ಚಿಕಿತ್ಸೆಗೆ ₹ 10 ಲಕ್ಷ ನೆರವು ನೀಡಿದ ಪಿಂಕಿ ರೋಶನ್‌

7

ಚಿಕಿತ್ಸೆಗೆ ₹ 10 ಲಕ್ಷ ನೆರವು ನೀಡಿದ ಪಿಂಕಿ ರೋಶನ್‌

Published:
Updated:
ಚಿಕಿತ್ಸೆಗೆ ₹ 10 ಲಕ್ಷ ನೆರವು ನೀಡಿದ ಪಿಂಕಿ ರೋಶನ್‌

ಮುಂಬೈ: ವಿಶ್ವದ ಅತಿಭಾರತದ ಮಹಿಳೆ ಈಜಿಪ್ಟಿನ ಎಮನ್‌ ಅಹ್ಮದ್‌ ಅವರ ಚಿಕಿತ್ಸೆಗೆ ಬಾಲಿವುಡ್‌ ಸ್ಟಾರ್‌ ಹೃತಿಕ್‌ ರೋಶನ್‌ ಅವರ ತಾಯಿ ಪಿಂಕಿ ರೋಶನ್‌ ₹ 10 ಲಕ್ಷ ಸಹಾಯಧನ ನೀಡಿದ್ದಾರೆ.ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಮನ್‌ ಅವರ ದೇಹದ ಭಾರ ಕಡಿಮೆ ಮಾಡುವ ಚಿಕಿತ್ಸೆಗೆ ₹ 1 ಕೋಟಿ ವೆಚ್ಚವಾಗಲಿದೆ.ಬಾರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ನಡೆಸಲಿರುವ ವೈದ್ಯರು ಅದರ ವೆಚ್ಚವನ್ನು ಎಮನ್‌ ಅವರಿಗೆ ಭರಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಾಲಿವುಡ್‌ ನಿರ್ಮಾಪಕ ರಾಕೇಶ್‌ ರೋಶನ್‌ ಅವರ ಪತ್ನಿ ಪಿಂಕಿ ರೋಶನ್‌ ಧನಸಹಾಯ ನೀಡಿದ್ದಾರೆ.‘ಎಮನ್‌ ಭಾರತಕ್ಕೆ ಬಂದಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಂದಿನಿಂದಲೆ ಆಕೆಗೆ ಸಹಾಯ ಮಾಡಬೇಕು ಎಂಬ ವಿಚಾರ ಮನದಲ್ಲಿ ಮೂಡಿತ್ತು. ಈ ನಿಟ್ಟಿನಲ್ಲಿ ಆಕೆಗೆ ನಮ್ಮ ಕೈಲಾದ ಸಹಾಯ ಮಾಡಿದ್ದೇವೆ’ ಎಂದು ಪಿಂಕಿ ರೋಶನ್‌ ತಿಳಿಸಿದ್ದಾರೆ.ಎಮನ್‌ ಅವರ ಚಿಕಿತ್ಸೆಗೆ ಸಾರ್ವಜನಿಕರು ಮುಂದಾಗಿದ್ದಾರೆ. ಆಸ್ಪತ್ರೆ ಖಾತೆಗೆ ₹ 35 ಲಕ್ಷ ಜಮೆಯಾಗಿದೆ ಎಂದು ಸೈಫಿ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry