ಸೋಮವಾರ, ಮಾರ್ಚ್ 27, 2023
24 °C

ಸೂಚ್ಯಂಕ 349 ಅಂಶ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ಸೂಚ್ಯಂಕ 349 ಅಂಶ ಕುಸಿತ

ಮುಂಬೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಭಾವಕ್ಕೆ ಒಳಗಾಗಿ  ಜಾಗತಿಕ ಷೇರುಪೇಟೆಗಳಲ್ಲಿ ಬುಧವಾರ ಕಂಡು ಬಂದ ಮಾರಾಟದ ಒತ್ತಡವು  ಭಾರತದ ಷೇರುಪೇಟೆಗಳಲ್ಲಿಯೂ ಪ್ರತಿಫಲನಗೊಂಡಿತು.



ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 349 ಅಂಶಗಳಷ್ಟು ಕುಸಿತ ಕಂಡು, 27,527 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಅಕ್ಟೋಬರ್‌ 13 ರ ನಂತರ ದಿನದ ವಹಿವಾಟಿನಲ್ಲಿನ ಸೂಚ್ಯಂಕದ ಗರಿಷ್ಠ ಕುಸಿತ ಇದಾಗಿದೆ.



ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಹಿಲರಿ ಕ್ಲಿಂಟನ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಇದು ಹೂಡಿಕೆ ದಾರರು ಮಾರಾಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇದರ ಪರಿಣಾಮವಾಗಿ ಭಾರತವೂ ಒಳಗೊಂಡು ಜಾಗತಿಕ ಷೇರುಪೇಟೆಗಳು ಕುಸಿತ ಕಾಣುವಂತಾಗಿದೆ ಎಂದು ತಜ್ಞರು  ಹೇಳಿದ್ದಾರೆ.



ಎನ್‌ಎಸ್‌ಇ ನಿಫ್ಟಿ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 112 ಅಂಶ ಇಳಿಕೆ ಕಂಡು, 8,514 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿತು. ಏಷ್ಯಾದ ಷೇರುಪೇಟೆಗಳು ಏಳು ವಾರಗಳ ಕನಿಷ್ಠ ಮಟ್ಟದಲ್ಲಿ, ಯುರೋಪ್‌ ಷೇರುಪೇಟೆಗಳು ಇಳಿಮುಖ ವಹಿವಾಟು ನಡೆಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.