ಕಾಶ್ಮೀರ: ಮೂವರು ನಾಗರಿಕರ ಬಲಿ

7

ಕಾಶ್ಮೀರ: ಮೂವರು ನಾಗರಿಕರ ಬಲಿ

Published:
Updated:
ಕಾಶ್ಮೀರ: ಮೂವರು ನಾಗರಿಕರ ಬಲಿ

ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಎನ್‌ಕೌಂಟರ್‌ಗೆ ಒಬ್ಬ ಉಗ್ರ ಬಲಿಯಾಗಿದ್ದು, ಭದ್ರತಾ ಪಡೆಗಳ ಜತೆಗಿನ ಘರ್ಷಣೆಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ.

‘ಬಡ್ಗಾಂವ್‌ ಜಿಲ್ಲೆಯ ಚಡೂರ ಉಪ ವಿಭಾಗದ ದುರ್ಬುಗ್ ಗ್ರಾಮದಲ್ಲಿ  ಅಡಗಿ ಕುಳಿತಿದ್ದ ಉಗ್ರನನ್ನು ಭದ್ರತಾ ಪಡೆಗಳು ಕೊಂದಿವೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ.

‘ಕಾರ್ಯಾಚರಣೆ ಕೊನೆಗೊಂಡಿದ್ದು, ಸ್ಥಳದಲ್ಲಿ ಒಬ್ಬ ಉಗ್ರನ ಮೃತದೇಹ ದೊರೆತಿದೆ. ಆತನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ಮೂವರು ನಾಗರಿಕರು ಬಲಿ: ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಪ್ರತಿಭಟಿಸಿ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿದಾಗ ಘರ್ಷಣೆ ಆರಂಭವಾಗಿದೆ.

ಅವರನ್ನು ಚದುರಿಸಲು ಗುಂಡು ಹಾರಿಸಿದಾಗ ಮೂವರು ಬಲಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry