ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾವಂತ ಪ್ರಭವ್

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಜತೆಗೆ ಅದರಲ್ಲಿ ಆಸಕ್ತಿಯೂ ಬೇಕು, ಸಾಕಷ್ಟು ಶ್ರಮವನ್ನೂ ಹಾಕಬೇಕು, ಅದೃಷ್ಟವೂ ಇರಬೇಕು. ರಾಜಾಜಿನಗರದ ಶ್ರೀ ವಾಣಿ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿ ಪ್ರಭವ ಪಿ. ಹೆಗಡೆ ಕಲೆಯನ್ನು ಸಿದ್ಧಿಸಿಕೊಂಡ ಬಹುಮುಖ ಪ್ರತಿಭೆ. ಈತ ಸುಬ್ರಹ್ಮಣ್ಯ ನಗರದ ನಾಟ್ಯೇಶ್ವರ ನೃತ್ಯ ಶಾಲೆಯಲ್ಲಿ ಸೀನಿಯರ್ ಜೊತೆಗೆ ಯಕ್ಷಗಾನ ಹಾಗೂ ಕೂಚಿಪುಡಿ ಮಾತ್ರವಲ್ಲದೆ ಜಾನಪದ, ಸಿನಿಮಾ ನೃತ್ಯ ಶೈಲಿಯನ್ನು ಅಭ್ಯಾಸ ಮಾಡಿದ್ದಾನೆ.

ಕಥೆ ಹೇಳುವುದು, ಕವನ ರಚನೆ, ಚಿತ್ರ ರಚನೆ, ಜೋಕ್ಸ್ ಹೇಳುವುದು, ರಂಗೋಲಿ ಬಿಡಿಸುವುದು ಹೀಗೆ ವಿವಿಧ ಹವ್ಯಾಸಗಳನ್ನು ರೂಡಿಸಿಕೊಂಡಿದ್ದಾನೆ.
ಈತ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವ, ರಾಜಾಜಿನಗರದ ನಿವಾಸಿ ಕೆ.ವಿ. ಪ್ರಕಾಶ್ ಅವರ ಮಗ. ಇದುವರೆಗೆ ರಾಜ್ಯದ ನಾನಾ ಭಾಗಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ 350ಕ್ಕೂ ಹೆಚ್ಚು ಕಲಾ ಪ್ರದರ್ಶನಗಳನ್ನು ನೀಡಿ ಜನ ಮೆಚ್ಚುಗೆ ಗಳಿಸಿದ್ದಾನೆ.

ಟಿವಿ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ತನ್ನ ಬಹುಮುಖಿ ಪ್ರತಿಭೆ ಪ್ರದರ್ಶಿಸಿದ್ದಾನೆ. ಚಿತ್ರವೊಂದರಲ್ಲಿ ಅಭಿನಯಿಸಿದ ಹೆಗ್ಗಳಿಕೆ ಈತನದು. ಈತನ ಪ್ರತಿಭೆಗೆ ಬಂದ ಪ್ರಶಸ್ತಿಗಳ ಸಂಖ್ಯೆ 40ಕ್ಕೂ ಜಾಸ್ತಿ. 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿ ಸನ್ಮಾನಿಸಿವೆ. ಈ ಸಲ ಈತನಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕೂಡ ಬಂದಿದೆ. ಈತನ ಸಂಪರ್ಕ ಸಂಖ್ಯೆ: 98865 55162.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT