ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಮೌಲ್ಯ ತಿಳಿಸುವ ಜನಪದ ಕಲೆ

Last Updated 8 ಮೇ 2017, 7:36 IST
ಅಕ್ಷರ ಗಾತ್ರ
ಮಳವಳ್ಳಿ: ಸರಳ ಪದಗಳನ್ನು ಕಟ್ಟಿ ಜೀವನ ಮೌಲ್ಯ ತಿಳಿಸುವುದೇ ಜನಪದದ ಮೂಲ ಉದ್ದೇಶವಾಗಿದ್ದು, ಮಾಧ್ಯಮಗಳ ಪ್ರಭಾವದಿಂದ ಕಲಿಕೆ ಕಡಿಮೆಯಾಗಿ ಜನಪದ ಕಲೆ ನಶಿಸುತ್ತಿದೆ ಎಂದು ಕವಯತ್ರಿ ಉಷಾ ನಂಜನಗೂಡು ಹೇಳಿದರು.
 
ಪಟ್ಟಣದ ರಾಮರೂಢ ಮಠದ ಆವರಣದಲ್ಲಿ ಭಾನುವಾರ ಕಸ್ತೂರಿ ಸಿರಿಗನ್ನಡ ವೇದಿಕೆ ತಾಲ್ಲೂಕು ಘಟಕ ಆಯೋಜಿಸಿದ್ದ ಜನಪದ ಸಾಹಿತ್ಯ ಕುರಿತು ಉಪನ್ಯಾಸ ಹಾಗೂ ಜನಪದ ಗೀತ ಗಾಯನ ಸಮಾರಂಭದಲ್ಲಿ ಅವರು ಮಾತನಾಡಿದರು.
 
ದೈನಂದಿನ ಬದುಕಿನುದ್ದಕ್ಕೂ ಜನಪದ ಹಾಡಿನ ಮೂಲಕವೇ ಎಚ್ಚರಿಕೆ ಮತ್ತು ಜಾಗೃತಿ ಮೂಡಿಸಲಾಗುತ್ತಿತ್ತು. ಆದರೆ, ಇಂದು ದೃಶ್ಯ ಮಾಧ್ಯಮಗಳು, ಮೊಬೈಲ್‌ ಪ್ರಭಾವದಿಂದಾಗಿ ಜನಪದ ಕಲೆಯನ್ನು ಕಲಿಯುವುದೇ ಕಡಿಮೆಯಾಗುತ್ತಿದೆ. ಜತೆಗೆ ಮಕ್ಕಳಿಗೆ ನೀತಿ ಪಾಠವಾಗಿದ್ದ ಅಜ್ಜಿ ಕಥೆಗಳೇ ಮಾಯವಾಗಿವೆ ಎಂದು ತಿಳಿಸಿದರು.
 
ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಜನಪದ ಕಲೆಯನ್ನು ಪ್ರತಿಯೊಬ್ಬರೂ ಪೋಷಿಸಬೇಕಿದೆ ಎಂದು ತಿಳಿಸಿದರು.
 
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸಪ್ಪ ನೆಲಮಾಕನಹಳ್ಳಿ, ಕಸ್ತೂರಿ ಸಿರಿಗನ್ನಡ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಪಿ.ನಾಗರತ್ನಮ್ಮ, ಪೋತೇರ ಮಹದೇವು, ತಿ.ನರಸೀಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್‌.ಎಲ್‌. ಭರತ್‌ರಾಜ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT