ಶನಿವಾರ, ಮೇ 21, 2022
23 °C

ಆಫ್ರಿಕಾ ಆನೆಗಳ ಸಂಖ್ಯೆ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಫ್ರಿಕಾ ಆನೆಗಳ ಸಂಖ್ಯೆ ಇಳಿಮುಖ

ಕಳೆದ 25 ವರ್ಷಗಳಲ್ಲಿ ಆಫ್ರಿಕಾದಲ್ಲಿ ಆನೆ ಸಂತತಿ ಗಣನೀಯವಾಗಿ ಕ್ಷೀಣಿಸಿರುವುದು ಬೆಳಕಿಗೆ ಬಂದಿದೆ. ಅಂತರರಾಷ್ಟ್ರೀಯ ಪ್ರಕೃತಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ (ಐಯುಸಿಎನ್‌) ಆಫ್ರಿಕಾದಲ್ಲಿನ ಆನೆ ಸಂತತಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದೆ.

ಅಕ್ರಮ ಬೇಟೆ ಕಾರಣ

ದಂತಕ್ಕಾಗಿ ಆನೆಗಳನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. 1970, 1980ರ ದಶಕದಿಂದ ಅಕ್ರಮ ಬೇಟೆ ಹೆಚ್ಚಾಗಿದೆ. ಇದು ಆನೆಗಳ ಸಂತತಿ ಕ್ಷೀಣಿಸಲು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

*

‘ಆನೆಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದು ಆಘಾತಕಾರಿ. ಇದಕ್ಕೆ ಅಕ್ರಮ ಬೇಟೆ ಕಾರಣ ಎಂಬುದು ಅಚ್ಚರಿಯ ವಿಷಯವಲ್ಲ. ಇದನ್ನು ತಡೆಯಬೇಕಾದ ಅವಶ್ಯಕತೆಯಿದೆ.

–ಇಂಗರ್ ಆಂಡರ್ಸನ್‌, ಐಯುಸಿಎನ್‌ ಪ್ರಧಾನ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.