ಪತ್ರಿಕೆ, ಕತೆ, ನಾಟಕ, ಕವನ, ಕಾದಂಬರಿ, ಸಿನಿಮಾ ಹಾಗೂ ಚಳವಳಿ ಮೂಲಕ ನಾಡಿನ ಅಸಂಖ್ಯಾತ ಜಾಣ–ಜಾಣೆಯರನ್ನು ರೂಪಿಸಿದ ಕವಿ ಪಿ. ಲಂಕೇಶ್ ಅವರು ನಮ್ಮನ್ನು ಅಗಲಿ ಇಂದಿಗೆ (ಜ.25) ಹದಿನಾಲ್ಕು ವರ್ಷ.

ಇಂದಿಗೂ ಅಪಾರ ಓದುಗ ಅಭಿಮಾನಿಗಳನ್ನು ಹೊಂದಿದ ಪಿ. ಲಂಕೇಶ್ ‘ಮೇಷ್ಟ್ರು’ ಅವರ ನೆನಪಿನಲ್ಲಿ ಕವಿ ನಾಗತಿಹಳ್ಳಿ ರಮೇಶ್ ಅವರು ಗೆಳೆಯರನ್ನು ಕಟ್ಟಿಕೊಂಡು ‘ಮನದ ಮಿಂಚು’ ಕಾರ್ಯಕ್ರಮದ ಮೂಲಕ ಗುರುವಿಗೆ ನಮನ ಸಲ್ಲಿಸುತ್ತಿದ್ದಾರೆ.

ಶನಿವಾರ (ಜ.25) ಜೆ.ಸಿ.ರಸ್ತೆಯ ಸಂಸ ಬಯಲು ರಂಗಮಂದಿರದಲ್ಲಿ (ರವೀಂದ್ರ ಕಲಾಕ್ಷೇತ್ರ ಹಿಂಭಾಗ) ಸಂಜೆ 5ಕ್ಕೆ ತೆಲುಗಿನ ಖ್ಯಾತ ನೆಲದೊಡಲ ಹಾಡುಗಾರ ಗೋರಟಿ ವೆಂಕನ್ನ ಅವರಿಂದ ಆರಂಭ ಗೀತೆ. ಉದ್ಘಾಟನೆ: ಪೌರ ಕಾರ್ಮಿಕರಿಂದ (ಜಲಗಾರರು).

ಮನದಂಗಳದಿ ಮಾತುಕತೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಚಿವ ಕಿಮ್ಮನೆ ರತ್ನಾಕರ, ಕವಿ ಸ.ರಘುನಾಥ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್, ಲೇಖಕಿ ಸುಧಾ ಚಿದಾನಂದಗೌಡ. ಜನಪದ ಗಾಯಕರಾದ ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಸುಮತಿ ಅವರಿಂದ ಗೀತ ಗಾಯನ.

ಸಂಜೆ 7ಕ್ಕೆ ‘ನೆಲದ ನಕ್ಷತ್ರ’ ಪುರಸ್ಕಾರ: ಸ.ರಘುನಾಥ್ (ಸಾಹಿತ್ಯ), ಗೋರಟಿ ವೆಂಕನ್ನ (ಜನಪದ ಸಂಗೀತ), ಪಿ.ಜೆ. ಗೋವಿಂದರಾಜು (ಕೃಷಿ ಮತ್ತು ಚಳವಳಿ), ಸುಮತಿ ಮೂರ್ತಿ (ಸಂಗೀತ ಮತ್ತು ಸಮಾಜಸೇವೆ), ತುಮ್ಮಲ ಚೈತನ್ಯ (ಗಾಯಕಿ, ಜನಪರ ಹೋರಾಟಗಾರ್ತಿ), ರತ್ನಾ (ರಂಗಭೂಮಿ ಮತ್ತು ಸಂಗೀತ), ಎಂ.ಎಸ್. ಜಹಾಂಗೀರ್ (ರಂಗಭೂಮಿ, ಕಿರುತೆರೆ), ಎಲ್.ಸಿ. ನಾಗರಾಜ್ (ಸಾಹಿತ್ಯ, ಸಹಜ ಕೃಷಿ), ದೇವತಾ ನಾಗೇಶ್ (ಚಿತ್ರಕಲೆ), ಆಲೂರು ದೊಡ್ಡನಿಂಗಪ್ಪ (ಸಾಹಿತ್ಯ), ಜೋಸೆಫ್ ಅಭಿನಯ (ರಂಗಭೂಮಿ), ಎಂ.ಎಲ್. ಮಧುಕರ್ (ಸಾಹಿತ್ಯ ಮತ್ತು ರಂಗ ಶಿಕ್ಷಣ).

ರಾತ್ರಿ 10ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಡ್ಯದ ನೀಲಗಾರ ಸಿದ್ದರಾಜು ಅವರಿಂದ ‘ಮಂಟೆಸ್ವಾಮಿ ಕಾವ್ಯ’.
ಎನ್. ಸುದರ್ಶನ್ ನಿರ್ದೇಶನದ ‘ತಲ್ಲಣ’ ಹಾಗೂ ಗಿರಿರಾಜ್ ನಿರ್ದೇಶನದ ‘ಜಟ್ಟ’ ಚಲನಚಿತ್ರಗಳ ಪ್ರದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.