ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ-ಶರ್ಟ್ ಬರಹ: ಅಜ್ಜನ ಚಟಾಕಿ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇದು ಸುಮಾರು ಮೂರು ತಿಂಗಳ ಹಿಂದಿನ ಘಟನೆ. ಬಸ್ ಕಾಮಾಕ್ಯದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿತ್ತು. ಬೆಳಿಗ್ಗೆ 11 ಗಂಟೆಯ ಸಮಯ. ಬಸ್ಸಿನಲ್ಲಿ ಹೆಚ್ಚು ಜನವಿರಲಿಲ್ಲ. ಎಲ್ಲರೂ ಒಂದೊಂದು ಕಿಟಕಿ ಬದಿಯ ಸೀಟಿನಲ್ಲಿ ಕೂತು ಬೆಂಗಳೂರಿನ ಹೊಗೆ ಮಿಶ್ರಿತ ಗಾಳಿ ಸೇವಿಸುತ್ತಾ ಇದ್ದೆವು.

ಬಸ್ಸಿನ ನಡು ಬಾಗಿಲಿನ ಪಕ್ಕದಲ್ಲಿದ್ದ ಎದುರು-ಬದುರು ಸೀಟಿನಲ್ಲಿ, 70ರಿಂದ 75 ವಯಸ್ಸಿನ ಅಜ್ಜ ಕೂತಿದ್ದರು. ಸ್ವಲ್ಪ ಸಮಯದ ನಂತರ ಕೊನೆಯ ಸೀಟಿನಲ್ಲಿ ಕೂತಿದ್ದ ಒಬ್ಬ ಯುವಕ ಅಜ್ಜನ ಮುಂದಿನ ಸೀಟಿನಲ್ಲಿ ಬಂದು ಕೂತ.

ಆ ಯುವಕ ಧರಿಸಿದ್ದ ಟಿ-ಶರ್ಟ್‌ನ ಮೇಲೆ‘Don't Blame the system you FOOL, Just do your duty’ಎಂದು ಬರಿದ್ದಿತ್ತು. ಅದನ್ನು ಓದಿದ ಅಜ್ಜ ಆ ಹುಡುಗನನ್ನು ಪಕ್ಕಕ್ಕೆ ಕರೆದು, “ಏನಪ್ಪಾ ಇದು, ಶರ್ಟ್ ಮೇಲೆ ಹೀಗೆಲ್ಲಾ ಬರೆದು ಕೊಂಡಿದೀಯ, ಆ...You fool ಅಂತ ಇದೆ. ಅಂದರೆ ಇದನ್ನು ಓದಿದವರೆಲ್ಲಾ Fool ಅಂತಲೇ?“ ರೇಗಾಡಿದರು. ಅವರಿಗೆ ಉತ್ತರಿಸುತ್ತಾ ಆ ಹುಡುಗ ಹೇಳಿದ, `ಅಯ್ಯೋ ಅಜ್ಜ, ಇದು ಯಾರೋ ನಂಗೆ ಕೊಟ್ಟಿದ್ದು, ಹಾಕಿಕೊಂಡಿದ್ದೀನಿ'. ಇವರ ಮಾತು ಕೇಳುತ್ತಾ ಇದ್ದ ಒಬ್ಬ ನಡು ವಯಸ್ಸಿನ ವ್ಯಕ್ತಿ

ನಗುನಗುತ್ತಾ ಅಜ್ಜನನ್ನು ಕೇಳಿದರು: “ಏನ್ರೀ ಇಷ್ಟಕ್ಕೆಲ್ಲಾ ನೀವು ಹೀಗೇಳ್ತಿರಾ, ಮೊನ್ನೆ ಒಂದು ಹುಡುಗಿ ಶರ್ಟ್‌ನ ಮೇಲೆ 'KISS ME' ಅಂತ ಬರೆದ್ದಿತ್ತು. ಅದಕ್ಕೇನು ಹೇಳ್ತಿರಾ?”
ಬಸ್ ರಾಮಕಷ್ಣ ಆಶ್ರಮ ಹತ್ತಿರ ಬಂದಿತ್ತು. ಆ ಅಜ್ಜ ಜೋರಾಗಿ ನಗುತ್ತಾ, “ಅಯ್ಯೋ ಸ್ವಾಮಿ, 'KISS ME' ಅಂತ ಬರೆದಿದ್ದರೇ ನೀವು ಕೊಟ್ಟುಬಿಟ್ಟು ಬರೋದಲ್ವಾ“ ಅನ್ನಬೇಕೆ!
ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ಅಜ್ಜ ನಗುನಗುತ್ತಾ ಆಶ್ರಮ ಸ್ಟಾಪ್‌ನಲ್ಲಿ ಇಳಿದು ಹೋದರು. ಬಸ್ ಮೆಜೆಸ್ಟಿಕ್ ತಲುಪಿದರೂ ನನ್ನ ಮುಖದಲ್ಲಿ ನಗು ಹಾಗೇ ಇತ್ತು.

-ಸಂತೋಷ್ ಬಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT