‘ನಮ್ಮ ಬೆಂಗಳೂರು ಪ್ರಶಸ್ತಿ’ ನಾಮನಿರ್ದೇಶನ‌ ಪ್ರಕ್ರಿಯೆಗೆ ಚಾಲನೆ

7

‘ನಮ್ಮ ಬೆಂಗಳೂರು ಪ್ರಶಸ್ತಿ’ ನಾಮನಿರ್ದೇಶನ‌ ಪ್ರಕ್ರಿಯೆಗೆ ಚಾಲನೆ

Published:
Updated:
Prajavani

ಬೆಂಗಳೂರು: ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಬೆಂಗಳೂರು ಪ್ರಶಸ್ತಿ’ ನಾಮನಿರ್ದೇಶನ‌ ಪ್ರಕ್ರಿಯೆ ಆರಂಭ ಸಮಾರಂಭಕ್ಕೆ ನಟ ರಮೇಶ್ ಅರವಿಂದ್ ಚಾಲನೆ ನೀಡಿದರು. 

‘ಸೈಕಲ್ ಹೊಡೆಯುತ್ತ ಬಿದ್ದ ನೆನಪು, ಮೊದಲ ಸಾರಿ ಪ್ರೀತಿ ಅರಳಿದ್ದು, ಅವಮಾನಗೊಂಡು ಪುರಸ್ಕೃತನಾಗಿದ್ದು, ನಟನಾಗಿ ಬದುಕು ಕಟ್ಟಿಕೊಂಡಿದ್ದು ಈ ನಗರದಲ್ಲೆ. ಹಾಗಾಗಿ, ಬೆಂಗಳೂರಿನೊಂದಿಗೆ ಹೇಳತೀರದ ಭಾವನಾತ್ಮಕ ಸಂಬಂಧವಿದೆ’ ಎಂದು‌ ನಟ ರಮೇಶ ಅರವಿಂದ್ ಹೇಳಿದರು.

‘ಎಲೆಮರೆಯ ಕಾಯಿಗಳಂತೆ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯ ಶ್ಲಾಘನೀಯ’ ಎಂದರು.

ಟ್ರಸ್ಟಿ ಅಶ್ವಿನ್‌ ಮಹೇಶ್‌, ‘ಬೆಂಗಳೂರು ನಗರಕ್ಕೆ ವಿವಿಧ ಕ್ಷೇತ್ರಗಳ ಮೂಲಕ ಕೊಡುಗೆ ನೀಡಿದವರು ಫೆ.28 ರೊಳಗಾಗಿ ಆನ್‌ಲೈನ್ ಮೂಲಕ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು. ಮಾರ್ಚ್‌ನಲ್ಲಿ ಜ್ಯೂರಿ ಸದಸ್ಯರ ಮತ್ತು ಪ್ರಶಸ್ತಿ ವಿಜೇತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ’ ಎಂದು ತಿಳಿಸಿದರು. 

‘ವರ್ಷದ ನಾಗರಿಕ, ಉದಯೋನ್ಮುಖ ತಾರೆ, ಪತ್ರಕರ್ತ, ಸಾಮಾಜಿಕ ಉದ್ಯಮಿ, ಸರ್ಕಾರಿ ಅಧಿಕಾರಿ ಹಾಗೂ ಅತ್ಯುತ್ತಮ ಐದು ಅಂತಿಮ ಪಟ್ಟಿಯಿಂದ ‘ವರ್ಷದ ನಮ್ಮ ಬೆಂಗಳೂರಿಗ’ ಪ್ರಶಸ್ತಿಯನ್ನು ತೀರ್ಪುಗಾರರೆ ಆಯ್ಕೆ ಮಾಡುತ್ತಾರೆ. ಈ ವಿಭಾಗಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಯು ₹2 ಲಕ್ಷ ನಗದು ಒಳಗೊಂಡಿದೆ. ತೀರ್ಪುಗಾರರ ನಿರ್ಧಾರವೆ ಅಂತಿಮ’ ಎಂದು ಅವರು ಹೇಳಿದರು.  

ಮಾಹಿತಿಗೆ–nammabengaloreaward.org, ಸಂಪರ್ಕಕ್ಕೆ– 9880711640

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !