ಶುಕ್ರವಾರ, ಡಿಸೆಂಬರ್ 6, 2019
26 °C

ಗ್ರಾಮಕ್ಕೆ ಬಂದ ಮೊಸಳೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮುದ್ದೇಬಿಹಾಳ: ತಾಲ್ಲೂಕಿನ ಗುಂಡಕರ್ಜಗಿ ಗ್ರಾಮದ ಹಳ್ಳದ ಬಳಿ ಸೋಮವಾರ ಮೊಸಳೆ ಕಾಣಿಸಿಕೊಂಡಿದ್ದು, ಹಳ್ಳದ ಬಳಿ ಮೇಯುತ್ತಿದ್ದ ಎರಡು ಕುರಿಗಳನ್ನು ಎಳೆದೊಯ್ದಿದೆ.

ಮೊಸಳೆ ಕಂಡು ಆತಂಕಗೊಂಡ ಗ್ರಾಮಸ್ಥರು, ಮೊಸಳೆಯನ್ನು ಹಿಡಿದು ಹಗ್ಗದಿಂದ ಕಟ್ಟಿದರು. ಬಳಿಕ ಮುದ್ದೇಬಿಹಾಳದ ಅರಣ್ಯ ಇಲಾಖೆ ಅಧಿಕಾರಿಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಮೊಸಳೆಯನ್ನು ತಮ್ಮ ಸುಪರ್ದಿಗೆ ಪಡೆದು, ಸುರಕ್ಷಿತ ಸ್ಥಳಕ್ಕೆ ಬಿಟ್ಟರು.

ಗ್ರಾಮದ ಈರಣ್ಣ ರೇವಡಿಹಾಳ ಪರಶುರಾಮ ದಳವಾಯಿ, ಕರಬಸಪ್ಪ ದಳವಾಯಿ, ಶಿವಪ್ಪ ಮಾದರ, ಮುದಕಪ್ಪ ಮಾದರ, ಮಲ್ಲಪ್ಪ ದಿಂಡವಾರ, ದೇವೀಂದ್ರ ಬಡಿಗೇರ, ಶಿವರಾಯ ಉಪ್ಪಲದಿನ್ನಿ ಗುರಪ್ಪ ದಳವಾಯಿ, ಸಂಗಪ್ಪ ಈಳಗೇರ ಹಾಗೂ ಗುರುಪಾದಪ್ಪಗೌಡ ಬಿರಾದಾರ ಮೊಸಳೆಯನ್ನು ಹಿಡಿಯಲು ಶ್ರಮಿಸಿದರು.

ಪ್ರತಿಕ್ರಿಯಿಸಿ (+)