ಬಾಕ್ಸಿಂಗ್: ಪದಕದತ್ತ ಸರ್ಜುಬಾಲಾ

7

ಬಾಕ್ಸಿಂಗ್: ಪದಕದತ್ತ ಸರ್ಜುಬಾಲಾ

Published:
Updated:
ಬಾಕ್ಸಿಂಗ್: ಪದಕದತ್ತ ಸರ್ಜುಬಾಲಾ

ನವದೆಹಲಿ:  ಭಾರತದ ಸರ್ಜುಬಾಲಾ ದೇವಿ, ಪ್ರಿಯಾಂಕಾ ಚೌಧರಿ, ಪೂಜಾ, ಕವಿತಾ ಗೋಯತ್‌, ಸೀಮಾ ಪೂನಿಯಾ 6ನೇ ರಾಷ್ಟ್ರೀಯ ಕಪ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಪದಕ ಖಚಿತ ಪಡಿಸಿಕೊಂಡಿದ್ದಾರೆ.ಸರ್ಬಿಯಾದ ವರ್ಬಾಸ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಸೆಮಿಫೈನಲ್‌ ತಲುಪಿದ್ದಾರೆ. ಸೀಮಾ ಪೂನಿಯಾ 81 ಕೆ.ಜಿ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಟೂರ್ನಿಯಲ್ಲಿ ಒಟ್ಟು 18 ರಾಷ್ಟ್ರಗಳ ತಂಡಗಳು ಭಾಗವಹಿಸಿವೆ. 69ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ಬೈ ಪಡೆದು ಸೆಮಿಗೆ ಲಗ್ಗೆಯಿಟ್ಟರು.ಸರ್ಜುಬಾಲಾ 48ಕೆ.ಜಿ ವಿಭಾಗದಲ್ಲಿ ಸ್ಥಳೀಯ ಆಟಗಾರ್ತಿ ಕಟಾರಿನಾ ಜುರೋವಿಕ್ ವಿರುದ್ಧ ಜಯ ದಾಖಲಿಸಿದರು. 60ಕೆ.ಜಿ ವಿಭಾಗದಲ್ಲಿ ಪ್ರಿಯಾಂಕಾ 3–0ರಲ್ಲಿ ಲುಥುವೇನಿಯಾದ ವೈದಾ ಮಸಿಯೊಕೈತ್‌ ಮೇಲೆ ಗೆದ್ದರು. 75ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕವಿತಾ ರಷ್ಯಾದ ಓಲ್ಗಾ ಲಪೆಖಾ ಅವರನ್ನು ಮಣಿಸಿದರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಒಲಿಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry