ಗ್ರೂಪ್ ಸೆಲ್ಫಿಗಾಗಿ ಒಪೊ ‘ಎಫ್ 3’

ಮುಂಬೈ: ಕ್ಯಾಮೆರಾ ಫೋನ್‌ಗಳಿಗಾಗಿ ಹೆಸರುವಾಸಿಯದ ಮೊಬೈಲ್ ತಯಾರಿಕಾ ಸಂಸ್ಥೆ ಒಪೊ, ಹೊಸದಾಗಿ ಸೆಲ್ಫಿ ಎಕ್ಸ್‌ಪರ್ಟ್ ಸರಣಿಯ ಮತ್ತೊಂದು ಸ್ಮಾರ್ಟ್‌ಫೋನ್ ‘ಎಫ್ 3’ಯನ್ನು ಬಿಡುಗಡೆ ಮಾಡಿದೆ.
ಯುವ ಜನತೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಗ್ರೂಪ್ ‘ಸೆಲ್ಫಿ’ ವ್ಯಾಮೋಹವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾದ ಇದು ಸೆಲ್ಫಿ ಎಕ್ಸ್‌ಪರ್ಟ್ ಸರಣಿಯ ಎರಡನೇ ಮೊಬೈಲ್ ಆಗಿದೆ.
‘ಒಂದು ಸೆಲ್ಫಿಗೆ, ಮತ್ತೊಂದು ಗ್ರೂಪ್ ಸೆಲ್ಫಿಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಬಿಡುಗಡೆಯಾದ ಈ ಮೊಬೈಲ್ ಇತ್ತೀಚೆಗೆ ಬಿಡುಗಡೆಯಾದ ‘ಎಫ್3 ಪ್ಲಸ್’ನಂತೆ ಮುಂಭಾಗದಲ್ಲಿ ಎರಡು ಕ್ಯಾಮೆರಾ ಹೊಂದಿದೆ.
ಇದರ ‘ಡಬಲ್ ವ್ಯೂ ಗ್ರೂಪ್ ಸೆಲ್ಫಿ ಕ್ಯಾಮೆರಾ’ ಸಾಮಾನ್ಯ ಸೆಲ್ಫಿ ಕ್ಯಾಮೆರಾಗಿಂತ ಎರಡು ಪಟ್ಟು ಹೆಚ್ಚಿನ ವಿಶಾಲವಾದ ದೃಶ್ಯ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ವಿಶೇಷ ಸಾಮರ್ಥ್ಯದ 6ಪಿ ಮಸೂರ ‘ಡಿಎಸ್‌ಎಲ್‌ಆರ್’ ಕ್ಯಾಮೆರಾದಂತೆಯೇ ವೃತ್ತಿಪರ ಛಾಯಾಚಿತ್ರದ ಗುಣಮಟ್ಟದ ಚಿತ್ರಗಳನ್ನು ನೀಡುತ್ತದೆ.
ಕ್ಯಾಮೆರಾ ಫ್ರೇಮ್‌ನಲ್ಲಿ ಮೂವರಿಗಿಂತ ಹೆಚ್ಚು ಜನರಿದ್ದರೆ ‘ಗ್ರೂಪ್ ಸೆಲ್ಫಿ’ ಮೋಡ್‌ಗೆ ಬದಲಾಗುತ್ತದೆ. ಅತ್ಯಂತ ಹಗುರ ಮತ್ತು ತೆಳುವಾಗಿದ್ದು, ಒಂದೇ ಸ್ಲಾಟ್‌ನಲ್ಲಿ ಮೂರು ಸಿಮ್ ಕಾರ್ಡ್ ಹಾಕಬಹುದಾಗಿದೆ.
ಕಾರ್ಯಕ್ಷಮತೆ ಸುಧಾರಣೆ: ಹಿಂದಿನ ಎಫ್1ಗಳಿಗೆ ಹೋಲಿಸಿದರೆ ಇದರ ಕಾರ್ಯಕ್ಷಮತೆ ಸುಧಾರಿಸಿದೆ. ಉತ್ತಮ ವೈಡ್-ಆ್ಯಂಗಲ್ ಲೆನ್ಸ್ ಬಳಕೆಯಿಂದಾಗಿ ಕಡಿಮೆ ಬೆಳಕು ಮತ್ತು ರಾತ್ರಿಯಲ್ಲೂ ಹೆಚ್ಚು ಸ್ಪಷ್ಟ ಚಿತ್ರ ಸೆರೆ ಹಿಡಿಯಬಹುದು.
ಒಮ್ಮೆ ಚಾರ್ಜ್ ಮಾಡಿದರೆ 15 ಗಂಟೆಗೂ ಹೆಚ್ಚು ಕಾಲ ಬ್ಯಾಟರಿ ಕೆಲಸ ಮಾಡುತ್ತದೆ. ಹೀಗಾಗಿ ಪ್ರಯಾಣದಲ್ಲಿ ಪವರ್ ಬ್ಯಾಂಕ್ ಜತೆಗೆ ಒಯ್ಯುವ ಇಲ್ಲವೇ ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿಲ್ಲ ಎಂದು ಕಂಪೆನಿ ಹೇಳಿದೆ.
ಮೇ 13 ರಿಂದ ಮಾರಾಟ: ‘ದೇಶದ 25 ನಗರಗಳಲ್ಲಿ ಮೇ 13ರಿಂದ ಒಪೊ ಎಫ್3 ಮಾರಾಟ ಆರಂಭವಾಗಲಿದೆ. ಮೇ 12ರವರೆಗೆ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ’ ಎಂದು ಒಪೊ ಜಾಗತಿಕ ಉಪಾಧ್ಯಕ್ಷ ಸ್ಕೈ ಲಿ ಹೇಳಿದರು.
‘ಆನ್‌ಲೈನ್ ಮೂಲಕ ಫ್ಲಿಪ್‌ಕಾರ್ಟ್ ನಲ್ಲಿ ಮತ್ತು ಆಫ್‌ಲೈನ್‌ನಲ್ಲಿ ಒಪೊ ಮಳಿಗೆಗಳಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಡ್ರಾ ಮೂಲಕ ಆಯ್ಕೆಯಾದ ಮೂವರು ವಿಜೇತರು ಲಂಡನ್‌ನಲ್ಲಿ ನಡೆಯುವ ಐಸಿಸಿ ಫೈನಲ್ಸ್ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ’ ಎಂದರು.
ಸಂಸ್ಥೆಯು ಭಾರತ ಕ್ರಿಕೆಟ್ ತಂಡದ ಅಧಿಕೃತ ಪ್ರಯೋಜಕತ್ವ ಪಡೆದಿದ್ದು, ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಸ್ಕೈ ಲಿ ಟೀಮ್ ಇಂಡಿಯಾ ಜೆರ್ಸಿಯನ್ನು ಬಿಡುಗಡೆ ಮಾಡಿದರು.(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಮುಂಬೈಗೆ ಭೇಟಿ ನೀಡಿದ್ದರು.)
ವೈಶಿಷ್ಟ್ಯಗಳು
* ಪರದೆ: 5.5 ಇಂಚು
* ಮುಂಭಾಗ ಕ್ಯಾಮೆರಾ: 16 ಮತ್ತು 8 ಮೆಗಾಪಿಕ್ಸಲ್
* ಹಿಂದಿನ ಕ್ಯಾಮೆರಾ: 13 ಎಂಪಿ
* ರ್‍್ಯಾಮ್: 4ಜಿಬಿ
* ರೋಮ್: 64 ಜಿ.ಬಿ (128 ಜಿ.ಬಿಯವರೆಗೂ ವಿಸ್ತರಣೆ)
* ಬ್ಯಾಟರಿ: 3200 ಎಂಎಎಚ್
* ಟ್ರಿಬಲ್ ಸ್ಲಾಟ್ ಕಾರ್ಡ್ ಟ್ರೇ
* ಸಾಲಿಡ್-ಸ್ಟೇಟ್ ಫಿಂಗರ್‌ಪ್ರಿಂಟ್ ರೀಡರ್
* ಪಿಡಿಎಎಫ್ ತಂತ್ರಜ್ಞಾನದ ಸ್ನಾಪಿ ಮತ್ತು ಫ್ಲೂಯಿಡ್ ಶೂಟಿಂಗ್
* ಬಿಲ್ಟ್-ಇನ್ ಸ್ಮಾರ್ಟ್ ಫೇಷಿಯಲ್ ರಿಕಗ್ನೇಷನ್
* ಬ್ಯೂಟಿಫಿಕೇಷನ್ ಮೋಡ್
* ಚಿನ್ನದ ಬಣ್ಣದ ಬ್ಯಾಕ್ ಪ್ಯಾನೆಲ್
* ಚಿನ್ನ ಮತ್ತು ತಿಳಿ ಗುಲಾಬಿ ಚಿನ್ನದ ಬಣ್ಣಗಳಲ್ಲಿ ಲಭ್ಯ
* ಬೆಲೆ ₹19,990
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.