನದೇ ಆದ ನಂಬಿಕೆ, ಪರಿಕಲ್ಪನೆ ಹೊಂದಿರುತ್ತದೆ. ‘ದೇವನೊಬ್ಬ ನಾಮ ಹಲವು’ ಎಂಬಂತೆ ಬೇರೆ ಬೇರೆ ರೂಪದಲ್ಲಿ ಪೂಜಿಸುತ್ತದೆ. ಇದನ್ನೇ ಕಲಾವಿದೆ ಹೇಮಾವತಿ ಕೃಷ್ಣನ್ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ತಡೆಗೋಡೆಗಳು ಇಲ್ಲದಂತೆ ದೇವರನ್ನು ಪ್ರೀತಿಸಬೇಕು ಎನ್ನುತ್ತಾರೆ.

ತಮ್ಮ ಈ ಆಶಯವನ್ನು ಕಲಾಕೃತಿಗಳಲ್ಲಿಯೂ ಚಿತ್ರಿಸುತ್ತಾರೆ. ನೃತ್ಯ ಈ ಎಲ್ಲ ತಡೆಗೋಡೆಗಳನ್ನು ದಾಟಬಲ್ಲದು ಎಂಬ ನಂಬಿಕೆ ಅವರದ್ದು. ಹಾಗಾಗಿ ಅವರ ಕಲಾಕೃತಿಗಳಲ್ಲಿ ನೃತ್ಯ ಪ್ರಧಾನ ಅಂಶವಾಗಿರುತ್ತದೆ. ತಮ್ಮ ಕಲಾಕೃತಿಗಳ ಮಾರಾಟದಿಂದ ಬಂದ ಹಣವನ್ನು ಹಿರಿಯ ಕಲಾವಿದೆಯರ ಕ್ಷೇಮಾಭಿವೃದ್ಧಿಗೆ ಬಳಸುವ ಉದ್ದೇಶವನ್ನೂ ಹೇಮಾವತಿ ಹೊಂದಿದ್ದಾರೆ.

ಅವರ ಕಲಾಕೃತಿಗಳ ಪ್ರದರ್ಶನ ಶುಕ್ರವಾರದವರೆಗೆ ಮುಂದುವರಿಯಲಿದೆ. ಸ್ಥಳ: ಗ್ಯಾಲರಿ ಹ್ಯಾಬಿಟ್ಯೂಟ್, 2ನೇ ಮಹಡಿ, ಎಡಿಎ ರಂಗಮಂದಿರ  (ರವೀಂದ್ರ ಕಲಾಕ್ಷೇತ್ರ ಎದುರು) ಜೆ.ಸಿ. ರಸ್ತೆ. ಬೆಳಿಗ್ಗೆ 11ರಿಂದ  ಸಂಜೆ 7. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT