ಸ್ಖಲನಕ್ಕೂ ಹಾರ್ಮೋನ್‌ಗೂ ಸಂಬಂಧವಿದೆ

7
ಅಂಕುರ

ಸ್ಖಲನಕ್ಕೂ ಹಾರ್ಮೋನ್‌ಗೂ ಸಂಬಂಧವಿದೆ

Published:
Updated:
ಸ್ಖಲನಕ್ಕೂ ಹಾರ್ಮೋನ್‌ಗೂ ಸಂಬಂಧವಿದೆ

ಸಂತೃಪ್ತಿ ಎಂಬುದು ನಿಮ್ಮ ಮೆದುಳಿನಲ್ಲಿದೆ. ಸೆಕ್ಸ್ ಕೂಡ ಇದಕ್ಕೆ ಹೊರತಲ್ಲ. ಉದ್ರೇಕ-ಸಂತೃಪ್ತಿ ಮತ್ತು ಮನಸ್ಸಿಗೆ ನೇರ ಸಂಬಂಧವಿದೆ. ಸೆಕ್ಸ್ ಎನ್ನುವುದು ಮೆದುಳಿನ ಆಳದಲ್ಲಿ ನಡೆಯುವ ಕ್ರಿಯೆಗಳ ದೈಹಿಕ ಅಭಿವ್ಯಕ್ತಿ ಮಾತ್ರವೇ ಆಗಿರುತ್ತದೆ. ಪುರುಷರ ವಿಚಾರದಲ್ಲಿ ಇದು ಸಂಪೂರ್ಣ ಸತ್ಯ. ಸಣ್ಣ ಆತಂಕ ಅಥವಾ ಕಿರಿಕಿರಿಯೂ ಉದ್ರೇಕದ ಗಡುಸುತನವನ್ನು ಹಾಳು ಮಾಡಬಹುದು.

 

ಸೆಕ್ಸ್ ವಿಚಾರದಲ್ಲಿ ಮೆದುಳೇಕೆ ಇಷ್ಟೊಂದು ಶಕ್ತಿಶಾಲಿ? ಇದಕ್ಕೆ ಉತ್ತರ ಹೀಗಿದೆ… ಸಂತೃಪ್ತಿಯ ಸಂವೇದನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳೂ ಮೆದುಳಿನಲ್ಲೇ ನಡೆಯುತ್ತವೆ.  

 

ಮೆದುಳಿನಲ್ಲಿ ಹಾರ್ಮೋನುಗಳು ನಡೆಸುವ ಜೀವರಸಾಯನ ಪ್ರಕ್ರಿಯೆಗಳಿಂದ ಸಂತೃಪ್ತಿಯ ಅನುಭವ ಮನಸ್ಸಿಗೆ ಸಿಗುತ್ತದೆ. ಸೆಕ್ಸ್ ಮಾತ್ರವೇ ಅಲ್ಲ, ಎಲ್ಲ ವಿಧದ ಸಂತೃಪ್ತಿಗೂ ಹಾರ್ಮೋನುಗಳ ಸ್ರವಿಸುವಿಕೆಯೇ ಮೂಲ. ಸೆಕ್ಸ್‌ವಿಚಾರದಲ್ಲಿ ಟೆಸ್ಟೊಸ್ಟಿರಾನ್, ಪ್ರೊಲ್ಯಾಕ್ಟಿನ್, ಸಿರೊಟೊನಿನ್, ವಾಸೊಪ್ರೆಸಿನ್, ಆಕ್ಸಿಟೊಸಿನ್ ಮತ್ತು ಎಂಡೋರ್ಫಿನ್ ಹಾರ್ಮೋನುಗಳು ಪ್ರಮುಖ ಪಾತ್ರ ವಹಿಸುತ್ತವೆ.

 

ಈ ಹಾರ್ಮೋನುಗಳು ಮೆದುಳಿನಲ್ಲಿರುವ ಸಂತೃಪ್ತಿಯನ್ನು ಅನುಭವಕ್ಕೆ ತಂದುಕೊಡುವ ಜೀವಕೋಶಗಳ ಮೇಲೆ ಪ್ರಭಾವ ಬೀರುತ್ತವೆ. ಸಂಭೋಗದ ವೇಳೆ ಮತ್ತು ನಂತರ ಮನಸ್ಸಿನಲ್ಲಿ ಮೂಡುವ ಅದ್ಭುತ ಸಂತೃಪ್ತಿಯ ಭಾವನೆಗೆ ಇದು ಮುಖ್ಯ ಕಾರಣ. ಈ ಮುಖ್ಯ ಪ್ರಕ್ರಿಯೆಯಲ್ಲಿ ಆಗುವ ಸಮಸ್ಯೆಗಳೇ ಎಲ್ಲ ವಿಧದ ಲೈಂಗಿಕ ತೊಂದರೆಗಳಿಗೂ ಮತ್ತು ಅಶಕ್ತಿಗೆ ಮೂಲ ಕಾರಣ.

 

ಸೆರೊಟೊನಿನ್ ಏಕೆ ಮುಖ್ಯ?

ಶೀಘ್ರ ಸ್ಖಲನಕ್ಕೆ ಸೆರೊಟಿನ್ ಹಾರ್ಮೋನ್ ಸ್ರವಿಸುವಿಕೆಯಲ್ಲಿ ಆಗುವ ಏರುಪೇರು ಬಹುಮುಖ್ಯ ಕಾರಣ. ಈ ಹಾರ್ಮೋನ್ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತೆ. ಇದನ್ನು ಸಂತೋಷದ ಹಾರ್ಮೋನ್ ಎಂದೂ ಕರೆಯುತ್ತಾರೆ. ಈ ಹಾರ್ಮೋನ್ ಸ್ರವಿಸುವಿಕೆಯಿಂದ ಮನಸಿಗೆ ಖುಷಿ, ತೃಪ್ತಿ, ನಿರೀಕ್ಷೆ ಮೀರಿದ ಆನಂದ ಮತ್ತು ಅಂಗಣದಲ್ಲಿ ತೇಲಾಡಿದ ಅನುಭವ ಸಿಗುತ್ತದೆ.

 

ಎಲ್ಲಕ್ಕಿಂತ ಮುಖ್ಯವಾಗಿ ಸೆರೊಟೊನಿನ್ ದೇಹದ ಒತ್ತಡ ಕಡಿಮೆಯಾದ ಪರಿಣಾಮವನ್ನು ಅನುಭವಕ್ಕೆ ತಂದುಕೊಡುತ್ತದೆ. ಪುರುಷರಿಗೆ ಉದ್ರೇಕ ಮತ್ತು ಗಡುಸುತನದ ನಿಯಂತ್ರಣ ಮತ್ತು ನಿರ್ವಹಣೆಗೆ ಇದು ಬಹಳ ಮುಖ್ಯ. ಸ್ಖಲನದ ಅವಧಿಯ ನಿಯಂತ್ರಣ ಮತ್ತು ಸಂಭೋಗದ ಅವಧಿಯನ್ನು ಹಿಗ್ಗಿಸಲು ಇದು ಅತ್ಯಗತ್ಯ.

 

ಸ್ಖಲನದಲ್ಲಿ ಸೆರೊಟೊನಿನ್ ಹಾರ್ಮೋನ್ ನಿರ್ವಹಿಸುವ ಪಾತ್ರದ ಬಗ್ಗೆ ಅನೇಕ ವೈಜ್ಣಾನಿಕ ಅಧ್ಯಯನಗಳು ನಡೆದಿವೆ. ಹಾರ್ಮೊನ್‌ನ ಮಟ್ಟ ಕಡಿಮೆ ಇರುವ ಪುರುಷರು ಸ್ಖಲನದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಇಂಥವರು ಅತಿ ಶೀಘ್ರದಲ್ಲಿ ಉದ್ರೇಕ ಮತ್ತು ಸಂಭೋಗದ ತುರೀಯ ಅವಸ್ಥೆ ಮುಟ್ಟುವುದರಿಂದ ಶೀಘ್ರ ಸ್ಖಲನ ಸಮಸ್ಯೆ ಅನುಭವಿಸುತ್ತಾರೆ.

 

ನನಗೆ ಶೀಘ್ರ ಸ್ಖಲನ ಸಮಸ್ಯೆ ಇದೆ. ನನ್ನ ಹೆಂಡತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸಲು ಆಗುತ್ತಿಲ್ಲ. ಪರಸ್ತ್ರೀಯರನ್ನು ಕಂಡಾಗ ಕೆಲವೊಮ್ಮೆ ಉದ್ರೇಕಗೊಳ್ಳುತ್ತೇನೆ. ದಯವಿಟ್ಟು ಸಹಾಯ ಮಾಡಿ…

 

ಶೀಘ್ರ ಸ್ಖಲನಕ್ಕೆ ನಿರ್ದಿಷ್ಟ ಕಾರಣ ಈವರೆಗೆ ಗೊತ್ತಾಗಿಲ್ಲ. ಈ ಹಿಂದೆ ಇದಕ್ಕೆ ಮಾನಸಿಕ ಸಮಸ್ಯೆಗಳಷ್ಟೇ ಕಾರಣ ಎಂದು ಭಾವಿಸಲಾಗಿತ್ತು. ಶೀಘ್ರ ಸ್ಖಲನಕ್ಕೆ ಹಲವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಸಂಕೀರ್ಣ ಬೆಸೆದುಕೊಳ್ಳುವಿಕೆ ಕಾರಣ ಎಂದು ವೈದ್ಯರು ಈಗ ಅರಿತುಕೊಂಡಿದ್ದಾರೆ:

 

* ಮಾನಸಿಕ ಕಾರಣಗಳು

 

* ಚಿಕ್ಕ ವಯಸ್ಸಿನ ಲೈಂಗಿಕ ಅನುಭವಗಳು

 

* ಲೈಂಗಿಕ ದೌರ್ಜನ್ಯ  

 

* ದೇಹದ ಆಕಾರದ ಬಗ್ಗೆ ಕೀಳರಿಮೆ

 

* ಖಿನ್ನತೆ

 

* ಶೀಘ್ರ ಸ್ಖಲನದ ಬಗ್ಗೆ ಚಿಂತೆ

 

* ಲೈಂಗಿಕ ಚಟುವಟಿಕೆಗಳ ಬಗ್ಗೆ ಪಾಪಪ್ರಜ್ಣೆ

 

 ಶೀಘ್ರ ಸ್ಖಲನಕ್ಕೆ ಕಾರಣವಾಗುವ ಇತರ ಅಂಶಗಳು

ಉದ್ರೇಕ ವೈಫಲ್ಯ: ಸಂಭೋಗದ ವೇಳೆ ಉದ್ರೇಕಗೊಂಡು ಪುರುಷರು ಸ್ಖಲನಕ್ಕೆ ಆತುರ ಪಡಬಹುದು. ಕ್ರಮೇಣ ಇದು ಅವರ ಲೈಂಗಿಕ ಹವ್ಯಾಸವೇ ಆಗಿ ಬಿಡುತ್ತದೆ. ಇದನ್ನು ಬದಲಿಸುವುದು ಕಷ್ಟ.

 

ಆತಂಕ: ಶೀಘ್ರ ಸ್ಖಲನದ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಪುರುಷರು ಲೈಂಗಿಕ ಚಟುವಟಿಕೆಗಳು ಸಂಭೋಗದ ವಿಚಾರಗಳಲ್ಲಿ ಆತಂಕವನ್ನೂ ಅನುಭವಿಸುತ್ತಿರುತ್ತಾರೆ.

 

ಸಂಬಂಧದ ಸಮಸ್ಯೆಗಳು: ಕೆಲವರು ಮುಕ್ತ ಲೈಂಗಿಕ ಮನಃಸ್ಥಿತಿ ಹೊಂದಿರುತ್ತಾರೆ. ಹಲವರೊಂದಿಗೆ ಸಂಭೋಗದ ಅನುಭವ ಪಡೆದುಕೊಂಡಿರುತ್ತಾರೆ. ಆದರೆ ಪ್ರಸ್ತುತ ಸಂದರ್ಭ ಹಾಲಿ ಬಾಳುತ್ತಿರುವ ಸಂಗಾತಿಯೊಂದಿಗೆ ವಿವಿಧ ಕಾರಣಗಳಿಂದ ವಿರಸ ಮೂಡಿರಬಹುದು. ಇದೂ ಸಹ ಶೀಘ್ರ ಸ್ಖಲನಕ್ಕೆ ಕಾರಣವಾಗುತ್ತದೆ.

 

ದೈಹಿಕ ಕಾರಣಗಳು:  

ಕೆಲವು ದೈಹಿಕ ಸಮಸ್ಯೆಗಳಿಂದಲೂ ಶೀಘ್ರ ಸ್ಖಲನವು ವ್ಯಕ್ತಿಯನ್ನು ಬಾಧಿಸಬಹುದು. ಮುಖ್ಯ ಕಾರಣಗಳ ಪಟ್ಟಿ ಇಂತಿದೆ:

 

* ಹಾರ್ಮೋನ್‌ ಮಟ್ಟದ ವೈಪರಿತ್ಯ

 

* ಮೆದುಳಿನಲ್ಲಿ ಕೆಲಸ ಮಾಡುವ ನ್ಯೂರೋ ಟ್ರಾನ್ಸ್‌ಮಿಟರ್ಸ್‌ ಎಂದು ಕರೆಯುವ ರಾಸಾಯನಿಕಗಳ ಮಟ್ಟದಲ್ಲಿ ಏರುಪೇರು.

 

* ಮೂತ್ರನಾಳ ಅಥವಾ ಮೂತ್ರಕೋಶದ ಸೋಂಕು ಮತ್ತು ಉರಿ

 

* ಆನುವಂಶಿಕ ಸಮಸ್ಯೆಗಳು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry