ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಫೆಬ್ರುವರಿ 24, ಶುಕ್ರವಾರ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

 ಫೆಬ್ರುವರಿ 24, ಶುಕ್ರವಾರ
 ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನ ಜ್ಯೋತಿ ಸಭಾಂಗಣ. ಆಲ್ ಇಂಡಿಯಾ ಮೂಟ್ ಕೋರ್ಟ್ ಸ್ಪರ್ಧೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಉದ್ಘಾಟನೆ. ಅತಿಥಿಗಳು: ಮಾಜಿ ಅಡ್ವೋಕೆಟ್ ಜನರಲ್ ಡಾ.ಬಿ.ವಿ.ಆಚಾರ್ಯ. ಅಧ್ಯಕ್ಷತೆ: ಡಾ.ಎನ್.ಪ್ರಭುದೇವ್.  ಸಂಜೆ 5.30.

ಕಾಮಧೇನು ಪುಸ್ತಕ ಭವನ: ಶಾಸಕರ ಭವನ.  ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್. ಜಿ.ಸಿದ್ಧರಾಮಯ್ಯ ಅವರಿಂದ ಲೇಖಕಿ ಡಾ.ವಸುಂಧರಾ ಭೂಪತಿ ಅವರು ಬರೆದಿರುವ `ಆರೋಗ್ಯ ಸಂಗಾತಿ~ ಸಂಪುಟ-1 ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಡಾ.ಮನು ಬಳಿಗಾರ್ ಅವರಿಂದ  ಎರಡು ಸಮಗ್ರ ಸಂಪುಟಗಳ ಲೋಕಾರ್ಪಣೆ. ಸಂಜೆ 5.

ಡಿ.ಸುಬ್ಬಯ್ಯ ಫೈನ್ ಆರ್ಟ್ಸ್ ಟ್ರಸ್ಟ್: ಮಲ್ಲಿಕಾರ್ಜುನ ವೇದ ಪಾಠ ಶಾಲಾ, ಜ್ಯೋತಿ ಕಾರ್ಖಾನೆ ಬಳಿ, ನಂ.31, ಪಂಪ ಮಹಾಕವಿ ರಸ್ತೆ. ಬಸವನಗುಡಿ. ಸಮುದಾಯ ಭವನ. ಡಾ.ಸುಕನ್ಯಾ ಪ್ರಭಾಕರ್ ಅವರಿಂದ ಮುತ್ತಯ್ಯ ಭಾಗವತರ್, ನವಗ್ರಹ ಕೀರ್ತನೆ. ಎಸ್.ಸಂಗೀತ (ವಯಲಿನ್), ಎ.ರಾಧೇಶ್ (ಮೃದಂಗ). ಸಂಜೆ 6.

ಶ್ರೀ ಮಹಾಗಣಪತಿ ಸಂಗೀತ ಸಭಾ:56, ಎ, ರಾಜರಾಜೇಶ್ವರಿ ದೇವಾಲಯ, ದೇವಸಂದ್ರ.  ಪುರಂದರ ದಾಸರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ. ಉದ್ಘಾಟನೆ: ದಂಡಪಾಣಿ. ಕೆ.ವಿ.ಶ್ರೀನಿವಾಸ ರಾವ್, ಕೆ.ಆರ್. ನಾರಾಯಣಾಚಾರ‌್ಯ. ಸಂಜೆ 6.

ಉದಯ ಭಾನು ಕಲಾ ಸಂಘ:.ಸಾಂಸ್ಕೃತಿಕ ಭವನ, (ಮೊದಲ ಮಹಡಿ), ಉಪನ್ಯಾಸ ಸಭಾಂಗಣ, ಗವಿಪುರ ಸಾಲು ಛತ್ರಗಳ ಎದುರು. ಕೆಂಪೇಗೌಡ ನಗರ. ತಿಂಗಳ ಚಿಂತನ ಮಾಲೆಯಲ್ಲಿ ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಕಾರ್ಯದರ್ಶಿ ಡಾ.ಕೆ.ಎಸ್. ಸಮೀರ ಸಿಂಹ ಅವರಿಂದ `ಶಿಕ್ಷಣ ನೀತಿಯ ಉದ್ದೇಶ ಮತ್ತು ಗುರಿ. ಸರ್ವ ಶಿಕ್ಷಣ ಅಭಿಯಾನದ ಹಿರಿಯ ಸಮಾಲೋಚಕರಾದ ಎ.ಎಸ್. ಸೀತಾರಾಮು ಅವರಿಂದ `ಶಿಕ್ಷಣ ನೀತಿಯಲ್ಲಿ ವಿನ್ಯಾಸದ ಸ್ಥಿತಿ-ಗತಿ ಮತ್ತು ಮುಂದಿನ ಸವಾಲುಗಳು~ ಕುರಿತು ಉಪನ್ಯಾಸ. ಸಂಜೆ 5.30.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್:   ಟಾಟಾ ಸಿಲ್ಕ್ ಫಾರಂ. ಶಾಲಾ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣಾ ಸಮಾರಂಭ. ಅತಿಥಿಗಳು: ತ್ಯಾಗರಾಜನಗರ ಆರ್.ವಿ. ಕ್ಯಾಂಪಸ್ ಆಡಳಿತಾಧಿಕಾರಿ ವೈ.ಪಿ.ಪದ್ಮರಾಜಯ್ಯ. ಆರ್.ವಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ವೆಂಕಟೇಶ. ಬೆಳಿಗ್ಗೆ 10.

ಸರ್ಕಾರಿ ಕಲಾ  ಕಾಲೇಜು: ಬಾಪೂಜಿ ಸಭಾಂಗಣ, ಡಾ.ಅಂಬೇಡ್ಕರ್ ಬೀದಿ. ಭಾರತೀಯ ಸಂವಿಧಾನದ ವಜ್ರಮಹೋತ್ಸವ. ಉದ್ಘಾಟನೆ: ಡಾ.ಎಚ್.ಆರ್. ಭಾರದ್ವಾಜ್. ಬೆಳಿಗ್ಗೆ 11.
ಕರ್ನಾಟಕ ರಕ್ಷಣಾ ವೇದಿಕೆ: ಕೃಷ್ಣ ಪರಿಷನ್ಮಂದಿರ, ಚಾಮರಾಜಪೇಟೆ. ಸಚಿವ ಆರ್.ಅಶೋಕ್ ಅವರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಅವರಿಗೆ ಸನ್ಮಾನ. ಉದ್ಘಾಟನೆ: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ. ನಂತರ ಆನಂದ ಮಾದಲಗೆರೆ ಮತ್ತು ತಂಡದಿಂದ ಗಾಯನ. ಸಂಜೆ 6.

ಐಸಿಎಯುವಿ: ಗಾಲ್ಪ್ ರೆಸಾರ್ಟ್. ಅನ್‌ಮ್ಯಾನಡ್ ವೆಹಿಕಲ್ಸ್ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ. ಅತಿಥಿಗಳು: ಡಾ.ವಿ.ಕೆ.ಸರಸ್ವತ್. ಡಾ.ಶಿವ ಎಸ್.ಬಂಡ. ಬೆಳಿಗ್ಗೆ 10.

ಬೆಂಗಳೂರು ವಿಶ್ವವಿದ್ಯಾಲಯ: ಯೋಗ ಅಧ್ಯಯನ ಕೇಂದ್ರ, ಜ್ಞಾನಭಾರತಿ ಆವರಣ. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಪ್ರಯುಕ್ತ `ವ್ಯಕ್ತಿತ್ವ ವಿಕಸನ ಶಿಬಿರ~. ಸ್ವಾಮಿ ಚಂದ್ರೇಶಾನಂದಜೀ ಅವರಿಂದ ಉಪನ್ಯಾಸ. ಅತಿಥಿ: ಪ್ರೊ. ಸಣ್ಣರಾಮ. ಅಧ್ಯಕ್ಷತೆ: ನಾಗೇಶ್ ಬೆಟ್ಟಕೋಟೆ. ಮಧ್ಯಾಹ್ನ 3.30.

ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್: ಎಚ್‌ಆರ್‌ಬಿಆರ್ ಬಡಾವಣೆ, ಕಲ್ಯಾಣ ನಗರ. ಸಾಫ್ಟ್ ಕಂಪ್ಯೂಟಿಗ್ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಬೆಳಿಗ್ಗೆ 9.30

ಸಾಂಸ್ಕೃತಿಕ ಕಾರ್ಯಕ್ರಮಗಳು
ರಿನೈಸೆನ್ಸ್ ಆರ್ಟ್ ಗ್ಯಾಲರಿ: ಕಲಾ ಚಿತ್ರ ಸಮೂಹ ಪ್ರದರ್ಶನ. ನಂ.104, ಕನ್ನಿಂಗ್ ಹ್ಯಾಂ ರಸ್ತೆ. ಬೆಳಿಗ್ಗೆ 10.
ನೃತ್ಯಗ್ರಾಮ: ಚೌಡಯ್ಯ ಸಭಾಂಗಣ, `ಸಂಹಾರ~ ನೃತ್ಯ ರೂಪಕ. ಸಂಜೆ 7.

ಶಾರದಾ ಸಂಗೀತ ಹಾಗೂ ನೃತ್ಯ ಅಕಾಡೆಮಿ: ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಆವರಣ, ನಂ.14, ಶಾರದಾ ಹಿಲ್ಸ್, ಚಿಕ್ಕಬೆಟ್ಟ ಹಳ್ಳಿ, ಹೆಸರುಘಟ್ಟ ರಸ್ತೆ. ಪದವಿ ಪ್ರದಾನ ಸಮಾರಂಭ. ಅತಿಥಿಗಳು: ಸಂಸ್ಕೃತ ವಿವಿ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್. ಶಾಸಕ ಎಸ್.ಆರ್.ವಿಶ್ವನಾಥ್. ಸಂಜೆ 4.  ನಂತರ ಬಿ.ಕೆ.ಅನಂತರಾಮ ಅವರಿಂದ ಕೊಳಲು ವಾದನ.

ಆರಾಧನೆಯಲ್ಲಿ ಭಾಗವಹಿಸುವ ಇತರ ಕಲಾವಿರು: ಆರ್. ಚಂದ್ರಿಕಾ, ರಮಾಕಾಂತ್, ಡಾ.ವರದರಂಗನ್, ಕೃಷ್ಣಪ್ರಸಾದ್, ವಿನಯ ಸರ್ವ, ಗೋಪಾಲ್, ವಿ.ಜೋಸ್ಯರ್. ಪಕ್ಕವಾದ್ಯದಲ್ಲಿ: ವಿ.ಎಸ್.ರಾಜಗೋಪಾಲ್, ಎಂ.ಎ.ಕೃಷ್ಣಮೂರ್ತಿ, ಬಿ.ಧ್ರುವರಾಜ್, ಎಂ.ಗುರುರಾಜ್, ಬಿ.ರಾಮನಾಥ್. ಅತಿಥಿಗಳು: ಸಂಸದ ಡಿ.ಬಿ.ಚಂದ್ರೇಗೌಡ, ಸದಾಶಿವನಗರ ರೊಟರಿ ಅಧ್ಯಕ್ಷ ಬಿ.ಎಲ್.ನಾಗೇಂದ್ರ ಪ್ರಸಾದ್. ಶಾರದಾ ವಿದ್ಯಾನಿಕೇತನ ಸಂಸ್ಥೆಗಳ ಕಾರ್ಯದರ್ಶಿ ವೈ.ಎನ್.ಶರ್ಮ. ಸಂಜೆ 5.

ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್:
ಟೆರ‌್ರಿ ಕಾಂಪ್ಲೆಕ್ಸ್, 4ನೇ ಮೇನ್, 2ನೇ ಕ್ರಾಸ್, ದೊಮ್ಮಲೂರು 2ನೇ ಹಂತ. ಅಶೋಕ್ ಹುಗ್ಗಣವಾರ್ ಅವರಿಂದ ಶಾಸ್ತ್ರೀಯ ಸಂಗೀತ. ಸಂಜೆ 6.30.

ಐಸಿಸಿಆರ್ ಬೆಂಗಳೂರು: `ಚಿತ್ರಾಂಗದ~ ಒಡಿಸ್ಸಿ ನೃತ್ಯ ರೂಪಕ. ಸಂಜೆ 6.30.

ನ್ಯಾಷನಲ್ ಪದವಿ ಕಾಲೇಜು: ಬಸವನಗುಡಿ. ಡಾ.ಚಂದ್ರಶೇಖರ ಕಂಬಾರ ಅವರಿಗೆ ಸನ್ಮಾನ ಹಾಗೂ ಕಂಬಾರ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ. ಅಧ್ಯಕ್ಷತೆ: ಎನ್.ಇ.ಎಸ್.ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ. ಬೆಳಿಗ್ಗೆ 10. ಸಂಜೆ 4.30ಕ್ಕೆ ಕ್ರಿಯೇಟಿವ್ ಥಿಯೇಟರ್‌ನ ಲಕ್ಷ್ಮಿ ಚಂದ್ರಶೇಖರ್ ಅವರಿಂದ `ಸಿಂಗಾರೆವ್ವ ಮತ್ತು ಅರಮನೆ~ ಕಾದಂಬರಿ ಆಧಾರಿತ ಏಕವ್ಯಕ್ತಿ ಪ್ರದರ್ಶನ.  

ನಿರ್ವಾಣಿ ಭಗವತಿ ಮತ್ತು ಅಣ್ಣಮ್ಮದೇವಿಯವರ ಉತ್ಸವ: ಪ್ರಾರ್ಥನಾ ಮಂದಿರ, ಭೈರಸಂದ್ರ, 4ನೇ ಬ್ಲಾಕ್, ಜಯನಗರ ಈಜುಕೊಳದ ಸಮೀಪ. ದೇವಿಗೆ ಪಾರ್ಥಸಾರಥಿ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ದೀಪೋತ್ಸವ. ಸಂಜೆ 7.

ನಿರ್ವಾಣಿ ಭಗವತಿ ಸೇವಾ ಮಂಡಳಿ: ಎಂ.ಆರ್.ಲೇನ್, ಮನವಾರ್ತಿಪೇಟೆ. ನಿರ್ವಾಣಿ ಭಗವತಿ ಮತ್ತು ಅಣ್ಣಮ್ಮದೇವಿ ಉತ್ಸವದ ಪ್ರಯುಕ್ತ ದೇವಿಗೆ ದೀಪೋತ್ಸವ. ಸಂಜೆ 7.
ಬನಗಿರಿ ವರಸಿದ್ಧಿ ವಿನಾಯಕ ಮಂಡಳಿ ಟ್ರಸ್ಟ್: 100 ಅಡಿ ರಸ್ತೆ, ಬನಶಂಕರಿ 3ನೇ ಹಂತ. 24ನೇ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ 9ಕ್ಕೆ ಸಾಮೂಹಿಕ ಚಂಡಿಕಾ ಹೋಮ. ಸಂಜೆ 6.30ಕ್ಕೆ ಅಷ್ಟಲಕ್ಷ್ಮಿ ಪೂಜೆ.

ವಿಆರ್‌ವಿ ಟ್ರಸ್ಟ್: ಚೌಡೇಶ್ವರಿ ದೇವಸ್ಥಾನ, ಚೌಡೇಶ್ವರಿ ಬಡಾವಣೆ, ದೊಡ್ಡಬೆಟ್ಟಹಳ್ಳಿ, ವಿದ್ಯಾರಣ್ಯಪುರ. ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಟಾಪನಾ ಸಮಾರಂಭದಲ್ಲಿ ಬೆಳಿಗ್ಗೆ 5ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ. ಬಳಿಕ ದೇವಿಗೆ
ಮಹಾಕುಂಭಾಭಿಷೇಕ. 12 ಗಂಟೆಗೆ ಮಹಾಮಂಗಳಾರತಿ. ಭಾಗವತರು: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಿರಿಸಂಪಿಗೆ ಕಂಬಾರರ ರಂಗಸಂಭ್ರಮದಲ್ಲಿ ಅವರೊಂದಿಗೆ ಸಂವಾದ. ಪಾಲ್ಗೊಳ್ಳುವವರು: ಪತ್ರಕರ್ತ ರವಿ ಬೆಳಗೆರೆ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಲೇಖಕಿ ಡಾ.ವಿಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯಕ್ತ ಡಾ.ಮನು ಬಳಿಗಾರ್. ಸಂಜೆ 5.30ಕ್ಕೆಬಳಿಕ ಬೆನಕ ತಂಡದಿಂದ ಜೋಕುಮಾರ ಸ್ವಾಮಿ ನಾಟಕ ಪ್ರದರ್ಶನ. ಸಂಜೆ 7.30.
ದೇವಗಿರಿ ಶ್ರೀಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ. ಪ್ರಹ್ಲಾದಾಚಾರ್ಯ ಉಮರ್ಜಿ ಅವರಿಂದ ಪ್ರವಚನ. ಸಂಜೆ 6.30.ಇಂಡಿಯನ್

ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ನಂ.6, ಬಿ.ಪಿ.ವಾಡಿಯಾ ರಸ್ತೆ. ಸುದೀಪ್ ಅವರಿಂದ ಪಾಶ್ಚಾತ್ಯ ಶಾಸ್ತ್ರೀಯ ವಾದ್ಯಸಂಗೀತ ಕಾರ್ಯಕ್ರಮ. ಸಂಜೆ 4.
ಇಥೋಸ್: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನ ಸಮೀಪ, ಹನುಮಂತನಗರ, ಬಸವನಗುಡಿ. ರಮ್ಯಾನಾಯರ್, ಅಖಿಲೇಶ್ ಉನ್ನಿಥಾನ್, ರಾಮ್ ಕುಮಾರ್, ಅಮರೇಶ್ ಕೆಂಪಣ್ಣ ಹಾಗೂ ರಾಕೇಶ್ ಎಂಪಿಎಸ್ ಅವರಿಂದ ನೃತ್ಯ ಕಾರ್ಯಕ್ರಮ. ಸಂಜೆ 7.30.ಟಿಕೆಟ್‌ಗಳಿಗೆ: 9986008210

ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ: ಟೀಚರ್ಸ್ ಬಡಾವಣೆ, ದಯಾನಂದ ಕಾಲೇಜು ಬಳಿ. ಕುಮಾರ ಸ್ವಾಮಿ ಬಡಾವಣೆ.  ಆಟ ಮಾಟ ಸಾಂಸ್ಕೃತಿಕ ಕೇಂದ್ರದಿಂದ ಸೀರೆ ನಾಟಕ. (ನಿ: ಮಾನಂತು). ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT