ಬಸ್ಸಿನಲ್ಲಿ ಮಾದಕ ವಸ್ತು ಸಾಗಣೆ: ನೈಜೀರಿಯಾ ಪ್ರಜೆ ಸೆರೆ

7

ಬಸ್ಸಿನಲ್ಲಿ ಮಾದಕ ವಸ್ತು ಸಾಗಣೆ: ನೈಜೀರಿಯಾ ಪ್ರಜೆ ಸೆರೆ

Published:
Updated:

ಬೆಂಗಳೂರು: ಬಸ್ಸಿನಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಆರೋಪದಡಿ ನೈಜೀರಿಯಾ ಪ್ರಜೆಯನ್ನು ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಪೊಲೀಸರು ಬಂಧಿಸಿದ್ದಾರೆ.

ಆರೋಪಿ, ಮುಂಬೈನಿಂದ ಬಸ್ಸಿನಲ್ಲಿ ನಗರದ ಯಶವಂತಪುರಕ್ಕೆ ಬುಧವಾರ ಬೆಳಿಗ್ಗೆ ಬಂದಿಳಿದಿದ್ದ. ಅದೇ ವೇಳೆ ದಾಳಿ ನಡೆಸಿದ ಪೊಲೀಸರು, ಆತನಿಂದ 4.1 ಗ್ರಾಂ ಎಲ್‌ಸಿಡಿ ಜಪ್ತಿ ಮಾಡಿದ್ದಾರೆ.

‘2015ರಲ್ಲಿ ವಾಣಿಜ್ಯ ವೀಸಾದಡಿ ಆರೋಪಿ ಭಾರತಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದ. ದೆಹಲಿ, ಕೇರಳ ಹಾಗೂ ಮುಂಬೈನಲ್ಲಿರುವ ಏಜೆಂಟರ ಮೂಲಕ ಮಾದಕ ವಸ್ತು ಖರೀದಿಸಿ ಬೆಂಗಳೂರಿಗೆ ತಂದು ಮಾರುತ್ತಿದ್ದ’ ಎಂದು ಎನ್‌ಸಿಬಿ ವಲಯ ನಿರ್ದೇಶಕ ಸುನೀಲ್‌ಕುಮಾರ್ ಸಿನ್ಹಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಂಧಿತ ಆರೋಪಿ, ಸೈಬರ್‌ ಕ್ರೈಂ ಅಪರಾಧಗಳಲ್ಲೂ ಭಾಗಿಯಾಗಿರುವ ಅನುಮಾನವಿದೆ. ಆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !