ವಿಶ್ವದ ಎರಡನೇ ಅತಿ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

7

ವಿಶ್ವದ ಎರಡನೇ ಅತಿ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

Published:
Updated:
ವಿಶ್ವದ ಎರಡನೇ ಅತಿ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

ಲಾಸ್‌ ಏಂಜಲೀಸ್‌: ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದಾರೆ.

ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದಾರೆ.

ಲಾಸ್  ಏಂಜಲೀಸ್‌ ಮೂಲದ ವಿಡಿಯೊ ಹಾಗೂ ಫೋಟೋ ಸಾಮಾಜಿಕ ಜಾಲತಾಣ ನೆಟ್‌ ‘ಬಜ್‌ನೆಟ್‌’ ನಡೆಸಿದ ಮತದಾನದ ವೇಳೆ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಪ್‌ ತಾರೆ ಬಿಯಾನ್ಸ್ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಆಯ್ಕೆ ಪಟ್ಟಿಯನ್ನು  ಪ್ರಿಯಾಂಕಾ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಮತದಾನ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ಬಜ್‌ನೆಟ್‌ ಹಾಗೂ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದ. ನನ್ನ ಪಾಲಿಗೂ ಕೂಡ ಬಿಯಾನ್ಸ್‌ ನಂ.1’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಮೆರಿಕ ಫ್ಯಾಷನ್‌ ಮಾಡೆಲ್‌, ಟೇಲರ್‌ ಹಿಲ್‌ ಅವರು ಮೂರನೇ ಸ್ಥಾನ ಪಡೆದಿದ್ದು, ಎಮ್ಮಾ ವ್ಯಾಟ್ಸನ್‌, ಡಕೋಟಾ ಜಾನ್ಸನ್‌ ಹಾಗೂ ಹಿಲರಿ ಕ್ಲಿಂಟನ್‌ ಕ್ರಮವಾಗಿ ನಾಲ್ಕು, ಐದು ಹಾಗೂ ಆರನೇ ಸ್ಥಾನವನ್ನು ಪಡೆದಿದ್ದಾರೆ.

ಏಂಜಲಿನಾ ಜೋಲಿ ಅವರು 8ನೇ ಸ್ಥಾನ ಪಡೆದಿದ್ದು, ಆಸ್ಕರ್‌ ಪ್ರಶಸ್ತಿ ಪುರಸ್ಕೃತರಾದ ಎಮ್ಮಾ ಸ್ಟೋನ್‌ 12ನೇ ಸ್ಥಾನ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry