ಭಾನುವಾರ, ಜೂಲೈ 5, 2020
23 °C

47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಾಕ್ ವಿಮಾನ ಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಾಕ್ ವಿಮಾನ ಪತನ

 ಇಸ್ಲಾಮಾಬಾದ್: 47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಮಾನ ಬುಧವಾರ ಪತನವಾಗಿದೆ.

ಚಿತ್ರಾಲ್‍ನಿಂದ  ಸಂಜೆ 3.30ಕ್ಕೆ ಹೊರಟಿದ್ದ  ಪಿಕೆ-661 ವಿಮಾನ ಟೇಕ್ ಆಫ್ ಆಗಿದ್ದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಕಣ್ಮರೆಯಾಗಿತ್ತು.

ವಿಮಾನದಲ್ಲಿ 5 ಮಂದಿ ವಿಮಾನ ಸಿಬ್ಬಂದಿಗಳು ಸೇರಿದಂತೆ 47 ಮಂದಿ ಇದ್ದರು ಎಂದು ವಿಮಾನ ಸಂಸ್ಥೆ ಹೇಳಿದೆ.

ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಸಂಸ್ಥೆಯ  ಪಿಕೆ-661  ವಿಮಾನ ಟೇಕಾಫ್ ಆದ ನಂತರ ನಿಯಂತ್ರಣ ಕಳೆದುಕೊಂಡಿದೆ. ವಿಮಾನವನ್ನು ಪತ್ತೆ ಹಚ್ಚುವ ಕಾರ್ಯಗಳು ಮುಂದುವರಿದಿದೆ. ವಿಮಾನದಲ್ಲಿ 40ಕ್ಕಿಂತಲೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಪಿಐಎ ವಕ್ತಾರ ಡೇನಿಯಲ್ ಗಿಲಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದಾಗ್ಯೂ, ವಿಮಾನವು ಮಜಾಬ್ ಮತ್ತು ಪಿಪ್‍ಲಿಯಾನ್ ನಡುವೆ ಹವೇಲಿನ್  ಬಳಿ ಪತನಗೊಂಡಿದೆ ಎಂದು ಅಬೊಟಾಬಾದ್ ಡಿಪಿಒ ದೃಢೀಕರಿಸಿದೆ.

ಪಿಐಎ  ಸಹಾಯವಾಣಿ ಸಂಖ್ಯೆ: 0092-21-99044890, 0092-21-99044376 ಮತ್ತು 0092-21-99044394

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.