ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಮುಜುಗರ

ಸೋಮವಾರ, ಏಪ್ರಿಲ್ 22, 2019
29 °C
ಶೌಚಾಲಯದ ಎದುರು ವಾಹನಗಳನ್ನು ತೊಳೆಯುತ್ತಿರುವ ಸ್ಥಳೀಯರು, ಶೌಚಾಲಯ ಬಳಕೆಗೆ ಮಹಿಳಾ ಭಕ್ತರ ಪರದಾಟ

ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಮುಜುಗರ

Published:
Updated:
Prajavani

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿರುವ ಕಾರು ಪಾರ್ಕಿಂಗ್‌ ಬಳಿ ಇರುವ ಶೌಚಾಲಯದ ಮುಂಭಾಗದಲ್ಲಿ ಸ್ಥಳೀಯರು ವಾಹನಗಳನ್ನು ತೊಳೆಯುತ್ತಿರುವುದರಿಂದ ಭಕ್ತರಿಗೆ ತೀವ್ರ ತೊಂದರೆಯಾಗುತ್ತಿದೆ.

ಮಹಿಳೆಯರಂತೂ ಮುಜುಗರಪಡುವ ಸನ್ನಿವೇಶ ನಿರ್ಮಾಣವಾಗಿದೆ. ವಾಹನಗಳನ್ನು ತೊಳೆಯುತ್ತಿರುವುದರಿಂದ ಇತ್ತೀಚೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಶೌಚಾಲಯದ ಸುತ್ತಮುತ್ತ ಅನೈರ್ಮಲ್ಯ ಉಂಟಾಗುತ್ತಿದೆ.

ಶೌಚಾಲಯದ ಎದುರು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ಪುರುಷರೇ ಹೆಚ್ಚು ಇರುವುದರಿಂದ ಶೌಚಾಲಯಕ್ಕೆ ಹೋಗುವುದಕ್ಕೆ ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರಿನ ಭಕ್ತೆ ಮೇಘಾ ಆರೋಪಿಸಿದ್ದಾರೆ.

ಲಕ್ಷಾಂತರ ಜನರು ಭೇಟಿ ನೀಡುವ ದೇವಾಲಯದಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಶೌಚಾಲಯಗಳಿಲ್ಲ ಎಂದು ಅವರು ದೂರಿದ್ದಾರೆ. 

ದೇವಾಲಯದ ಕಾರ್ ಪಾರ್ಕಿಂಗ್ ಬಳಿ ಇರುವ ಶೌಚಾಲಯವನ್ನು ದುರಸ್ತಿಪಡಿಸಿ ಇತ್ತೀಚೆಗಷ್ಟೇ ಬಳಕೆಗೆ ಮುಕ್ತ ಮಾಡಿಕೊಡಲಾಗಿತ್ತು.

ಹೆಂಗಸರಿಗೆ ಮೀಸಲಾಗಿರುವ ಶೌಚಾಲಯದೊಳಗೆ ಕೆಲವರು ನುಗ್ಗಿ ನೀರನ್ನು ತೆಗೆದುಕೊಂಡು ವಾಹನವನ್ನು ತೊಳೆಯುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಈ ಶೌಚಾಲಯದ ಮುಂಭಾಗದಲ್ಲಿ ವಾಹನ ತೊಳೆಯುವುದನ್ನು ನಿಲ್ಲಿಸಿ, ಮಹಿಳೆಯರು ಸುಲಭವಾಗಿ ಶೌಚಾಲಯ ಬಳಸಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

’ಕೂಡಲೇ ಕ್ರಮ’

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶೇಖರ ಮೂರ್ತಿ ಅವರು, ‘ಶೌಚಾಲಯದ ಮುಂಭಾಗದಲ್ಲಿ ವಾಹನ ತೊಳೆಯುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಾಧೀಕಾರದ ಸಭೆಯಲ್ಲಿ ಚರ್ಚಿಸಿ, ದೇವಾಲಯಕ್ಕೆ ಬರುವಂತಹ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತವಾದ ವಾಟರ್ ಸರ್ವಿಸ್ ಸ್ಟೇಷನ್ ತೆರೆಯಲು ಚಿಂತಿಸಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !