ಮೊಳಗಿತು ಜಲಕಹಳೆ!

7

ಮೊಳಗಿತು ಜಲಕಹಳೆ!

Published:
Updated:
ಮೊಳಗಿತು ಜಲಕಹಳೆ!

ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿ ಸುತ್ತಿದ್ದು ,ಮುಂದೆ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆಯಿದೆ. ಈಗಿನಿಂದಲೇ ಎಚ್ಚೆತ್ತುಕೊಂಡು ಅಂತರ್ಜಲ ಮಟ್ಟ ಹೆಚ್ಚುವಂತೆ ನೋಡಿಕೊಳ್ಳುವ ಜಾಣ ತನ ಪ್ರದರ್ಶಿಸಿದರೆ ಮುಂದೆ ನಿರಾಳವಾಗಿ ಇರಬಹುದು.

ಈ ನಿಟ್ಟಿನಲ್ಲಿ ಕಾರ್ಕಳ ನಗರದ ಸಿಗಡಿಕೆರೆಯ ಹೂಳೆತ್ತುವ ಕೆಲಸವನ್ನು ನಿರಂತರ 21 ದಿನಗಳ ತನಕ ನಡೆಸಲಾ ಯಿತು. ಸರ್ಕಾರದ ಅನುದಾನವಿ ಲ್ಲದೇ ಸಾರ್ವಜನಿಕ ಸಂಘ–ಸಂಸ್ಥೆಗಳ ನೆರವಿನಲ್ಲಿ ಈ ನಿರಂತರ ಪ್ರಕ್ರಿಯೆ ನಡೆದುದು ಮಹತ್ವದ್ದಾ ಗಿತ್ತು. ಸಾರ್ವಜನಿಕರ ಸಹಭಾಗಿ ತ್ವದಿಂದ ಮಾತ್ರ ಮಹತ್ವದ ಕಾರ್ಯಗಳು ಫಲಪ್ರದ ವಾಗಬಲ್ಲವು ಎನ್ನುವುದಕ್ಕೆ ಇದು ನಿದರ್ಶನವೆನಿಸಿದೆ. 

ಆರು ಎಕರೆಯಷ್ಟು ವಿಸ್ತೀರ್ಣವಾದ ಸಿಗಡಿಕೆರೆಯನ್ನು 1454ರಲ್ಲಿ ಆಳ್ವಿಕೆ ನೆಡಸಿದ ಭೈರವ ಅರಸ ರಾಜಪಾಂಡ್ಯ  ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಿದ ಎನ್ನು ವುದನ್ನು ಇತಿಹಾಸ ತಿಳಿಸುತ್ತದೆ. ಆದರೆ, ಕಾಲಕ್ರಮೇಣ ಜಲಾಶಯಗಳು ಜನರ ನಿರ್ಲ ಕ್ಷ್ಯಕ್ಕೆ ಒಳಗಾಗಿ, ಸಮಯ ಸಾಧಕರ ಒತ್ತುವ ರಿಗೆ ಒಳಗಾಗಿ, ಊರವರ ನಿರ್ಲಕ್ಷ್ಯ ದಿಂದ ಹೂಳು ತುಂಬಿಕೊಳ್ಳುತ್ತಾ ಅವಗಣ ನೆಗೆ ಕಾರಣವಾಯಿತು.

23 ವರ್ಷಗಳ ಹಿಂದೆ ಈ ಕೆರೆಯನ್ನು ಬಸ್ ನಿಲ್ದಾಣವನ್ನಾಗಿ ಬಳಸಿಕೊ ಳ್ಳಲು ಪುರಸಭೆ ನಿರ್ಧರಿಸಿತ್ತು. ಆಗ ಕಡಲ ತಡಿಯ ಭಾರ್ಗವರೆನಿಸಿದ ಡಾ.ಶಿವರಾಮ ಕಾರಂತರು ಅದನ್ನು ವಿರೋಧಿಸಿ ಪತ್ರಿಕೆಯಲ್ಲಿ ಲೇಖನ ಬರೆದು ಪಾರಂಪರಿಕ ಹಾಗೂ ಅಂತ ರ್ಜಲದ ಮೂಲವಾದ ಈ ಕೆರೆಯನ್ನು ಸ್ವಾರ್ಥಕ್ಕಾಗಿ ಬಳಸದಂತೆ ಎಚ್ಚರಿಕೆಯ ಚಾಟಿ ಬೀಸಿದ್ದರು. ಹೀಗಾಗಿ ಆ ಯೋಜನೆ ಅಲ್ಲೇ ಸ್ಥಗಿತಗೊಂಡಿತ್ತು.

ಜಾಗೃತ ಜನರು ಸಂಘಟಿತರಾಗಿ ಜಲಾಶ್ರಯಗಳ ರಕ್ಷಣೆಯನ್ನು ಮಾಡಿ ಕೊಂಡಾಗ ಊರಿಗೆ, ನಾಡಿಗೆ, ಮುಂದಿನ ಪೀಳೀಗೆಗೆ, ಜಲಚರ, ಪ್ರಾಣಿ ಪಕ್ಷಿಗಳಿಗೆ ಒಳಿತಾಗುತ್ತದೆ. ಈ ಕೆರೆಯನ್ನು ನಗರದ ಸಂಘ ಸಂಸ್ಥೆಗಳು ಮುಂದೆ ಬಂದು ಹತ್ತಾರು ಎಡರು ತೊಡರುಗಳನ್ನು ಎದುರಿಸಿ ಪಕ್ಷಿ ಧಾಮವನ್ನಾಗಿಸಲು, ಜೀವ ವೈವಿಧ್ಯದ ರಕ್ಷಣಾ ತಾಣವಾಗಿ ಕಾಪಾಡಲು ಪ್ರಯತ್ನಿಸಿದ್ದಿದೆ.   

ಆದರೆ, ಇತ್ತೀಚಿನ ದಿನಗಳಲ್ಲಿ ಮಳೆಯ ನೀರಿನ ಪ್ರಮಾಣದಲ್ಲಾಗುತ್ತಿರುವ ಕುಸಿತ, ಏರುತ್ತಿರುವ ಭೂಮಿಯ ಶಾಖದ ಪರಿಣಾಮ, ಉಲ್ಬಣವಾಗುತ್ತಿರುವ ನೀರಿನ ಸಮಸ್ಯೆಗಳು ನೀರಿನ ಆಶ್ರಯಗಳ ಕುರಿತು ಚಿಂತಿಸುವಂತೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದು ಆಶಾದಾಯಕ ಬೆಳವಣಿಗೆ. ತಹಶೀಲ್ದಾರ್‌ ಗುರುಪ್ರಸಾದ್ ಟಿ.ಎಸ್. ಅವರ ಚಿಂತನೆಯನ್ನು

ಕಾರ್ಯರೂಪಕ್ಕೆ ತರಲು ಟೊಂಕ ಕಟ್ಟಿ ನಿಂತವರು ಶಾಸಕ ವಿ.ಸುನೀಲ್ ಕುಮಾರ್. ನಗರದ ಹತ್ತಾರು ಸಂಘಸಂಸ್ಥೆಗಳ ನೇತಾರ ರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಏಪ್ರಿಲ್ 28ರಿಂದ ಸಿಗಡಿಕೆರೆಯ ಹೂಳೆತ್ತುವಿ ಕೆಗೆ ಚಾಲನೆ ನೀಡ ಲಾಯಿತು. ಇದಕ್ಕೆ ಸಾರ್ವಜನಿಕರಿಂದ ಅಭೂ ತಪೂರ್ವ ಸಹಕಾರವೂ ದೊರಕಿತು.

ಪರಿಸರದ ಜೈನಧರ್ಮ ಜೀರ್ಣೋದ್ಧಾ ರಕ ಸಂಘ, ಸನ್ಮಿತ್ರ ಜೈನ್ ಅಸೋಸಿಯೇಶನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅವಿ ಭಜಿತ ದ.ಕ. ಜೈನ ಯುವ ಜನ ವೇದಿಕೆ, ರೋಟರಿ ಕ್ಲಬ್, ಭಾರತೀಯ ಜೈನ್ ಮಿಲನ್, ಕಾರ್ಕಳ ತಾಲ್ಲೂಕು ಕೃಷಿಕ ಸಮಾಜ, ವಿಕಾಸ ಸೇವಾ ಸಂಸ್ಥೆ, ಕರ್ನಾಟಕ ರಾಜ್ಯ ಜೈನ ಸ್ವಯಂ ಸೇವಕರ ಸಂಘ ಹಾಗೂ ಜೆಸಿಐ ಸಂಘಟನೆಗಳು ಶಾಸಕರ ನೇತೃತ್ವದ ಕಾಯ ಕಕ್ಕೆ ಕೈ ಜೋಡಿಸಿದವು.

ತಾಲ್ಲೂಕಿನ ಉದ್ಯ ಮಿಗಳು, ದಾನಿ ಗಳು, ಸಣ್ಣಪುಟ್ಟ ವ್ಯಾಪಾರ ಸ್ಥರು, ರಿಕ್ಷಾ ಚಾಲಕ ಮಾಲೀಕರು ಮತ್ತೂ ಹೇಳಬೆಕೆಂದರೆ ಕ್ರಿಕೆಟ್ ಆಡುವ ಮಕ್ಕಳೂ ಕೂಡ ತಾವು ಬಹುಮಾನ ಪಡೆದ ಮೊತ್ತ ವನ್ನು ಕೆರೆಯ ಕಾರ್ಯಕ್ಕೆ  ನೀಡಿದರು. ಎಲ್ಲರೂ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದರಿಂದ ಈ ಕಾರ್ಯ ನಿರಂತರ 24 ದಿನ ನಡೆಯಲು ಸಾಧ್ಯವಾಯಿತು. ಅಷ್ಟೂ ದಿನಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಈ ಕಾರ್ಯ ದಲ್ಲಿ ತಮ್ಮನ್ನು  ಪೂರ್ಣವಾಗಿ ತೊಡಗಿಸಿಕೊಂ ಡವರೆಂದರೆ ಪಾರ್ಶ್ವನಾಥ ವರ್ಮ, ನಿರಂಜನ ಜೈನ್, ಶಿವರಾಜ ಜೈನ್, ಲೋಹಿತ್ ಜೈನ್, ಅಶೋಕ ಎಚ್.ಎಂ. ಮತ್ತು ಜಗದೀಶ ಆಚಾರ್.

ಸಿಗಡಿಕೆರೆಯ ಹೂಳನ್ನು ಎಷ್ಟು ಸಾಧ್ಯವೋ ಅಷ್ಟನ್ನೂ ಹೊರತೆಗೆಯಲಾಗಿದೆ. ಈ ಉದ್ದೇಶಕ್ಕಾಗಿ ಪ್ರತಿದಿನ 20 ಟಿಪ್ಪರ್, 2 ಜೆಸಿಬಿ. 5 ಹಿಟಾಚಿ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು 1,180 ಗಂಟೆಗಳಷ್ಟು ಹೂಳೆತ್ತುವ ಕಾರ್ಯ ನಡೆದಿದೆ. ಒಟ್ಟು 3,888 ಲೋಡ್‌ನಷ್ಟು ಹೂಳನ್ನು ಹೊರ ತೆಗೆಯಲಾ ಗಿದೆ. ಕೆರೆಯಲ್ಲಿ ಕೆಲವೆಡೆ ಕಲ್ಲು ಸಿಕ್ಕಿದೆ. ಉಳಿದೆಡೆ ಸರಾಸರಿ ಸುಮಾರು 7 ಅಡಿಗ ಳಷ್ಟು ಆಳದ ತನಕ ಹೂಳೆತ್ತಲಾಗಿದೆ.

ಈ ಕಾಮಗಾರಿಗೆ ದಿನ ವೊಂದಕ್ಕೆ ಸರಾಸರಿ ₹60 ಸಾವಿರ ವೆಚ್ಚ ತಗಲಿದೆ. ಈ ಮಧ್ಯೆ ಇಲಾಖೆಯ ನೆರವಿನಿಂದ ಕೆರೆಯ ಒತ್ತುವರಿ ಮಾಡಿಕೊಂ ಡವರಿಂದ ತೆರವುಗೊ ಳಿಸುವ ಕೆಲಸವನ್ನೂ ನಡೆಸಿ, ಕೆರೆಯ ವಿಸ್ತೀ ರ್ಣವನ್ನು ಕಾಪಾಡಿ ಕೊಳ್ಳಲಾ ಗಿದೆ. ಹೂಳೆತ್ತಿದ ಕೆರೆಯ ಮಣ್ಣನ್ನು ಅಗತ್ಯವಿ ರುವವ ರೈತರಿಗೆ ನೀಡಿ ಅವರು ನೀಡಿದ ಗೌರವ ಧನವನ್ನು ಖರ್ಚಿಗೆ ಬಳಸಿ ಕೊಳ್ಳಲಾಗಿದೆ.

ಇಲ್ಲಿಗೆ ಕೆಲಸ ಮುಗಿಯಲಿಲ್ಲ ಎನ್ನುವ ಶಾಸಕ ವಿ.ಸುನೀಲ್ ಕುಮಾರ್, ‘ಕೆರೆಯಲ್ಲಿ ನೀರು ತುಂಬಿ ಸುತ್ತಲಿನ ಮಣ್ಣು ಕುಸಿದು ನೀರು ಪೋಲಾಗದಂತೆ ಮಳೆಗಾಲ ಆರಂಭ ವಾಗುವ ಹೊತ್ತಿಗೆ ಕೆರೆಯ ಸುತ್ತ ಐದು ಸಾವಿರ ಲಾವಂಚದ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ನಂತರ ಕೆರೆಗೆ ತಡೆಬೇಲಿ ನಿರ್ಮಾಣ ನಡೆಸಲಾಗುತ್ತದೆ’ ಎನ್ನುತ್ತಾರೆ.

ಈ ಕೆರೆಯ ಕಾಮಗಾರಿಯಿಂದಾಗಿ ತಾಲ್ಲೂಕಿನ ಅನೇಕ ಕಡೆ ನಮ್ಮೂರಿನ ಕೆರೆಗಳನ್ನು ರಕ್ಷಿಸಿಕೊಳ್ಳಬೇಕು ಎಂಬ ಜಾಗೃತಿ ಮೂಡಿದೆ. ತಾಲ್ಲೂಕಿನ ಇನ್ನಾ ಗ್ರಾಮದಲ್ಲಿ ಎರಡು ಕೆರೆಗಳ ಹೂಳೆತ್ತುವಿಕೆ ಮತ್ತು ಸಾಣೂರು, ಶಿವಪುರ ಗ್ರಾಮಗಳ ಕೆರೆಗಳ ಹೂಳೆತ್ತುವಿಕೆಗೂ ಜನ ಮುಂದಾಗಿದ್ದಾರೆ. ನಂದಳಿಕೆಯ ಕೃಷ್ಣ ಶೆಟ್ಟಿ ಎನ್ನುವವರು ತಾವಾಗಿ ತಮ್ಮೂರಿನ ಕೆರೆಯ ಹೂಳೆತ್ತುವಿಕೆ ನಡೆಸಬೇಕೆಂಬ ಹಂಬಲ ತೋರಿದ್ದಾರೆ. ಇನ್ನು ಮೂರು ವರ್ಷಗಳಲ್ಲಿ ತಾಲ್ಲೂಕಿನ 180 ಪಾರಂಪರಿಕ ಕೆರೆಗಳ ಹೂಳೆತ್ತುವಿಕೆ ನಡೆಸ ಬೇಕು ಎನ್ನುವುದಕ್ಕೆ ಯೋಜನೆ ನಡೆಯು ತ್ತಿದೆ. ಸಿಗಡಿಕೆರೆಯ ಕಾಯಕಲ್ಪ ಯಾವುದೇ ಪಕ್ಷ, ಜಾತಿಗಳ ಭೇದವಿಲ್ಲದೆ ಎಲ್ಲರನ್ನೂ ತೊಡಗಿಸಿಕೊಂಡ ಸಾರ್ಥಕವಾದ, ಮಾದರಿಯಾದ ಪ್ರಯತ್ನವೆನಿಸಿದೆ.

ಸಿದ್ಧಾಪುರ ವಾಸುದೇವ ಭಟ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry