ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಬಂತು ‘ಬರ್ಗರ್‌ ಕಿಂಗ್‌’

ರಸಾಸ್ವಾದ
Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ನಗರದಲ್ಲಿರುವ ಕೆಎಫ್‌ಸಿ, ಮ್ಯಾಕ್‌ ಡೊನಾಲ್ಡ್ಸ್‌, ಡಾಮಿನಾಸ್‌, ಪಿಜ್ಜಾ ಹಟ್‌ ಹಾಗೂ ಡಂಕಿನ್‌ ಡೋನಟ್‌ಗಳಂತಹ ಹಲವಾರು ಫಾಸ್ಟ್‌ ಫುಡ್‌ ಮಾರಾಟ ಮಳಿಗೆಗಳ ಸಾಲಿಗೆ ‘ಬರ್ಗರ್‌ ಕಿಂಗ್’ ನೂತನ ಸೇರ್ಪಡೆ.

ಈಗಾಗಲೇ ವಿಶ್ವದಾದ್ಯಂತ ಗುಣಮಟ್ಟದ ತಿನಿಸುಗಳ ಪೂರೈಕೆ ಮಾಡಿ  ಖ್ಯಾತಿಯಾಗಿರುವ ಬರ್ಗರ್‌ ಕಿಂಗ್‌ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಇತ್ತೀಚೆಗೆ ನಗರದ ಮಹದೇವಪುರದ ಫಿನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ‘ಬರ್ಗರ್‌ ಕಿಂಗ್‌’ ತನ್ನ ವಹಿವಾಟು ಆರಂಭಿದೆ. ದಕ್ಷಿಣ ಭಾರತದಲ್ಲಿ ಆರಂಭವಾಗಿರುವ ಮೊದಲನೇ ಬರ್ಗರ್‌ ಕಿಂಗ್‌ ಶಾಖೆಯಿದು.

‘ಬೆಂಗಳೂರು ನನ್ನ ತವರೂರು. ಇಲ್ಲೇ ವಿದ್ಯಾಭ್ಯಾಸ ಮಾಡಿದ್ದರಿಂದ ಈ ನಗರದೊಂದಿಗೆ ಭಾವನಾತ್ಮಕ ಬಂಧವಿದೆ. ನಾನು ನನ್ನ ಕುಟುಂಬ ವಾಸವಾಗಿರುವುದು ಇದೇ ನೆಲದಲ್ಲಿ. ಆದ್ದರಿಂದ ದಕ್ಷಿಣ ಭಾರತದ ಮೊದಲ ಶಾಖೆಯನ್ನು ನನ್ನ ನಗರದಿಂದಲೇ ಆರಂಭಿಸಬೇಕು ಎಂದು ತೀರ್ಮಾನಿಸಿದೆ’ ಎನ್ನುತ್ತಾರೆ ಬರ್ಗರ್‌ ಕಿಂಗ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್‌  ವರ್ಮನ್‌.

ವಿಶ್ವದಲ್ಲಿ ಅತಿ ಹೆಚ್ಚು ಬರ್ಗರ್‌ ಚೈನ್‌ ಹೊಂದಿರುವ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ‘ಬರ್ಗರ್‌ ಕಿಂಗ್‌’ಗೆ ಎರಡನೇ ಸ್ಥಾನ. 2014ರ ನವೆಂಬರ್‌ನಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲಿ ಬರ್ಗರ್‌ ಕಿಂಗ್‌ನ ಮೊದಲನೇ ಶಾಖೆ ಆರಂಭಿಸಲಾಯಿತು. ಆರಂಭವಾದ ಏಳೇ ತಿಂಗಳಲ್ಲಿ ಮುಂಬೈ, ದೆಹಲಿ, ಪುಣೆ ಹಾಗೂ ಚಂಡೀಗಡ ಸೇರಿದಂತೆ ಒಟ್ಟು 18 ನಗರಗಳಲ್ಲಿ ರೆಸ್ಟೋರೆಂಟ್‌ಗಳು ಶಾಖೆ ತೆರೆದವು.

‘ಎಲ್ಲ ಪ್ರದೇಶಗಳನ್ನೂ ಗಮನದಲ್ಲಿರಿಸಿಕೊಂಡು ಇನ್ನು ಅರವತ್ತು ದಿನಗಳಲ್ಲಿ  ನಗರದ ವಿವಿಧೆಡೆ ಆರು ಬರ್ಗರ್‌ ಕಿಂಗ್‌ ರೆಸ್ಟೋರೆಂಟ್‌ಗಳನ್ನು ಆರಂಭಿಸಲಿದ್ದೇವೆ. ನಗರಿಗರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ರುಚಿಯ ಬರ್ಗರ್‌ ನೀಡುವುದು ನಮ್ಮ ಧ್ಯೇಯ’ ಎಂದು ಉತ್ಸಾಹದಿಂದ ಹೇಳುತ್ತಾರೆ ರಾಜೀವ್‌.

ಆರು ತಿಂಗಳ ಅಧ್ಯಯನ
‘ನಾವು ಯಾವುದೇ ರಾಷ್ಟ್ರದಲ್ಲಿ ಅಥವಾ ಪ್ರದೇಶದಲ್ಲಿ ನಮ್ಮ ಶಾಖೆ ಆರಂಭಿಸುವುದಕ್ಕೂ ಮೊದಲು ಸ್ಥಳೀಯ ಜನರ ಆಹಾರ ಪದ್ಧತಿ ಹಾಗೂ ಅವರ ರುಚಿಯ ಕುರಿತು ಅಧ್ಯಯನ ನಡೆಸುತ್ತೇವೆ. ಹಾಗೆಯೇ ಭಾರತದಲ್ಲಿಯೂ ಬರ್ಗರ್‌ ಕಿಂಗ್‌ ಶಾಖೆ ಆರಂಭಿಸುವ ಮುಂಚೆ ಜನರ ರುಚಿ ಹಾಗೂ ಅಭಿರುಚಿಯ ಕುರಿತು ಆರು ತಿಂಗಳು ಅಧ್ಯಯನ ನಡೆಸಿದೆವು. ಬರ್ಗರ್‌ ಕಿಂಗ್‌ ಮೆನುವನ್ನು ಸಂಪೂರ್ಣ ಬದಲಾಯಿಸುವ ಸ್ವಾತಂತ್ರ್ಯ ಸಿಕ್ಕಿರುವುದು ನಮ್ಮ ದೇಶಕ್ಕೆ ಮಾತ್ರ. ಭಾರತೀಯರ ಸಂಸ್ಕೃತಿಗೆ ತಕ್ಕಂತೆ ಬರ್ಗರ್‌ಗಳ ರುಚಿ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಕೂಡ ಸ್ಥಳೀಯರ ರುಚಿಗೆ ಮನ್ನಣೆ ನೀಡಿ ನಮ್ಮ ರೆಸ್ಟೋರೆಂಟ್‌ಗಳ ಖಾದ್ಯಗಳನ್ನು ತಯಾರಿಸಲಾಗಿದೆ’ ಎಂದು  ತಮ್ಮ ರೆಸ್ಟೋರೆಂಟ್‌ನ ಆಹಾರದ ಬಗ್ಗೆ ರಾಜೀವ್‌ ಹೇಳಿಕೊಂಡರು.

ವಿಶೇಷ ತಿನಿಸು ವೋಪರ್‌
‘ವೋಪರ್‌’ ಬರ್ಗರ್‌ ಕಿಂಗ್‌ನ ಸಿಗ್ನೇಚರ್‌ ಡಿಶ್‌. ಜಗತ್ತಿನ ವಿವಿಧೆಡೆ ವೋಪರ್‌ ಅನ್ನು ಬೀಫ್‌ನಿಂದ ತಯಾರಿಸಲಾಗುತ್ತದೆ. ಆದರೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಮೂರು ರೀತಿಯ ಪ್ರೊಟೀನ್‌ಗಳನ್ನು ಬಳಸಿ ವೋಪರ್‌ ಅನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಚಿಕನ್‌, ಮಟನ್‌ ಹಾಗೂ ವೆಜ್‌ ಮೂರೂ ವಿಧದ ಪ್ರತ್ಯೇಕ ವೋಪರ್‌ಗಳು ಬರ್ಗರ್‌ ಕಿಂಗ್‌ನಲ್ಲಿ ಸವಿಯಲು ಸಿದ್ಧ.

ವೋಪರ್‌ಗಳಷ್ಟೇ ಅಲ್ಲದೆ ಕ್ರಿಸ್ಪಿ ವೆಜ್, ಕ್ರಿಸ್ಪಿ ಚಿಕನ್‌, ಪನೀರ್‌ ಕಿಂಗ್‌, ವೆಜ್‌ ಚಿಲ್ಲಿ ಚೀಸ್‌, ಚಿಕನ್‌ ತಂದೂರ್‌ ಗ್ರಿಲ್‌ ಹಾಗೂ  ಏಳು ಬಗೆಯ ಎಕ್ಟ್ರಾ ಲಾಂಗ್‌ ಬರ್ಗರ್‌ಗಳು ಬರ್ಗರ್‌ ಕಿಂಗ್‌ನಲ್ಲಿ ಲಭ್ಯ. ಚೀಸಿ ಫ್ರೈಸ್‌, ಚೀಸಿ ಇಟಾಲಿಯನ್‌ ಫ್ರೈಸ್‌,  ಫೈರಿ ಫ್ರೈಸ್‌, ಚೀಸಿ ಚಿಕನ್‌ ಫ್ರೈಸ್‌ ಚಿಲ್ಲಿ ಚೀಸೋಸ್‌, ಚಿಕನ್‌ ನಗ್ಗೆಟ್ಸ್‌, ಆನಿಯನ್‌ ರಿಂಗ್ಸ್‌ ವ್ಯಂಜನ ತಿನಿಸುಗಳ ರೂಪದಲ್ಲಿ ಲಭ್ಯ. ಇಲ್ಲಿ ತಯಾರಿಸುವ ಯಾವುದೇ ಖಾದ್ಯದಲ್ಲಿಯೂ ಎಂಎಸ್‌ಜಿಯನ್ನು (ಮ್ಯಾಗಿ ಶ್ಯಾವಿಗೆಯಲ್ಲಿ ಪತ್ತೆಯಾದಂಥ ಮೋನೊ ಸೋಡಿಯಂ ಗ್ಲೂಟಮೇಟ್‌) ಬಳಸದಿರುವುದು ವಿಶೇಷ.

ಕಡಿಮೆ ಬೆಲೆಗೆ ಲಭ್ಯ
ಬರ್ಗರ್‌ ಕಿಂಗ್‌ನ ಎಲ್ಲಾ ಖಾದ್ಯಗಳೂ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರಕಲಿದೆ. ವೆಜ್‌ ಕಾಂಬೋ
(ಬರ್ಗರ್‌, ಫ್ರೆಂಚ್‌ ಫ್ರೈಸ್‌ ಮತ್ತು ಪಾನೀಯ)– ₨69 ಹಾಗೂ ನಾನ್‌–ವೆಜ್‌ ಕಾಂಬೋ (ನಾನ್‌– ವೆಜ್‌ ಬರ್ಗರ್‌, ಫ್ರೆಂಚ್‌ ಫ್ರೈಸ್‌ ಮತ್ತು ಪಾನೀಯ)– ₨79. ಯಾವುದೇ ಬರ್ಗರ್‌ ಕೊಂಡರೂ ಅದನ್ನು ಕಾಂಬೋಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬಹುದಾದ ವಿಶೇಷ ಆಯ್ಕೆಯನ್ನು ‘ಬರ್ಗರ್‌ ಕಿಂಗ್‌’ ತನ್ನ ಗ್ರಾಹಕರಿಗೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT