ಡಾ.ರಾಜೂರ್‌ಗೆ ಕಲಬುರ್ಗಿ ಪ್ರಶಸ್ತಿ

7

ಡಾ.ರಾಜೂರ್‌ಗೆ ಕಲಬುರ್ಗಿ ಪ್ರಶಸ್ತಿ

Published:
Updated:
ಡಾ.ರಾಜೂರ್‌ಗೆ ಕಲಬುರ್ಗಿ ಪ್ರಶಸ್ತಿ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಪ್ರಸಕ್ತ ಸಾಲಿನ ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಂಶೋಧಕ ಪ್ರಶಸ್ತಿಗೆ ಸಾಹಿತಿ ಡಾ.ವೀರಣ್ಣ ರಾಜೂರ್ ಭಾಜನ ರಾಗಿದ್ದಾರೆ. ಪ್ರಶಸ್ತಿ ₹25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.

‘ನವೆಂಬರ್ 26 ಮತ್ತು 27ರಂದು ಇಲ್ಲಿ ನಡೆಯುವ 37ನೇ ಅನುಭವ ಮಂಟಪ ಉತ್ಸವ ಮತ್ತು ಶರಣ ಕಮ್ಮಟ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

‘ಡಾ.ವೀರಣ್ಣ ರಾಜೂರ್ ಅವರು ಹಳಗನ್ನಡ, ನಡುಗನ್ನಡ, ಹೊಸಗನ್ನಡ, ವಚನ ಸಾಹಿತ್ಯ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಸಂಶೋಧನೆ, ರಂಗಭೂಮಿ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ 122 ಗ್ರಂಥಗಳನ್ನು ಮತ್ತು 600ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿ

ದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry