ವಿಶ್ವದ 50 ಬ್ಯಾಂಕ್‌ಗಳ ಪಟ್ಟಿಗೆ ಎಸ್‌ಬಿಐ

ನವದೆಹಲಿ: ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಶನಿವಾರ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (ಎಸ್‌ಬಿಐ) ವಿಲೀನವಾಗಿವೆ.
ದೇಶದಲ್ಲಿಯೇ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ಈ ವಿಲೀನ ಪ್ರಕ್ರಿಯೆ ನಂತರ ಆಸ್ತಿ ಮೌಲ್ಯದ ಆಧಾರದ ಮೇಲೆ ವಿಶ್ವದಲ್ಲಿರುವ ಪ್ರಮುಖ 50 ಬ್ಯಾಂಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆ್ಯಂಡ್ ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್, ಎಸ್‌ಬಿಐನಲ್ಲಿ ವಿಲೀನಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.
ವಿಲೀನಗೊಂಡಿರುವ ಬ್ಯಾಂಕ್‌ಗಳ ಷೇರುದಾರರನ್ನು ಸ್ವಾಗತಿಸಿರುವ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು, ತ್ರೈಮಾಸಿಕದ ಒಳಗೆ ಮಹತ್ವದ ಬದಲಾವಣೆ ತರಲು ಬ್ಯಾಂಕ್ ಶ್ರಮಿಸಲಿದೆ ಎಂದು ಹೇಳಿದ್ದಾರೆ.
ಈ ವಿಲೀನದಿಂದ ಬ್ಯಾಂಕ್ ಸಾಮರ್ಥ್ಯ ವಿಸ್ತರಣೆಯಾಗಲಿದೆ. ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಲಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ವಿಲೀನದ ನಂತರ ಎಸ್‌ಬಿಐ
37ಕೋಟಿ ಗ್ರಾಹಕರ ಸಂಖ್ಯೆ
24ಸಾವಿರ ಒಟ್ಟು ಶಾಖೆಗಳು
₹18.50 ಲಕ್ಷ ಕೋಟಿ- ವಿಲೀನವಾಗಿರುವ ಬ್ಯಾಂಕ್‌ಗಳ ಮುಂಗಡ
59ಸಾವಿರ ಎಟಿಎಂಗಳು
₹26ಲಕ್ಷ ಕೋಟಿ ವಿಲೀನವಾಗಿರುವ ಬ್ಯಾಂಕ್‌ಗಳ ಸಂಪತ್ತು ಮೌಲ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.