ಶುಕ್ರವಾರ, ಡಿಸೆಂಬರ್ 6, 2019
20 °C

ರಿಯೊ ಪ್ಯಾರಾಲಿಂಪಿಕ್ಸ್‌: ಭಾರತದ ತಂಗವೇಲುಗೆ ಚಿನ್ನ, ವರುಣ್‍ಗೆ ಕಂಚು

Published:
Updated:
ರಿಯೊ ಪ್ಯಾರಾಲಿಂಪಿಕ್ಸ್‌: ಭಾರತದ ತಂಗವೇಲುಗೆ ಚಿನ್ನ, ವರುಣ್‍ಗೆ ಕಂಚು

ರಿಯೊ ಡಿ ಜನೈರೋ: ರಿಯೊದಲ್ಲಿ ನಡೆಯುತ್ತಿರುವ ಅಂಗವಿಕಲರ ಪ್ಯಾರಾಲಿಂಪಿಕ್ಸ್‌  ಪುರುಷರ ವಿಭಾಗದ ಟಿ42 ಹೈಜಂಪ್‍ನಲ್ಲಿ  ಭಾರತಕ್ಕೆ ಚಿನ್ನದ ಪದಕ ಒಲಿದಿದೆ.ಕ್ರೀಡಾಕೂಟ ಆರಂಭವಾಗಿ ಎರಡನೇ ದಿನ ಹೈಜಂಪ್‍ ಸ್ಪರ್ಧೆಯಲ್ಲಿ  ಮರಿಯಪ್ಪನ್ ತಂಗವೇಲು ಅವರು ಚಿನ್ನ ಗೆದ್ದಿದ್ದು, ವರುಣ್ ಭಾಟಿ ಕಂಚು ಗೆದ್ದಿದ್ದಾರೆ.1.89 ಮೀಟರ್ ಜಿಗಿದು ತಂಗವೇಲು ಪ್ರಥಮ ಸ್ಥಾನ ಪಡೆದಿದ್ದು,  ಭಾಟಿ ಅವರು 1.86 ಮೀಟರ್ ಎತ್ತರಕ್ಕೆ ಜಿಗಿದಿದ್ದಾರೆ.

ಬಂಗಾರದ ಜಿಗಿತ

ಪ್ರತಿಕ್ರಿಯಿಸಿ (+)