ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಮ್‌ ಹಣ್ಣಿನ ಫಲಗಳು

Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಪ್ಲಮ್‌ ಹಣ್ಣಿನ ಸೇವನೆ ಏಕೆ?

*ಪ್ಲಮ್‌ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅತ್ಯವಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್ ಅಂಶಗಳು ಹೇರಳವಾಗಿವೆ.
*ಪ್ಲಮ್ ಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
*ಮಲಬದ್ಧತೆ ತಡೆಯುವಲ್ಲಿ ಇದು ಸಹಕರಿಸುತ್ತದೆ.
*ಜೀವಕೋಶಗಳು ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ.
*ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ದೇಹವು ಕಬ್ಬಿಣಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ.
*ಕ್ಯಾಲೊರಿ ಕಡಿಮೆ ಇರುತ್ತದೆ.
*ಲ್ಯೂಟೀನ್‌, ಝಿಕ್ಸಾಂತಿನ್ ಹೆಚ್ಚಿರುವುದರಿಂದ ನರಸಂಬಂಧಿ ಸಮಸ್ಯೆಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಲ್ಲದು.
*ಪ್ಲಮ್‌ ಹಣ್ಣಿನಲ್ಲಿನ ನಿಯಾಸಿನ್, ವಿಟಮಿನ್ ಬಿ6, ಪ್ಯಾಂಟೊಥೆನಿಕ್, ಆ್ಯಸಿಡ್ ಅಂಶಗಳು ಮರೆಗುಳಿತನ (ಅಲ್ಜಮೈರ್) ಸಾಧ್ಯತೆಯನ್ನು ತಪ್ಪಿಸಬಹುದು.
*ಮುಪ್ಪಿನ ಲಕ್ಷಣಗಳನ್ನು ಕುಗ್ಗಿಸುತ್ತದೆ.
*ಒಂದು ಸಾಮಾನ್ಯ ಗಾತ್ರದ ಪ್ಲಮ್ ಹಣ್ಣಿನಲ್ಲಿ
113 ಮಿ.ಗ್ರಾಂ ಪೊಟಾಷಿಯಂ ಅಂಶವಿದ್ದು, ಅದು ರಕ್ತದ ಏರೊತ್ತಡವನ್ನು ಕಡಿಮೆ ಮಾಡುವುದಲ್ಲದೆ, ಪಾರ್ಶ್ವವಾಯು ಸಾಧ್ಯತೆಯನ್ನು ತಗ್ಗಿಸುತ್ತದೆ.
*ಪ್ಲಮ್‌ನಲ್ಲಿನ ಕೆಂಪು ನೀಲಿ ಪಿಗ್ಮೆಂಟ್‌ಗಳು– ಆ್ಯಂಥೊಸಿಯಾನಿನ್‌ಗಳು ಕ್ಯಾನ್ಸರ್‌ಕಾರಕ ಅಂಶಗಳನ್ನು ದೂರವಿರಿಸುತ್ತದೆ.

ಪ್ಲಮ್‌ ಎಲ್ಲೆಲ್ಲಿ ಹೇಗೆ...

*ಪ್ಲಮ್ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಿಂಗಳಿನಲ್ಲಿ ಫಲ ಕೊಡುತ್ತದೆ. ಉದಾಹರಣೆಗೆ, ಜನವರಿಯಲ್ಲಿ ಥೈವಾನ್‌ನಲ್ಲಿ ಬಿಟ್ಟರೆ, ಅಮೆರಿಕದಲ್ಲಿ ಏಪ್ರಿಲ್‌ನಲ್ಲಿ ಬಿಡುತ್ತದೆ.
*ಪ್ಲಮ್‌ ಹಣ್ಣಿಗೆ ನೈಸರ್ಗಿಕವಾಗಿಯೇ ಮೇಣದಂಥ ಹೊದಿಕೆ ಇರುವುದು ಇದರ ತಾಜಾತನ ದೀರ್ಘವಾಗಿ ಉಳಿಯಲು ಕಾರಣ.
*ಪ್ಲಮ್‌ನಲ್ಲಿ ಸುಮಾರು 40 ಪ್ರಬೇಧಗಳಿವೆ.
*ಇದರಲ್ಲಿ ಎರಡು ಪ್ರಬೇಧಗಳು ವಾಣಿಜ್ಯಿಕವಾಗಿ ಹೆಚ್ಚು ಹೆಸರು ಗಳಿಸಿಕೊಂಡಿವೆ. ಯುರೋಪಿನ್ ಪ್ಲಮ್ (ಪ್ರೂನಸ್ ಡೊಮೆಸ್ಟಿಕ) ಜಪಾನಿಸ್ ಪ್ಲಮ್ (ಪ್ರೂನಸ್ ಸ್ಯಾಲಿಸಿನ ಅಂಡ್ ಹೈಬ್ರಿಡ್)  ಇವುಗಳ ಹೆಸರು. ಇನ್ನಿತರ ಪ್ರಬೇಧಗಳು ಯುರೋಪ್, ಏಷ್ಯಾ ಹಾಗೂ ಅಮೆರಿಕಗಳಲ್ಲಿ ಬೆಳೆಯುತ್ತವೆ.
*ಜಾಮ್ ತಯಾರಿಕೆಯಲ್ಲಿ ಪ್ಲಮ್‌ ಹಣ್ಣನ್ನು ಹೆಚ್ಚು ಬಳಸುತ್ತಾರೆ.
*ಇದರಿಂದ ಪ್ಲಮ್ ವೈನ್ ತಯಾರಿಯೂ ಆಗುತ್ತದೆ. ಇಂಗ್ಲೆಂಡ್‌ನಲ್ಲಿ ಪ್ಲಮ್ ಜರ್ಕಮ್ ಎಂಬ ಮದ್ಯವೂ ಇದೆ.
*ಪ್ಲಮ್ ಹಣ್ಣನ್ನು ಒಣಗಿಸಿ ಮಾರುವ ಪರಿಪಾಠವೂ ಹುಟ್ಟಿಕೊಂಡಿದೆ.
*ಹಳದಿ, ಬಿಳಿ, ಹಸಿರು ಹಾಗೂ ಗಾಢ ಕೆಂಪು ಬಣ್ಣದಲ್ಲಿ ಪ್ಲಮ್‌ ಇರುತ್ತದೆ.
*ಪ್ಲಮ್‌ ಮರವನ್ನು ಸಂಗೀತ ಸಾಧನಗಳ ತಯಾರಿಕೆಗೂ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT