ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಲಾಪಿಲ್ಲಿ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

 ಜಾಂಟಿ ಜೊತೆಗೆ ದಕ್ಷಿಣ ಆಫ್ರಿಕಾ ಮೋಜು

ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ಇಲಾಖೆಯು ಭಾರತೀಯರಿಗಾಗಿ ನೂತನ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಅದೇ `ಟೇಕ್ ಮಿ ಟು ಸೌತ್ ಆಫ್ರಿಕಾ'. 15 ದಿನಗಳ ಈ ಪ್ರಯಾಣದಲ್ಲಿ  ಕ್ರಿಕೆಟಿಗ ಜಾಂಟಿ ರೋಡ್ಸ್ ನಿಮ್ಮ ಜೊತೆಯಾಗಲಿದ್ದಾರೆ. ಸಂಪೂರ್ಣ ಖರ್ಚು ವೆಚ್ಚವನ್ನು ಇಲಾಖೆಯೇ ನಿಭಾಯಿಸಲಿದ್ದು, ಜಾಂಟಿರಾಡ್ಸ್ ಪ್ರಯಾಣದುದ್ದಕ್ಕೂ ಮಾಹಿತಿ ನೀಡುವ ಮಾರ್ಗದರ್ಶಿಯ ಪಾತ್ರ ನಿರ್ವಹಿಸಲಿದ್ದಾರೆ.

18 ವರ್ಷ ದಾಟಿದವರಿಗೆ ಈ ಅವಕಾಶವನ್ನು ನೀಡಿರುವ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ಇಲಾಖೆಯ www.takemetosouthafrica.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಕೇಳುವ ಕೆಲವು ಪ್ರಶ್ನೆಗಳಿಗೆ ಇನ್ನು ಎರಡು ದಿನಗಳಲ್ಲಿ ಉತ್ತರಿಸಿಬೇಕು. ನಂತರ ನಾಲ್ಕು ಜನ ಅದೃಷ್ಟಶಾಲಿ ವಿಜೇತರಿಗೆ ದಕ್ಷಿಣ ಆಫ್ರಿಕಾ ಸುತ್ತುವ ಅವಕಾಶ ಲಭಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದೇ ಮೊದಲ ಬಾರಿಗೆ ಆಯೋಜಿಸಿರುವ ಈ ಸ್ಪರ್ಧೆಯ ಬಗ್ಗೆ ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಇಲಾಖೆ ಹರ್ಷ ವ್ಯಕ್ತಪಡಿಸಿದೆ. `ಪ್ರತಿಯೊಬ್ಬರೂ ಜೀವಮಾನದಲ್ಲಿ ನೋಡಲೇಬೇಕಾದ ಸುಂದರ ತಾಣ ಸೌತ್ ಆಫ್ರಿಕಾ. ಇಲ್ಲಿಯ ರಮ್ಯ ತಾಣಗಳನ್ನು ಜನತೆಗ ಪರಿಚಯಿಸುವಲ್ಲಿ ಇದು ಉತ್ತಮ ಪ್ರಯತ್ನವಾಗಲಿದೆ' ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ರಸ್ನಾದಿಂದ ಹೊಸ ಸ್ವಾದ
ಬಿಸಿಲಿನ ಬೇಗೆಗೆ ತಂಪಾಗಿ ಏನಾದರೂ ಕುಡಿಯಬೇಕು ಅನಿಸುವುದು ಸಹಜ. `ಕಳೆದ ಹತ್ತು ವರ್ಷಗಳಿಂದ ನಿಮ್ಮ ಬೇಸಿಗೆಯ ದಾಹವನ್ನು ನೀಗಿರುವ ನಮ್ಮ ಹೊಸ ಸ್ವಾದಗಳನ್ನು ಸವಿದು ಉತ್ಸಾಹದಿಂದಿರಿ' ಎಂದು ರಸ್ನಾ ಹೇಳಿದೆ.ಬೇಸಿಗೆಗೆಂದೇ ನಾಗ್ಪುರ ಆರೆಂಜ್, ಆಲ್ಫೊನ್ಸಾ ಮಾವು, ನಿಂಬೂಪಾನಿ, ಚೌಪಟ್ಟಿ ಕಲಖಟ್ಟ ಎಂಬ ಸ್ವಾದಗಳನ್ನು ಪರಿಚಯಿಸಿರುವ ರಸ್ನಾ, ಕೇವಲ ರೂ. ಒಂದು ವ್ಯಯಿಸಿ ಎರಡು ಲೋಟ ಪೇಯವನ್ನು ತಯಾರಿಸಬಹುದಾದ ಅವಕಾಶವನ್ನು ನೀಡಿದೆ. ಇದು ಕಳೆದೊಂದು ದಶಕದಿಂದಲೂ ಚಾಲ್ತಿಯಲ್ಲಿರುವ ಆರಂಭಿಕ ಬೆಲೆಯೇ ಆಗಿದೆ. ಉಳಿದಂತೆ ್ಙ ಎರಡು ಮತ್ತು ್ಙ ಹತ್ತರ ಸ್ಯಾಶೆ ಕೂಡ ಲಭ್ಯ.

ನಿಮ್ಮದೇ ವಿನ್ಯಾಸದ ಆಭರಣ ಬೇಕೆ?
ನಗರದ ಹಳೆಯ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ತನ್ನ ಗ್ರಾಹಕರಿಗೆ ತಮ್ಮ ಆಭರಣಗಳನ್ನು ತಾವೇ ವಿನ್ಯಾಸಮಾಡಿಕೊಳ್ಳುವ ಅವಕಾಶವನ್ನು ಒದಗಿಸಿದೆ. ಅಂದರೆ, ಗ್ರಾಹಕರು ತಮ್ಮ ಇಷ್ಟದ, ಕನಸಿನ ವಿನ್ಯಾಸವನ್ನು ಕೃಷ್ಣಯ್ಯ ಚೆಟ್ಟಿ ಮಳಿಗೆಗಳಲ್ಲಿ ಖುದ್ದಾಗಿ ಮಾಡಿಕೊಟ್ಟಲ್ಲಿ ಅದೇ ಮಾದರಿಯ ಒಡವೆಯನ್ನು ಮಳಿಗೆ ತಯಾರಿಸಿಕೊಡುತ್ತದೆ. ಏ.30ರವರೆಗೆ ನಡೆಯಲಿರುವ `ಕಸ್ಟಮ್ ಡಿಸೈನ್ ಜ್ಯುವೆಲ್ಲರಿ ಫೆಸ್ಟಿವಲ್'ನಲ್ಲಿ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್‌ನ ಕಮರ್ಷಿಯಲ್ ಸ್ಟ್ರೀಟ್ ಮತ್ತು ಜಯನಗರದ ಮಳಿಗೆಗಳಲ್ಲಿ ಈ ಉತ್ಸವ ನಡೆದಿದೆ. ಉತ್ಸವದ ಅವಧಿಯಲ್ಲಿ ಹಳೆಯ ಆಭರಣವನ್ನು ಹೊಸ ಚಿನ್ನ ಅಥವಾ ಪ್ಲಾಟಿನಂ ಆಭರಣದೊಂದಿಗೆ ಬದಲಾಯಿಸುವ ಹಾಗೂ ಹಳೆಯ ವಜ್ರಾಭರಣಗಳಿಗೆ ಹೊಸದನ್ನು ಖರೀದಿಸುವ ಅವಕಾಶವೂ ಇರುತ್ತದೆ ಎಂದು ಮಳಿಗೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT