ಮ್ಯಾಡ್ರಿಡ್: ಬ್ರಿಟನ್ನ ಆ್ಯಂಡಿ ಮರ್ರೆ ಮತ್ತು ಜರ್ಮನಿಯ ಏಂಜಲಿಕ್ ಕೆರ್ಬರ್ ಅವರು ಕ್ರಮವಾಗಿ ಪುರುಷರ ವೃತ್ತಿಪರ ಟೆನಿಸ್ ಸಂಸ್ಥೆ (ಎಟಿಪಿ) ಮತ್ತು ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಸೋಮವಾರ ಬಿಡುಗಡೆ ಮಾಡಿರುವ ಸಿಂಗಲ್ಸ್ ವಿಭಾಗದ ನೂತನ ವಿಶ್ವ ಕ್ರಮಾಂಕ ಪಟ್ಟಿ ಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಮರ್ರೆ ಅವರ ಖಾತೆಯಲ್ಲಿ 11,600 ಪಾಯಿಂಟ್ಸ್ ಇದ್ದು ಅವರು ಎರಡನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ (7905) ಅವರಿಗಿಂತ 3695 ಪಾಯಿಂಟ್ಸ್ ಹೆಚ್ಚು ಹೊಂದಿದ್ದಾರೆ.

ಸ್ವಿಟ್ಜರ್ಲೆಂಡ್ನ ಆಟಗಾರರಾದ ಸ್ಟಾನಿಸ್ಲಾಸ್ ವಾವ್ರಿಂಕ ಮತ್ತು ರೋಜರ್ ಫೆಡರರ್ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

ಹಿಂದಿನ ಟೂರ್ನಿಗಳಲ್ಲಿ ಸ್ಥಿರ ಸಾಮರ್ಥ್ಯ ತೋರಲು ವಿಫಲವಾಗಿದ್ದ ಸ್ಪೇನ್ನ ರಫೆಲ್ ನಡಾಲ್ ಅವರು ಎರಡು ಸ್ಥಾನ ಕಳೆದುಕೊಂಡಿದ್ದು ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಪಾನ್ನ ಕಿ ನಿಶಿಕೋರಿ ಅವರು ಐದನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ಕೆರ್ಬರ್ ಸಾಧನೆ: ಕೆರ್ಬರ್ 7,335 ಪಾಯಿಂಟ್ಸ್ ಹೊಂದಿದ್ದು ಮೊದಲ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಬಲಗೈ ಆಟಗಾರ್ತಿ ಸೆರೆನಾ ಅವರು ಈ ಮೊದಲು ಅಗ್ರ ಪಟ್ಟ ಹೊಂದಿದ್ದರು. ಗಾಯಗೊಂಡಿರುವ ಕಾರಣ ಅವರು ಹಿಂದಿನ ಕೆಲ ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.