ಅಮೆರಿಕದ ಡೆನಿಸಿ ಡೂರ್ಲಾಗ್‌ಳು ತನ್ನ ಸಾಕು ನಾಯಿಯೊಡನೆ ರಸ್ತೆಯಲ್ಲಿ ಹೋಗುವಾಗ ನಾಯಿಯನ್ನು ನೋಡಿದವರೆಲ್ಲರೂ ಮೊದಲು ಕೇಳುವ ಪ್ರಶ್ನೆ ಎಂದರೆ ‘ಇದು ನಾಯಿನಾ ಅಥವಾ ಕುದುರೆನಾ?’ ಎಂದು. ಯಾಕೆಂದರೆ ಗ್ರೇಟ್ ಡೆನ್ ತಳಿಯ ಈಕೆಯ ನಾಯಿ ಬರೋಬ್ಬರಿ ಸುಮಾರು ಮೂರು ಮುಕ್ಕಾಲು ಅಡಿ ಎತ್ತರವಿದೆ. ಮೂರು ವರ್ಷ ವಯಸ್ಸಿನ ಈ ನಾಯಿ, ತನ್ನ ಹಿಂಗಾಲುಗಳ ಮೇಲೆ ನಿಂತರೆ ಸಾಕು 7 ಅಡಿ 4 ಇಂಚಿನಷ್ಟು ಉದ್ದವಾಗಿ ತೋರುತ್ತದೆ.

ಜೂಸ್ ಹೆಸರಿನ ಈ ನಾಯಿಗೆ ಇದೀಗ ಪ್ರಪಂಚದಲ್ಲೇ ಅತಿ ಎತ್ತರದ ಶ್ವಾನವೆಂಬ ಗಿನ್ನಿಸ್ ವಿಶ್ವ ದಾಖಲೆಯ ಮನ್ನಣೆ ದೊರಕಿದೆ. ಇದರಿಂದ ಅಮೆರಿಕಾದ ಮಿಚಿಗನ್‌ನಲ್ಲಿರುವ ಶ್ವಾನದೊಡತಿ ಡೂರ್ಲಾಗ್‌ಳ ಮನೆಯವರ ಸಂಭ್ರಮ ಮುಗಿಲು ಮುಟ್ಟಿದೆ.

70.3 ಕೆ.ಜಿ. ತೂಕವಿರುವ ಜೂಸ್ ದಿನಾಲು ಸುಮಾರು 14 ಕೆ.ಜಿ. ಅಹಾರವನ್ನು ತಿನ್ನುತ್ತದೆಯಂತೆ. ಈ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿರುವಾಗ ‘ನಿಮ್ಮ ಕುದುರೆಗೇಕೆ ಜೀನನ್ನು ಹಾಕಿಲ್ಲ?’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಮಕ್ಕಳಂತೂ ಜೂಸ್‌ನನ್ನು ಕುದುರೆ ಮರಿಯಂದೇ ತಿಳಿದುಕೊಳ್ಳುತ್ತಾರೆ.

‘ನಮ್ಮ ನಾಯಿಯ ಬಗ್ಗೆ ಹೀಗೆಲ್ಲ ಜನರು ಪ್ರಶ್ನೆಗಳನ್ನು ಕೇಳುವುದು ನನಗೆ ತುಂಬಾ ತಮಾಷೆ ಎನ್ನಿಸುತ್ತದೆ’ ಎಂದು ಡೂರ್ಲಾಗ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ ಇದುವರೆಗಿನ ಗಿನ್ನಿಸ್ ವಿಶ್ವ ದಾಖಲೆ ಜಯಿಂಟ್ ಜಾರ್ಜ್ ಹೆಸರಿನ ಗ್ರೇಟ್ ಡೆನ್ ತಳಿಯ ನಾಯಿಯದಾಗಿತ್ತು. ಇದಕ್ಕಿಂತ ಒಂದು ಇಂಚು ಉದ್ದವಾಗಿರುವ ಜೂಸ್, ಜಯಿಂಟ್ ಜಾರ್ಜ್ ನಾಯಿಯ ಎತ್ತರದ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.