ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

Published 6 ಫೆಬ್ರುವರಿ 2024, 16:20 IST
Last Updated 6 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾ ಪೆಸಿಫಿಕ್ ವಸತಿ ಕ್ಷೇತ್ರದ ಮಾರುಕಟ್ಟೆಯ ವಾರ್ಷಿಕ ಬೆಳವಣಿಗೆಯಲ್ಲಿ ಬೆಂಗಳೂರು ಹಾಗೂ ಮುಂಬೈ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟಂಟ್‌ ಸಂಸ್ಥೆ ನೈಟ್‌ ಫ್ರಾಂಕ್‌ ವರದಿ ಮಾಡಿದೆ.

2023ರ ಅರ್ಧದಿಂದ ಇಲ್ಲಿಯವರೆಗಿನ ಬೆಳವಣಿಗೆಯನ್ನು ಆಧರಿಸಿ ಸಂಸ್ಥೆ ವರದಿ ಮಾಡಿದೆ. ಏಷ್ಯಾ ಪೆಸಿಫಿಕ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮತ್ತು ಮುಂಬೈ ಸ್ಥಾನ ಪಡೆದಿವೆ.

ಏಷ್ಯಾ–ಪೆಸಿಫಿಕ್ ಕ್ಷೇತ್ರದ ಪ್ರಮುಖ 25 ನಗರಗಳಲ್ಲಿ 21 ನಗರಗಳ ರಿಯಲ್ ಎಸ್ಟೇಟ್ ಉದ್ಯಮ ಉತ್ತಮವಾಗಿದೆ. ಮನೆಗಳ ವಾರ್ಷಿಕ ಬೆಲೆ ಏರಿಕೆ ಪ್ರಮಾಣ ಸಕಾರಾತ್ಮಕವಾಗಿದೆ. ವರ್ಷದಿಂದ ವರ್ಷಕ್ಕೆ ಶೇ 13.7ರ ವೃದ್ಧಿ ದರದಲ್ಲಿ ಸಿಂಗಪುರ ಅಗ್ರಸ್ಥಾನದಲ್ಲಿದೆ. 

8ನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ವರ್ಷದಿಂದ ವರ್ಷದ ವೃದ್ಧಿ ದರ ಶೇ 7.1ರಷ್ಟಿದೆ. 9ನೇ ಸ್ಥಾನದಲ್ಲಿರುವ ಮುಂಬೈನದ್ದು ಶೇ 7ರ ಸಾಧನೆ ಎಂದು ವರದಿಯಲ್ಲಿ ಹೇಳಲಾಗಿದೆ. ದೆಹಲಿ–ಎನ್‌ಸಿಆರ್‌ನಲ್ಲಿ ವಸತಿ ಕ್ಷೇತ್ರದ ಮಾರುಕಟ್ಟೆ ವೃದ್ಧಿ ದರ ಶೇ 6ರಷ್ಟಿದೆ. ಹೀಗಾಗಿ ಅದು 11ನೇ ಸ್ಥಾನದಲ್ಲಿದೆ.

ನೈಟ್‌ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಿಶರ ಬೈಜಲ್ ಪ್ರತಿಕ್ರಿಯಿಸಿ, ‘ಕಳೆದ ಒಂದು ದಶಕದ ಅಂಕಿ ಅಂಶಗಳನ್ನು ಗಮಿಸಿದರೆ 2023ರಲ್ಲಿ ಭಾರತದ ಪ್ರಮುಖ ನಗರಗಳಲ್ಲಿನ ವಸತಿ ಕ್ಷೇತ್ರದ ಮಾರುಕಟ್ಟೆ ದರ ಗಮನಾರ್ಹ ಏರಿಕೆ ಕಂಡಿದೆ. ಅಡಮಾನ ಪ್ರಮಾಣ ಹೆಚ್ಚಾಗಿದ್ದರೂ ಹಾಗೂ ಆಸ್ತಿ ಬೆಲೆ ಏರಿಕೆಯಾದರೂ ವಸತಿ ಕ್ಷೇತ್ರದ ಮಾರುಕಟ್ಟೆ ಬೆಲೆ ಏರುಮುಖವಾಗುತ್ತಲೇ ಸಾಗಿದೆ. ಬಡ್ಡಿದರದಲ್ಲಿ ಇಳಿಕೆ ಹಾಗೂ ಸದೃಢ ಆರ್ಥಿಕ ಬೆಳವಣಿಗೆ,  2024ರಲ್ಲಿ ಒಳ್ಳೆಯ ದಿನಗಳ ನಿರೀಕ್ಷೆಯಿಂದಾಗಿ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT