ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಂದಿದೆ `ಬೈಲೂ'

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತಾದ ಸೀರೆ ವಿನ್ಯಾಸಕ ಬಪ್ಪಾದಿತ್ಯ ಬಿಸ್ವಾಸ್ ಮತ್ತೊಮ್ಮೆ ತಮ್ಮ `ಬೈಲೂ' ಸಂಗ್ರಹದೊಂದಿಗೆ ನಗರಕ್ಕೆ ಆಗಮಿಸಿದ್ದಾರೆ.

ವರ್ಷಕ್ಕೆರಡೇ ಬಾರಿ ಬೆಂಗಳೂರಿನಲ್ಲಿ ತಮ್ಮ ಸೀರೆಗಳ ಪ್ರದರ್ಶನ, ಮಾರಾಟಕ್ಕಾಗಿ ಬರುವ ಬಪ್ಪಾದಿತ್ಯ ಅವರು ಕಳೆದ ಬಾರಿ ಬಂದಾಗ ಏಪ್ರಿಲ್‌ನಲ್ಲಿ ಬರುವುದಾಗಿ ಕೊಟ್ಟ ಮಾತಿನಂತೆ ಮತ್ತಷ್ಟು ವಿಶಿಷ್ಟವಾದ ಸಂಗ್ರಹದೊಂದಿಗೆ ಬಂದಿದ್ದಾರೆ.

ಈ ಬಾರಿಯ ಸಂಗ್ರಹಕ್ಕೆ ಬೇಸಿಗೆ ಸಂಗ್ರಹವೆಂಬ ಹೆಸರಿದ್ದರೂ ಅದರಲ್ಲಿ ರೇಷ್ಮೆ ಮತ್ತು ಹತ್ತಿ ಫ್ಯಾಬ್ರಿಕ್‌ನಲ್ಲಿ ವಿನ್ಯಾಸಗೊಂಡಿರುವ ವೈವಿಧ್ಯಮಯ ಸೀರೆಗಳಿವೆ. ಮಸ್ಲಿನ್, ಚಿಕ್ ಲಿನನ್, ಫ್ರೀಡಂ ಫ್ಯಾಬ್ರಿಕ್ ಎಂದೇ ಕರೆಯಲಾಗುವ ಆಬಿರ್ ಸೀರೆ, `ಬೈಲೂ  ಸ್ಪರ್ಶ' ಪಡೆದ ದಕ್ಷಿಣ ಭಾರತದ ಸಾಂಪ್ರದಾಯಿಕ `ದಕ್ಷಿಣಿ' ಸೀರೆಗಳು, ಬೈಲೂ ಬ್ರಾಂಡ್‌ನ `ಸಿಗ್ನೇಚರ್' ಸೀರೆ ಎಂದೇ ಗುರುತಿಸಲಾಗುವ ಜಾಮ್ದಾನಿ ರೇಷಿಮೆ ಸೀರೆಗಳೂ ಇಲ್ಲಿವೆ.

ಬಪ್ಪಾದಿತ್ಯ ಬಿಸ್ವಾಸ್ ಅವರೊಂದಿಗೆ ಎಂದಿನಂತೆ ಮೀರಾ ಸಾಗರ್ ವಿನ್ಯಾಸದ `ವಯಾ' ಸೀರೆ, ಡ್ರೆಸ್ ಮೆಟೀರಿಯಲ್‌ಗಳೂ ಇವೆ. ಮಹೇಶ್ವರ್ ಬ್ರಾಂಡ್‌ಗೆ ಎರಡು ದಶಕಗಳಿಂದ ವಿನ್ಯಾಸಕರಾಗಿರುವ ಮೀರಾ ಸಾಗರ್ ಅವರು ಈ ಬಾರಿಯ ಸಂಗ್ರಹದಲ್ಲಿ ಬೇಸಿಗೆಗೆ ಒಪ್ಪುವ ಸೀರೆಗಳು, ದುಪಟ್ಟಾಗಳು ಮತ್ತು ಫ್ಯಾಬ್ರಿಕ್‌ಗಳನ್ನು ತಂದಿದ್ದಾರೆ.

ಈ ಪ್ರದರ್ಶನ ಮಾರಾಟವು ಇಂದು ಮತ್ತು ನಾಳೆ (ಏ.5, 6) ವಿಂಡ್ಸರ್ ಮ್ಯಾನರ್‌ನ ಮುಂಭಾಗದಲ್ಲಿರುವ `ರೇನ್‌ಟ್ರೀ' ಸಭಾಂಗಣದಲ್ಲಿ ನಡೆಯಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ. ಸಂಪರ್ಕಕ್ಕೆ: 3272 3251/2235 4396.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT