ಈ ಬ್ಲಾಗನ್ನು ಪರಿಚಯಿಸುವುದು ಕಷ್ಟ. ಓದಿಯೇ ಅರಿಯಬೇಕು. ನೋಡಿಯೇ ತಣಿಯಬೇಕು. ಬ್ಲಾಗಿಗೆ ಭೇಟಿ ಕೊಡುವ ಮೊದಲು ಒಂದೆರಡು ತುಣುಕು ನಿಮ್ಮ ಓದಿಗೆ.

ಹೆಜ್ಜೆ-3
ಬೆರಳ್ಗೆ ಬಾಯಿ!
ಮೊದಮೊದಲು ಒಂದು ಬೆರಳು ಬಾಯಿಯಲ್ಲಿ ಇರುತ್ತಿತ್ತು.
ಈಗೀಗ ಎರಡು ಕೈಗಳಲ್ಲಿನ ಕನಿಷ್ಠ ಎರಡು ಬೆರಳುಗಳು ಬಾಯಿಗೆ ಹೋಗುತ್ತಿವೆ. ಅದರ ಜೊತೆ, ಚಪ್ಪರಿಸಿಕೊಂಡು ಬೆರಳು ಚೀಪುವುದು ನಡೆಯುತ್ತಿದೆ.

ಮೊನ್ನೆ ಸೋಫಿ ಎಂಬ ಚಿಕ್ಕ ಜಿರಾಫೆ ಮರಿ ತೆಗೆದುಕೊಂಡು ಬಂದೆವು. ಸಾನ್ವಿ ತರದ, ಹಲ್ಲು ಮೂಡುವುದಕ್ಕಿಂತ ಮುಂಚಿನ (ಹಲ್ಲು ಮೂಡಿದ) ಮಕ್ಕಳಲ್ಲಿ ತುಂಬಾ ಪ್ರಸಿದ್ಧವಾದುದಂತೆ ಈ ಸೋಫಿ. ರಬ್ಬರಿನಿಂದ ಮಾಡಿದ ಸೋಫಿ, ಸಾನ್ವಿ ಕೈ ಬಾಯಲ್ಲಿ ಆಡಿತು.
ಕುವೆಂಪು `ಬೆರಳ್ಗೆ ಕೊರಳ್~ನಲ್ಲಿ ಹೇಳುವ ರೀತಿಯಲ್ಲಿ, ನಮ್ಮ ಸಾನ್ವಿ `ಬೆರಳ್ಗಳು ನೂರು ಮಡಿ ಲೇಸು, ರಬ್ಬರಿನ ಆ ನಮ್ಮ ಸೂಫಿಗಿಂ~ ಎಂಬಂತೆ ಕೆಲವೇ ದಿನಗಳಲ್ಲಿ ಸಾನ್ವಿ ತನ್ನ ಬೆರಳಿಗೆ ಮರಳಿದಳು!

ಇದರ ಜೊತೆಗೆ ಸಿರಿಲ್ ತಿನ್ನಿಸುವಾಗ ಚಮಚ ಕಚ್ಚುವುದು, ಕುತ್ತಿಗೆ ಸುತ್ತಲಿನ ವಸ್ತ್ರ ಎಳೆದು ಬಾಯಿಗೆ ಹಾಕಿಕೊಳ್ಳುವುದು ಮುಂದುವರಿದಿದೆ.

ಇದಿಷ್ಟು ಸಾನ್ವಿಯ ಬೆರಳುಗಳ ಕತೆಯಾದರೆ, ನಮ್ಮಗಳ ಬೆರಳುಗಳು ಸಾನ್ವಿಗೆ ವಿಸ್ಮಯವುಂಟು ಮಾಡುವ ಆಟಿಕೆಗಳು.

ನಮ್ಮ ಕೈ ಬೆರಳುಗಳನ್ನು ಸಾನ್ವಿ ಮುಂದೆ ಆಡಿಸುತ್ತಿದ್ದರೆ, ಅದನ್ನು ತದೇಕಚಿತ್ತದಿಂದ ನೋಡುತ್ತಿರುತ್ತಾಳೆ. ಬೆರಳುಗಳು ಹೇಗೆ ಓಡಾಡುತ್ತವೆಯೋ, ಹಾಗೇ ಸಾನ್ವಿಯ ದೃಷ್ಟಿ ಹಿಂಬಾಲಿಸುತ್ತದೆ. ಮುಖದಿಂದ ಎಷ್ಟು ದೂರ ಬೆರಳುಗಳನ್ನು ತೆಗೆದುಕೊಂಡು ಹೋದರೂ, ಅದನ್ನೇ ನೋಡುತ್ತಿರುತ್ತಾಳೆ.

ಹೆಜ್ಜೆ-2
ಚಂದ್ರ-ತಾರೆಗಳು ನಲಿಯುವ ಆಕಾಶದಂಗಳದಿಂದ ನಮ್ಮ ಮನೆಗೆ ಮುದ್ದು ತಾರೆಯೊಂದರ ಆಗಮನವಾಗಿದೆ.

ನೋಡಲಿಕ್ಕೆ ಹೊಳೆಯುವ ಪುಟ್ಟ ತಾರೆಯಂತಿರುವ ಈ ನಮ್ಮ ಮಗುವಿನ ಆಗಮನದಿಂದ ನಮ್ಮ ಮನಗಳಲ್ಲಿ ಹೂಮಳೆ ನಡೆದೇ ಇದೆ.
ನಮ್ಮ ಮುದ್ದು ಮಗುವಿಗೆ ನಾವಿಟ್ಟ ಹೆಸರು - ಸಾನ್ವಿ.
ಸಾನ್ವಿಯ ಪುಟ್ಟ ಪುಟ್ಟ ಹೆಜ್ಜೆಗಳ ಗುರುತುಗಳನ್ನು ಹೆಕ್ಕಿ ಜೋಪಾನ ಮಾಡುವ ಚಿಕ್ಕ ಪ್ರಯತ್ನವೇ ಈ ಬ್ಲಾಗ್.

ಸಾನ್ವಿ ಜೊತೆಯಲಿ ಸಾಗುತ್ತ ಮುದ್ದು ಮಗಳ ಈ ಸುಂದರ ಪಯಣದಲ್ಲಿ ನಾವು ಹೆಜ್ಜೆ ಹಾಕುತ್ತಿರುತ್ತೇವೆ.

ಅಂದಹಾಗೆ ಚಿತ್ರದಲ್ಲಿನ ಹೆಜ್ಜೆ ಗುರುತುಗಳು ಸಾನ್ವಿ ಜನಿಸಿದ ಮೊದಲ ದಿನ ಆಸ್ಪತ್ರೆಯಲ್ಲಿ ತೆಗೆದದ್ದು. ಮಗುವಿನ ಅಪ್ಪ-ಅಮ್ಮನಿಗೆ ಅದರ ಪಾದಗಳ ಅಚ್ಚಿರುವ ಒಂದು ನೆನಪಿನ ಕಾಣಿಕೆ ಕೊಡುವ ಸುಂದರ ಪರಿಪಾಠ ಆಸ್ಪತ್ರೆಯಲ್ಲಿದೆ. ಈ ಪಾದಗಳು ಆ ನೆನಪಿನ ಕಾಣಿಕೆಯಿಂದ!
-ಅಪ್ಪ ಅಮ್ಮ

ಹೆಜ್ಜೆ-1
ಪಾರಿಜಾತ ಪುಷ್ಪವೊಂದು
ಗಾಳಿಯಲಿ ತೇಲಿ ಬಂದು
ಅದರ ಸೊಬಗಿನಿಂದ ಮೋಹಗೊಂಡು
ಬೊಗಸೆಯೊಡ್ಡಿ ನಾವು ನಿಂತೆವಂದು

ಪುಟ್ಟ ಪುಟ್ಟ ಹೆಜ್ಜೆಗೆ ಹೆಜ್ಜೆ ಸೇರಿ ಆದ ಬ್ಲಾಗ್ ಸಾನ್ವಿ ಕುರಿತಾದುದು (http://oursaanvi.blogspot.in ಫೋಟೊಗಳ ಮೂಲಕ, ವೀಡಿಯೊಗಳ ಮೂಲಕ, ವಸ್ತುಗಳ ಸಂಗ್ರಹದ ಮೂಲಕ ಮಕ್ಕಳ ಬಾಲ್ಯದ ನೆನಪುಗಳನ್ನು ಜತನವಾಗಿ ಇರಿಸುವ ಅಪ್ಪ ಅಮ್ಮಂದಿರು ಸಾಕಷ್ಟು ಮಂದಿಯಿದ್ದಾರೆ. ಇಲ್ಲಿನ ಅಪ್ಪ-ಅಮ್ಮ ತಮ್ಮ ಮಗಳು ಸಾನ್ವಿಯ ಹೆಜ್ಜೆ ಗುರುತುಗಳನ್ನು ಬ್ಲಾಗ್ ಮೂಲಕ ದಾಖಲಿಸಿದ್ದಾರೆ. ಈ ಬ್ಲಾಗ್ನಲ್ಲಿ ಕೂಡ ಚಿತ್ರಗಳಿವೆ, ವೀಡಿಯೊ ಇದೆ. ಎಲ್ಲವನ್ನೂ ಅಕ್ಷರ ಸಂಬಂಧವೊಂದು ಬೆಸೆದಿದೆ. ಇಡೀ ಬ್ಲಾಗ್ ಒಂದು ಕವಿತೆಯಂತಿದೆ.

ಸಾನ್ವಿಯ ಅಮ್ಮ ಹೆರಿಗೆ ಆಸ್ಪತ್ರೆಗೆ ಸೇರಿದಾಗಿನಿಂದ, ಅಲ್ಲಿನ ನೋವು - ಪ್ರಸವ ವೈರಾಗ್ಯದ ಜಿಜ್ಞಾಸೆಯಿಂದ ಬ್ಲಾಗ್ ಶುರುವಾಗುತ್ತದೆ. ಹುಟ್ಟಿದಾಗಿನ ಮಗುವಿನ ಹೆಜ್ಜೆ ಗುರುತುಗಳಿಂದ ಹಿಡಿದು ನಂತರದ ಮಗುವಿನ ಬೆಳವಣಿಗೆಯ ಹಂತಹಂತಗಳನ್ನು ಅಪ್ಪ ಅಮ್ಮ ಇಲ್ಲಿ ದಾಖಲಿಸಿದ್ದಾರೆ. ಭಾವನೆಗಳ ಹರಿವಿಗೆ ಕನ್ನಡವೂ ಒದಗಿದೆ, ಇಂಗ್ಲಿಷ್ ಕೂಡ ಜೊತೆಯಾಗಿದೆ. ಮಗುವಿಗೆ ಲಸಿಕೆ ಕೊಡಿಸಿದ್ದು, ಮೊದಲ ಸಲ ಘನ ಆಹಾರ ಉಣಿಸಿದ್ದು, ವಿದೇಶದಲ್ಲಿರುವ ಅಪ್ಪಅಮ್ಮ ಮಗಳೊಂದಿಗೆ ಭಾರತಕ್ಕೆ ಬಂದದ್ದು- ಹೀಗೆ ಬ್ಲಾಗ್ ತುಂಬಾ ಸಾನ್ವಿಯ ಪುಟ್ಟ ಪುಟ್ಟ ಹೆಜ್ಜೆಗಳು.

ಸಾನ್ವಿ ಎನ್ನುವ ಎಲ್ಲೋ ಇರುವ ಮಗು ಬ್ಲಾಗ್ ಮೂಲಕ ನಮಗೆ ಆಪ್ತವಾಗುತ್ತದೆ. ಎಲ್ಲ ಅಪ್ಪ ಅಮ್ಮಂದಿರಿಗೆ, ಮಗುವಿನ ಕನಸು ಕಾಣುವವರಿಗೆ ಇಷ್ಟವಾಗುವ ಬ್ಲಾಗ್ ಇದು.
ನೀವುಂಟು, ಸಾನ್ವಿಯುಂಟು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.