ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಕಥೆ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಬ್ಬನ್‌ ಪಾರ್ಕ್‌
ಬೆಂಗಳೂರಿನ ಶ್ವಾಸಕೋಶ ಎಂಬ ಹೆಗ್ಗಳಿಕೆ ಕಬ್ಬನ್‌ ಪಾರ್ಕ್‌ನದು. ಬೇರೆ ಊರುಗಳಿಂದ ಬರುವ ಪ್ರವಾಸಿಗರ ‘ಬೆಂಗಳೂರು ದರ್ಶನ’ದ ಪಟ್ಟಿಯಲ್ಲಿ ಕಬ್ಬನ್‌ ಪಾರ್ಕ್‌ ಇದ್ದೇ ಇರುತ್ತದೆ. ಇದಕ್ಕೆ ಯುವಜನರ ಪಾಲಿಗೆ ನೆಚ್ಚಿನ ಲವರ್ಸ್‌ ಸ್ಪಾಟ್, ಪುಟಾಣಿಗಳ ಪಾಲಿಗೆ ರೈಲಿನ ರೈಡು– ಜೂಟಾಟದ ಮೋಜು, ವಯಸ್ಸಾದವರ ಪಾಲಿಗೆ ಯೋಗ– ವ್ಯಾಯಾಮ ಮಾಡಲು ಹೇಳಿ ಮಾಡಿಸಿದ ಸ್ಥಳವೆಂಬ ಅಗ್ಗಳಿಕೆ ಇದೆ.

ಸ್ವಾತಂತ್ರ್ಯ ಉದ್ಯಾನ
ಜೈಲು ಹೇಗಿರುತ್ತೆ? ಕೈದಿಗಳು ಹೇಗೆ ಮಲಗ್ತಾರೆ? ಅವರಿಗೆ ಎಷ್ಟು ಊಟ ಕೊಡ್ತಾರೆ? ಇಂಥ ಹತ್ತಾರು ಪ್ರಶ್ನೆಗಳು ಜನರಲ್ಲಿರುತ್ತವೆ. ಒಂದಾನೊಂದು ಕಾಲದಲ್ಲಿ ಬೆಂಗಳೂರು ಸೆಂಟ್ರಲ್ ಜೈಲ್ ಆಗಿದ್ದ ಸ್ಥಳವೀಗ ಸ್ವಾತಂತ್ರ್ಯ ಉದ್ಯಾನವಾಗಿ ಇಂಥವರ ಕುತೂಹಲ ತಣಿಸುತ್ತಿದೆ.

ಪರಪ್ಪನ ಅಗ್ರಹಾರಕ್ಕೆ ಕೇಂದ್ರೀಯ ಕಾರಾಗೃಹ ಸ್ಥಳಾಂತರಗೊಂಡ ನಂತರ ‘ಹಳೇ ಜೈಲು’ ಸ್ವಾತಂತ್ರ್ಯ ಉದ್ಯಾನದ ಹೆಸರಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು.ಜೈಲಿನ ಬ್ಯಾರಕ್‌ಗಳನ್ನು ಹಾಗೆಯೇ ಉಳಿಸಿಕೊಂಡಿರುವುದರ ಜೊತೆಗೆ ಕೈದಿಗಳು ಮತ್ತು ಜೈಲು ವಾರ್ಡನ್‌ಗಳ ಸಿಮೆಂಟ್ ಶಿಲ್ಪಗಳನ್ನು ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT