ಸೋಮವಾರ, ಮಾರ್ಚ್ 27, 2023
23 °C

ಸದನದಲ್ಲಿ ರಂಗೋಲಿ ಹಾಕಿದ ಉಮಾಶ್ರೀ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದನದಲ್ಲಿ ರಂಗೋಲಿ ಹಾಕಿದ ಉಮಾಶ್ರೀ!

ಬೆಂಗಳೂರು: ಕಾವೇರಿ ಜಲ ವಿವಾದದ ಬಗ್ಗೆ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯುತ್ತಿರುವ ವೇಳೆ ವಿಧಾನಸಭೆಯಲ್ಲಿ ಸಚಿವೆ ಉಮಾಶ್ರೀ ಅವರು ಚುಕ್ಕಿ ರಂಗೋಲಿ ಬಿಡಿಸುವುದರಲ್ಲಿ ನಿರತರಾಗಿದ್ದರು.

ಕಾವೇರಿ ವಿಚಾರವಾಗಿ ಜೆಡಿಎಸ್‌ನ ಎಚ್.ಡಿ. ರೇವಣ್ಣ ಅವರು ಮಾತನಾಡುತ್ತಿದ್ದ ವೇಳೆ ಸಚಿವೆ ಉಮಾಶ್ರೀ ಅವರು ತಮ್ಮ ಟಿಪ್ಪಣಿ ಹಾಳೆಯಲ್ಲಿ ಚುಕ್ಕಿ ರಂಗೋಲಿ ಬಿಡಿಸುತ್ತಿದ್ದುದು ಸುದ್ದಿ ವಾಹಿನಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಉಮಾಶ್ರೀ ಅವರು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ರಂಗೋಲಿ ಬಿಡಿಸುತ್ತಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.