ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್‌ನಲ್ಲಿ ’ರಾಜಹಂಸ’ಕ್ಕೆ ಪ್ರಶಂಸೆ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಹೊಸಬರ ಸಿನಿಮಾ ’ರಾಜಹಂಸ’ ಚಿತ್ರದ ಹಾಡುಗಳು ಈಗ ಯೂ ಟ್ಯೂಬ್‌, ಎಫ್‌ಎಂಗಳಲ್ಲಿ ಪ್ರಚಾರ ಗಳಿಸುತ್ತಿವೆ. ಈ ಚಿತ್ರದ ಎರಡು ಹಾಡುಗಳಾದ ’ಜನಗಣಮನ ದೇಶ’, ’ಬಾರಮ್ಮಾ ಬಾರೇ ಭಾರತಿ’ ಹಾಡುಗಳು ಎಲ್ಲರ ಬಾಯಲ್ಲಿ ಹರಿದಾಡುತ್ತಿವೆ. ’ಜನಗಣಮನ ದೇಶ’ ಹಾಡನ್ನು ಧನಂಜಯ ದಿಡಗ ಬರೆದಿದ್ದು, ಗಾಯಕ ರಘು ದೀಕ್ಷಿತ್‌ ಹಾಡಿದ್ದಾರೆ. ಜೋಶ್ನಾ ಶ್ರೀಧರ್‌ ಸಂಗೀತ ನೀಡಿದ್ದಾರೆ.

ಈ ಚಿತ್ರದಲ್ಲಿ ನಾಯಕನಿಗೆ ತನಗೆ ಸಿಕ್ಕಿದ ಎಲ್ಲರೊಂದಿಗೆ 10 ನಿಮಿಷ ಕುಳಿತು ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸ ಹೊಂದಿರುತ್ತಾನೆ. ಅದಕ್ಕಾಗಿ ಚಿತ್ರದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ, ಸಾಲುಮರದ ತಿಮ್ಮಕ್ಕ, ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ, ಆನಂದ್‌ ಗುರೂಜಿ, ಅಟೊ ಚಾಲಕರು, ಪೌರ ಕಾರ್ಮಿಕರ ಜೊತೆ ಕಾಫಿ ಕುಡಿದು ನಾಯಕ ಗೌರಿ ಶಿಖರ್‌ ಸೆಲ್ಫಿ ತೆಗೆದುಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕೆ ಈ ತಂತ್ರವನ್ನೇ ಚಿತ್ರತಂಡ ಬಳಸಿಕೊಂಡಿದ್ದು, ನಟರಾದ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಶ್ರೀ ಮುರಳಿ ಮೊದಲಾದವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಈ ಚಿತ್ರ ಆಗಸ್ಟ್‌ ಮೂರನೇ ವಾರ ಬಿಡುಗಡೆಯಾಗಲಿದೆ. ನಾಯಕನಾಗಿ ಗೌರಿಶಿಖರ್‌, ನಾಯಕಿಯಾಗಿ ’ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌ ನಟಿಸಿದ್ದಾರೆ. ಚಿತ್ರವನ್ನು ಜಡೇಶ್‌ಕುಮಾರ್‌ ಹಂಪಿ ನಿರ್ದೇಶನ, ಆರೂರು ಸುಧಾಕರ್‌ ಛಾಯಾಗ್ರಹಣ ಮಾಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT