ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಬಹಿರಂಗವಾಗಿದ್ದು ₹2,000 ಕೋಟಿ ಅಕ್ರಮ ಹಣ!

7
ವಿತ್ತ ಸಚಿವಾಲಯ ಮಾಹಿತಿ

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಬಹಿರಂಗವಾಗಿದ್ದು ₹2,000 ಕೋಟಿ ಅಕ್ರಮ ಹಣ!

Published:
Updated:
ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಬಹಿರಂಗವಾಗಿದ್ದು ₹2,000 ಕೋಟಿ ಅಕ್ರಮ ಹಣ!

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಈವರೆಗೆ ₹2,000 ಕೋಟಿ ಅಕ್ರಮ ಹಣ ಬಹಿರಂಗವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

ನವೆಂಬರ್ 8ರ ನಂತರ ಆದಾಯ ತೆರಿಗೆ ಇಲಾಖೆ 400ಕ್ಕಿಂತಲೂ ಹೆಚ್ಚು ಅಕ್ರಮ ಹಣ ಪ್ರಕರಣಗಳನ್ನು ಬೇಧಿಸಿದ್ದು, ಇದರಲ್ಲಿ ₹130 ಕೋಟಿ ಹಣ ಮತ್ತು ಚಿನ್ನಾಭರಣಗಳು ಪತ್ತೆಯಾಗಿದೆ.

ಅಕ್ರಮ ಹಣದಲ್ಲಿ ರದ್ದು ಮಾಡಿರುವ ನೋಟುಗಳ ಸಂಖ್ಯೆಯೇ ಜಾಸ್ತಿಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಐಟಿ  ದಾಳಿಯಲ್ಲಿ ಅತೀ ಹೆಚ್ಚು ಮೊತ್ತ ಪತ್ತೆಯಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

30ಕ್ಕಿಂತಲೂ  ಹೆಚ್ಚು ಪ್ರಕರಣಗಳಲ್ಲಿ ಆದಾಯ ತೆರಿಗೆ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣಗಳ ಸಂಖ್ಯೆಯೇ ಹೆಚ್ಚು ಇದೆ ಎಂದು ಹೇಳಲಾಗಿದೆ.

ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಮತ್ತು ಇಬ್ಬರು ಗುತ್ತಿಗೆದಾರರ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಈವರೆಗೆ ₹ 6 ಕೋಟಿ ಅಧಿಕ ನಗದು ವಶಕ್ಕೆ ಪಡೆದಿದ್ದರು.

ದಾಳಿ ವೇಳೆ ₹ 4.7 ಕೋಟಿಯಷ್ಟು ₹ 2 ಸಾವಿರ ಮುಖ ಬೆಲೆಯ ಹೊಸ ನೋಟುಗಳು ಪತ್ತೆಯಾಗಿದ್ದು,ಉಳಿದ ಹಣ ₹100 ಮತ್ತು ಹಳೆಯ ₹ 500 ಮುಖ ಬೆಲೆಯ ನೋಟುಗಳಲ್ಲಿ ಸಿಕ್ಕಿದೆ.

ಅಲ್ಲದೆ, ₹ 2 ಕೋಟಿ ಮೌಲ್ಯದ 7 ಕೆಜಿಯಷ್ಟು ಚಿನ್ನದ ಗಟ್ಟಿ ಮತ್ತು 7 ಕೆಜಿಯಷ್ಟು ಆಭರಣಗಳು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ದುಬಾರಿ ಲ್ಯಾಂಬರ್ಗಿನಿ  ಕಾರೊಂದನ್ನೂ ಜಪ್ತಿ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry