ಶುಕ್ರವಾರ, ಮೇ 27, 2022
26 °C

ಡಿ.4ಕ್ಕೆ ಫಿಡೆಲ್‌ ಕ್ಯಾಸ್ಟ್ರೊ ಅಂತ್ಯಕ್ರಿಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಡಿ.4ಕ್ಕೆ ಫಿಡೆಲ್‌ ಕ್ಯಾಸ್ಟ್ರೊ ಅಂತ್ಯಕ್ರಿಯೆ

ಹವಾನಾ: ಕ್ಯೂಬಾದ ಜನನಾಯಕ, ಮಾಜಿ ಅಧ್ಯಕ್ಷ ಫಿಡೆಲ್‌ ಕ್ಯಾಸ್ಟ್ರೊ ಶನಿವಾರ ನಿಧನರಾಗಿದ್ದು, ರಾಷ್ಟ್ರಾದ್ಯಂತ ಒಂಬತ್ತು ದಿನ ಶೋಕಾಚರಣೆ ಮಾಡಿ, ಡಿ. 4ರಂದು ಅಂತ್ಯಕ್ರಿಯೆ ನಡೆಯಲಿದೆ.

ನ.26ರಿಂದ ಡಿ.4ರವರೆಗೆ ಒಂಬತ್ತು ದಿನ ಶೋಕಾಚರಣೆ ನಡೆಸಲಾಗುವುದು. ಸಾರ್ವಜನಿಕ ಹಾಗೂ ಮಿಲಿಟರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಗುವುದು ಎಂದು ಸರ್ಕಾರದ ತಿಳಿಸಿದೆ.

ಫಿಡೆಲ್‌ ಕ್ಯಾಸ್ಟ್ರೊ ಅವರ ಪಾರ್ಥಿವ ಶರೀರವನ್ನು ನಾಲ್ಕು ದಿನ ಕಾಲ ರಾಷ್ಟ್ರದಾದ್ಯಂತ ಮೆರವಣಿಗೆ ನಡೆಸಿ, ನೈಋತ್ಯ ಕ್ಯೂಬಾದ ಐತಿಹಾಸಿಕ ನಗರಿ ಸಾಂಟಿಯಾಗೊದಲ್ಲಿ ಡಿ. 4ರಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

1959ರ ಕ್ಯೂಬಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫಿಡೆಲ್ ಕ್ಯಾಸ್ಟ್ರೊ ಅವರು ಮಾರ್ಕ್ಸ್‌ವಾದಿ ಹೋರಾಟಗಾರ ಚೆ ಗುವೆರಾ ಅವರ ಜತೆಗೂಡಿ ಹೋರಾಟ ನಡೆಸಿದ್ದರು.

90 ವರ್ಷಕಾಲ ಜೀವಿಸಿದ ಕಾಸ್ಟ್ರೊ, ಸುಮಾರು ಅರ್ಧ ಶತಮಾನದಷ್ಟು ದೀರ್ಘಕಾಲ ಕ್ಯೂಬಾದಲ್ಲಿ ಆಡಳಿತ ನಡೆಸಿದ್ದರು. 1959ರಿಂದ 1976ರವರೆಗೆ ಪ್ರಧಾನಮಂತ್ರಿಯಾಗಿ, 1976ರಿಂದ 2008ರವರೆಗೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು.

ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ ತಮ್ಮ ಸೋದರ ರೌಲ್‌ ಕ್ಯಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರಿಸಿದ್ದರು. ಕ್ಯಾಸ್ಟ್ರೊ ಪ್ರಸಕ್ತ ವರ್ಷ ಆಗಸ್ಟ್ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.