ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರಿಕಾ ಸೌಂದರ್ಯ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಫ್ಯಾಷನ್ ಪರಿಕರಗಳಿಗೆ ಹೆಸರಾದ ಲೈಫ್‌ಸ್ಟೈಲ್‌ನ ಕೋರಮಂಗಲ ಓಯಾಸಿಸ್ ಮಾಲ್ ಮಳಿಗೆಯಲ್ಲಿ ಅಂದು ಮಧ್ಯಾಹ್ನ `ಚಕ್ ದೆ ಇಂಡಿಯಾ~ ಚಿತ್ರದ ನಾಯಕಿ ಸಾಗರಿಕಾ ಘಾಟ್ಗೆ ಬಂದಿದ್ದರು. ಹೆಸರಾಂತ ಮೇಕಪ್ ತಜ್ಞ ರಾಬರ್ಟ್ ಕೈಯಿಂದ ಮೇಕಪ್ ಮಾಡಿಸಿಕೊಂಡರು.
 
`ನೀವೂ ಸುಂದರಿಯಾಗಿ ಕಾಣಬಹುದು~ ಎಂದು ನೆರೆದ ಯುವತಿಯರಿಗೆ ಹುರಿದುಂಬಿಸಿದರು. ಈ ಮೂಲಕ ಲೈಫ್‌ಸ್ಟೈಲ್ ನಡೆಸುತ್ತಿರುವ `ಗೆಟ್ ದ ಲುಕ್~ ಅಭಿಯಾನಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಫ್ಯಾಷನ್ ಟಿಪ್‌ಗಳೂ ಇದ್ದವು.

ಲೈಫ್ಸ್‌ಸ್ಟೈಲ್‌ನ ಈ ಅಭಿಯಾನಕ್ಕೆ ಆಯ್ಕೆಯಾದ ಸಾಮಾನ್ಯ ಮಹಿಳೆಯರು ಕೂಡ ಅಂತರ‌್ರಾಷ್ಟ್ರೀಯ ಖ್ಯಾತಿಯ ಮೇಕಪ್ ತಜ್ಞರಿಂದ ಮೇಕಪ್ ಮಾಡಿಸಿಕೊಳ್ಳಬಹುದು, ಹೆಸರಾಂತ ಛಾಯಾಗ್ರಾಹಕರಿಂದ ಫೋಟೊ ತೆಗೆಸಿಕೊಳ್ಳಬಹುದು.  ಕಾಸ್ಮೊಪಾಲಿಟನ್ ಮ್ಯಾಗಜಿನ್‌ನ ಮುಖಪುಟದಲ್ಲಿ ಕಾಣಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT