ಜೆಟ್ ಏರ್‌ವೇಸ್ ಸಂಸ್ಥೆ ಚೇರ್ಮನ್ ಹುದ್ದೆಗೆ ನರೇಶ್ ಗೋಯಲ್ ರಾಜೀನಾಮೆ

ಮಂಗಳವಾರ, ಏಪ್ರಿಲ್ 23, 2019
31 °C

ಜೆಟ್ ಏರ್‌ವೇಸ್ ಸಂಸ್ಥೆ ಚೇರ್ಮನ್ ಹುದ್ದೆಗೆ ನರೇಶ್ ಗೋಯಲ್ ರಾಜೀನಾಮೆ

Published:
Updated:
Prajavani

ಮುಂಬೈ: ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಜೆಟ್ ಏರ್‌ವೇಸ್ ಸಂಸ್ಥೆಗೆ ಅದರ ಸಂಸ್ಥಾಪಕ ಅಧ್ಯಕ್ಷ ನರೇಶ್ ಘೋಯಲ್ ರಾಜೀನಾಮೆ ನೀಡಿದ್ದಾರೆ.

ಸೋಮವಾರ ನಡೆದ ಜೆಟ್ ಏರ್‌ವೇಸ್ ಸಂಸ್ಥೆ ಆಡಳಿತ ಮಂಡಳಿ ಸಭೆಯ ನಂತರ ಈ ವಿಷಯ ಪ್ರಕಟಿಸಲಾಗಿದೆ. ಜೆಟ್ ಏರ್ ವೇಸ್‌  ಅಧಿಕಾರಿಗಳು ಮುಂಬೈನ ಷೇರುಮಾರುಕಟ್ಟೆಗೆ ಈ ವಿಷಯ ತಿಳಿಸಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ನರೇಶ್ ಘೋಯಲ್, ಪತ್ನಿ ಅನಿತಾ ಘೋಯಲ್ ಹಾಗೂ ಅಬುದಾಬಿ ಮೂಲದ ಇತಿಹದ್ ವಿಮಾನ ಸಂಸ್ಥೆಯಿಂದ ನಾಮಿನಿಯಾಗಿದ್ದ ಒಬ್ಬ ಸದಸ್ಯರೂ ಸೇರಿ ಮೂರು ಮಂದಿ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬುದಾಬಿ ಮೂಲದ ಇತಿಹದ್ ಸಂಸ್ಥೆಯ ಪದಾಧಿಕಾರಿಯೊಬ್ಬರು ಜೆಟ್ ಏರ್‌ವೇಸ್ ಸಂಸ್ಥೆಯ ಪಾಲುದಾರರಾಗಿದ್ದರು. ಅಲ್ಲದೆ ಸಂಸ್ಥೆಯಲ್ಲಿ ಶೇ 24 ರಷ್ಟು ಷೇರುಗಳನ್ನು ಹೊಂದಿದ್ದರು. ನರೇಶ್ ಘೋಯಲ್ ಇಂದಿನಿಂದಲೇ ಸಂಸ್ಥೆಯ ನಿರ್ವಹಣೆಯನ್ನು ನಿಲ್ಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

25 ವರ್ಷಗಳ ಹಿಂದೆ ಆರಂಭವಾದ ಜೆಟ್ ಏರ್‌ವೇಸ್ ಸಂಸ್ಥೆ ಆರ್ಥಿಕ ಸಮಸ್ಯೆಯಿಂದ ಬಸವಳಿದಿದ್ದು, ಬಂಡವಾಳ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಸಂಸ್ಥೆಯು ಏಪ್ರಿಲ್ ಅಂತ್ಯದ ವೇಳೆಗೆ 14 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಪ್ರಕಟಿಸಿದೆ. ಇದಲ್ಲದೆ, ಬಾಡಿಗೆ ಮತ್ತು ಗುತ್ತಿಗೆ ಹಣವನ್ನು ಪಾವತಿಸದೆ ನಿಂತಿರುವ 54 ವಿಮಾನಗಳೂ ಸೇರಿದಂತೆ ಸಂಸ್ಥೆಯ ಒಟ್ಟು 80 ವಿಮಾನಗಳು ಹಾರಾಟ ಸ್ಥಗಿತಗೊಳಿಸಿವೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !