ಬುಧವಾರ, ಡಿಸೆಂಬರ್ 11, 2019
27 °C

ಹವಾಮಾನ ಬದಲಾವಣೆ ತಡೆಗೆ ಬದ್ಧತೆ; ವೇದಗಳೇ ಪ್ರೇರಣೆ ಎಂದ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮಲ್ಲಿರುವ ಬದ್ಧತೆಗೆ ವೇದಗಳಲ್ಲಿ ಉಲ್ಲೇಖಿಸಿರುವ ಅಂಶಗಳೇ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರಸ್‌ ಸೋಮವಾರ ಹೇಳಿದರು.

ಅರ್ಜೆಂಟೀನಾ ರಾಜಧಾನಿ ಬ್ಯೂನಸ್‌ ಐರಿಸ್‌ನಲ್ಲಿ ಇತ್ತೀಚೆಗೆ ಜರುಗಿದ ಜಿ–20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ  ಮೋದಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಸಂಬಂಧ ಚರ್ಚೆಯಾಗಿತ್ತು ಎಂದು ಗುಟೆರಸ್‌ ತಿಳಿಸಿದರು.

ಪೋಲೆಂಡ್‌ನ ಕಟೋವೈಸ್‌ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಟೆರಸ್‌ ಹೇಳಿದರು.

‘ವೇದಗಳಲ್ಲಿನ ಉಲ್ಲೇಖಗಳೇ ನನಗೆ ಪ್ರೇರಣೆ ಎಂದು ಭಾರತದ ಪ್ರಧಾನಿ  ಹೇಳಿದ್ದಾರೆ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಇಂತಹ ಪ್ರೇರಣಾದಾಯಕ ಅಂಶಗಳು ಸಿಗುತ್ತವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು