ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ– ಮೆಕ್ಸಿಕೊ ಗಡಿ ‘ಗೋಡೆ’ ಜಗಳ

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

ಅಮೆರಿಕಕ್ಕೆ ಒಳನುಸುಳುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದೆ. ಅವರನ್ನು ತಡೆಯಲು ಮೆಕ್ಸಿಕೊ ಗಡಿಯಲ್ಲಿ ಭದ್ರವಾದ ಗೋಡೆ ನಿರ್ಮಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ರಿಚರ್ಡ್‌ ನಿಕ್ಸನ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಭಯ ದೇಶಗಳ ಗಡಿಯಲ್ಲಿ ಬೇಲಿ ನಿರ್ಮಿಸುವ ಕೆಲಸ ಪ್ರಾರಂಭವಾಗಿತ್ತು. ಬರಾಕ್ ಒಬಾಮ ಆಡಳಿತದಲ್ಲಿಯೂ ಕೆಲವು ಭಾಗಗಳಲ್ಲಿ ಬೇಲಿಯನ್ನು ನಿರ್ಮಿಸುವ ಮತ್ತು ಪುನರ್‌ಸ್ಥಾಪಿಸುವ ಕೆಲಸ ನಡೆದಿತ್ತು.

ಉದ್ದೇಶ : ಅಕ್ರಮ ವಲಸಿಗರಿಗೆ ಕಡಿವಾಣ, ಮಾದಕ ವಸ್ತು ಸಾಗಣೆಗೆ ತಡೆ.

ಈಗಿರುವ ಗಡಿಯಲ್ಲಿ ಕೆಲವು ಕಡೆ ತಂತಿ ಬೇಲಿ, ಕೆಲವೆಡೆ ಎತ್ತರದ ಉಕ್ಕಿನ ಕಂಬಿಗಳನ್ನು ಅಳವಡಿಸಲಾಗಿದೆ. ಇನ್ನು ಹಲವೆಡೆ ಯಾವುದೇ ಬೇಲಿ ಇಲ್ಲ. ಗಡಿಯ ಗುರುತಿನ ಸಂಕೇತಗಳನ್ನು ಮಾತ್ರ ಇರಿಸಲಾಗಿದೆ.

*ಅಕ್ರಮ ಒಳನುಸುಳುವಿಕೆ ಸ್ಥಳಗಳು: ಸೊನೊರಾನ್‌ ಮರುಭೂಮಿ, ಅರಿಝೋನಾದ ಬಬೊಕಿವಾರಿ ಬೆಟ್ಟ ಪ್ರದೇಶ.

*ಹಾದುಹೋಗುವ ಪ್ರದೇಶ: ಬೆಟ್ಟಗುಡ್ಡಗಳು, ಮರುಭೂಮಿ, ಸಮುದ್ರ, ನಗರ, ಹಳ್ಳಿಗಳು

ಹಣ ನೀಡಲ್ಲ ಎಂದ ಮೆಕ್ಸಿಕೊ
ಗೋಡೆ ನಿರ್ಮಾಣದ ವೆಚ್ಚದ ಮೂರನೇ ಎರಡರಷ್ಟು ಹಣ ಪಾವತಿಸುವಂತೆ ಮೆಕ್ಸಿಕೊಗೆ ಈ ಹಿಂದೆಯೇ ಅಮೆರಿಕ ತಿಳಿಸಿದೆ. ಆದರೆ ಈ ನಿರ್ಧಾರವನ್ನು ಕಟುವಾಗಿ ಖಂಡಿಸಿರುವ ಮೆಕ್ಸಿಕೊ ಅಧ್ಯಕ್ಷ ಎನ್ರಿಕ್‌ ಪೆನಾ ನಿಯಾಟೊ, ಯಾವುದೇ ಹಣ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ದ್ವಿ– ಪಕ್ಷೀಯ ಸಂಬಂಧವೃದ್ಧಿ ನಿಟ್ಟಿನಲ್ಲಿ ಕೈಗೊಳ್ಳಬೇಕಿದ್ದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT