ಬುಧವಾರ, ಜೂನ್ 3, 2020
27 °C

ಹಾಡಹಗಲೇ ಮಹಿಳೆಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ತನ್ನೊಟ್ಟಿಗೆ ಅನೈತಿಕ ಸಂಬಂಧ ಹೊಂದಿದ್ದ ಗೃಹಿಣಿಯನ್ನೇ, ವ್ಯಕ್ತಿಯೊಬ್ಬ ಹಾಡಹಗಲೇ ಕಟ್ಟಿಗೆಯಿಂದ ಬಡಿದು ನಗರದ ಪೇಟೆ ಬಾವಡಿಯಲ್ಲಿ ಗುರುವಾರ ಕೊಲೆಗೈದಿದ್ದಾನೆ.

ಪೇಟೆ ಬಾವಡಿಯ ಹೀನಾ ಪಟೇಲ (28) ಕೊಲೆಯಾದ ವಿವಾಹಿತ ಮಹಿಳೆ. ಸಾಧಿಕ್ ಕೊಡತಿ ಎಂಬಾತನೇ ಕೊಲೆಗೈದ ಆರೋಪಿ.

‘ಇವರಿಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ವೈಮನಸ್ಸಿನಿಂದ ಸಾಧಿಕ್ ಹೀನಾ ಮೇಲೆ ಕಟ್ಟಿಗೆಯಿಂದ ಮನಸೋ ಇಚ್ಚೆ ಬಡಿದಿದ್ದಾನೆ. ಬಲವಾದ ಪೆಟ್ಟುಗಳು ಬಿದ್ದುದರಿಂದ ಹೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈಕೆಯ ಸಾವು ಖಚಿತಗೊಂಡ ಬಳಿಕ, ಸಾಧಿಕ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ’ ಎಂದು ಗೋಳಗುಮ್ಮಟ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು