ಲಾಲ್‌ಬಾಗ್ ಅಸಂಖ್ಯ ಸಸ್ಯಗಳ ಆಗರ. ಈ ಸಸ್ಯೋದ್ಯಾನಕ್ಕೆ ಆಸ್ಟ್ರೇಲಿಯಾದ ನೀಲಗಿರಿಯನ್ನು 1859ರಲ್ಲಿ ತಂದು ನೆಡಲಾಯಿತು.

ಮಹಾಮಾರಿ ಪ್ಲೇಗ್ ಬೆಂಗಳೂರಿಗೆ ಕಾಲಿಟ್ಟು ನೂರಾರು ಜನರನ್ನು 1898ರಲ್ಲಿ ಬಲಿ ತೆಗೆದುಕೊಂಡಿತ್ತು. ಇಕ್ಕಟ್ಟಾದ ರಸ್ತೆ. ಅನಾರೋಗ್ಯಕರ ವಾಸಸ್ಥಳಗಳಿಂದ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಮನಗಂಡ ಆಗಿನ ಸರ್ಕಾರ ಬೆಂಗಳೂರಿನಲ್ಲಿ ಹೊಸ ಬಡಾವಣೆಗಳನ್ನು ಪ್ರಾರಂಭಿಸಿತು.

ಬೆಂಗಳೂರು ಕಾರ್ಪೊರೇಷನ್ ಎರಡು ಮುನ್ಸಿಪಾಲಿಟಿಗಳನ್ನು ಸೇರಿಸಿದ್ದರಿಂದ ಅಸ್ತಿತ್ವಕ್ಕೆ ಬಂತು (1949) ಆಗ 122 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಪೊರೇಷನ್ ಕಾರ‌್ಯ ನಿರ್ವಹಣೆ ಮಾಡುತ್ತಿತ್ತು.

ಸ್ವಾಮಿ ವಿವೇಕಾನಂದರು 1882ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು.

ಕಬ್ಬನ್ ರಸ್ತೆಯಲ್ಲಿರುವ ಬಿ.ಆರ್.ವಿ. ಕಟ್ಟಡ ಬ್ರಿಟಿಷ್ ಆಡಳಿತ ಕಾಲದಲ್ಲಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಮನರಂಜನಾ ತಾಣವಾಗಿತ್ತು. ನಂತರದ ದಿನಗಳಲ್ಲಿ ಚಲನಚಿತ್ರಗಳ ಪ್ರದರ್ಶನವನ್ನೂ ಆರಂಭಿಸಲಾಯಿತು. ಪ್ರಸ್ತುತ ಆ ಕಲ್ಲಿನ ಕಟ್ಟಡವನ್ನು ಮಿಲಿಟರಿ ಕ್ಯಾಂಟಿನ್ ಆಗಿ ಉಪಯೋಗಿಸಲಾಗುತ್ತಿದೆ.

ಗುಡ್ ಷಪರ್ಡ್ ದಾದಿಯರು 1886ರಲ್ಲಿ ಸೆಂಟ್ ಮಾರ್ಥಾಸ್ ಆಸ್ಪತ್ರೆ ಆರಂಭಿಸಿದಾಗ ಮೈಸೂರು ಅರಸರು ಆಸ್ಪತ್ರೆಗೆ ಭೂಮಿಯನ್ನು ಉಚಿತವಾಗಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.